ಭಾನುವಾರ, ಜೂನ್ 15, 2025
HomeSportsCommonwealth Games : ಬೆಂಗಳೂರಲ್ಲಿ ವಿಘ್ನವಿನಾಯಕನಿಗೆ ನಮಿಸಿ ಇಂಗ್ಲೆಂಡ್‌ಗೆ ಹೊರಟ ಭಾರತ ಹಾಕಿ ತಂಡ

Commonwealth Games : ಬೆಂಗಳೂರಲ್ಲಿ ವಿಘ್ನವಿನಾಯಕನಿಗೆ ನಮಿಸಿ ಇಂಗ್ಲೆಂಡ್‌ಗೆ ಹೊರಟ ಭಾರತ ಹಾಕಿ ತಂಡ

- Advertisement -

ಬೆಂಗಳೂರು: ಇದೇ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ Commonwealth Games ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತ ಹಾಕಿ ತಂಡ ಇಂಗ್ಲೆಂಡ್’ನ ಬರ್ಮಿಂಗ್’ಹ್ಯಾಮ್’ ಗೆ ಪ್ರಯಾಣ ಬೆಳೆಸಿದೆ. ಅನುಭವೀ ಆಟಗಾರ ಮನ್’ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ, Commonwealth Gamesನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದೆ. Commonwealth Gamesಗೆ ಪೂರ್ವಭಾವಿಯಾಗಿ ಭಾರತ ಹಾಕಿ ತಂಡದ ಆಟಗಾರರು ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ದಲ್ಲಿ (sports authority of india – SAI) ವಿಶೇಷ ತರಬೇತಿ ಶಿಬಿರ ನಡೆಸಿದ್ದಾರೆ. ಇಂಗ್ಲೆಂಡ್”ಗೆ ತೆರಳುವ ಮುನ್ನ ಸಾಯ್ ವ್ಯಾಪ್ತಿಯಲ್ಲೇ ಇರುವ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಮ್ ಇಂಡಿಯಾ ಹಾಕಿ ಆಟಗಾರರು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗಣೇಶ ಗುಡಿಯ ಅರ್ಚಕರು Commonwealth Gamesನಲ್ಲಿ ಭಾರತ ಹಾಕಿ ತಂಡದ ಯಶಸ್ಸಿಗಾಗಿ ವಿಶೇಷ ಪೂಜೆ ನಡೆಸಿಕೊಟ್ಟರು. ಹಾಕಿ ತಂಡ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರವನ್ನು ತಂಡದ ಅನುಭವಿ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಟ್ವಿಟರ್’ನಲ್ಲಿ ಪ್ರಕಟಿಸಿದ್ದಾರೆ.

ಆಗಸ್ಟ್ 1ರಂದು ಬರ್ಮಿಂಗ್’ಹ್ಯಾಮ್’ನ ಯುನಿವರ್ಸಿಟಿ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ತಂಡ ಇಂಗ್ಲೆಂಡ್, ಕೆನಡಾ, ಘಾನಾ ಮತ್ತು ವೇಲ್ಸ್ ತಂಡಗಳ ಜೊತೆ ಪೂಲ್ ‘ಬಿ’ನಲ್ಲಿ ಸ್ಥಾನ ಪಡೆದಿದೆ.

Commonwealth Gamesನಲ್ಲಿ ಆಡಲಿರುವ ಭಾರತ ಹಾಕಿ ತಂಡ:
ಮನ್’ಪ್ರೀತ್ ಸಿಂಗ್ (ನಾಯಕ), ಹರ್ಮನ್’ಪ್ರೀತ್ ಸಿಂಗ್ (ಉಪನಾಯಕ), ಪಿ.ಆರ್ ಶ್ರೀಜೇಶ್, ಕೃಷ್ಣನ್ ಬಹದ್ದೂರ್ ಪಾಠಕ್, ವರುಣ್ ಕುಮಾರ್, ಸುರೇಂದ್ರ ಕುಮಾರ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್, ಜರ್ಮನ್’ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಶಮ್ಶೀರ್ ಸಿಂಗ್, ಆಕಾಶ್’ದೀಪ್ ಸಿಂಗ್, ನೀಲಕಂಠ ಶರ್ಮಾ, ಮನ್’ದೀಪ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್.

ಇದನ್ನೂ ಓದಿ : KL Rahul Health Report : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ ರಾಹುಲ್ ?

ಇದನ್ನೂ ಓದಿ : T20 World Cup 2022 India : ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಾಡಲಿದೆ ಟೀಮ್ ಇಂಡಿಯಾ

Commonwealth Games Indian hockey team left for England after bowing to Vinayaka Temple in Bangalore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular