ಸೋಮವಾರ, ಏಪ್ರಿಲ್ 28, 2025
HomeSportsAB de Villiers : IPL ಸೇರಿ ಎಲ್ಲಾ ಮಾದರಿಯ ವೃತ್ತಿ ಬದುಕಿಗೆ ವಿದಾಯ ಹೇಳಿದ...

AB de Villiers : IPL ಸೇರಿ ಎಲ್ಲಾ ಮಾದರಿಯ ವೃತ್ತಿ ಬದುಕಿಗೆ ವಿದಾಯ ಹೇಳಿದ ಎಬಿ ಡಿವಿಲಿಯರ್ಸ್‌

- Advertisement -

ದಕ್ಷಿಣ ಆಫ್ರಿಕಾ ತಂಡದ ಸೂಪರ್‌ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್‌ ( AB de Villiers ) ಇದೀಗ ಐಪಿಎಲ್‌ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‌ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಈ ಕುರಿತು ತಮ್ಮ ಟ್ವೀಟರ್‌ ಖಾತೆಯಲ್ಲಿ ಎಬಿಡಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸುಮಾರು 14 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಎಬಿಡಿ 114 ಟೆಸ್ಟ್‌ಗಳಿಂದ 50.66 ಸರಾಸರಿಯಲ್ಲಿ 8,765 ರನ್‌ ಗಳನ್ನು ಒಟ್ಟು ಗೂಡಿಸಿದ್ದಾರೆ. ಇದುವರೆಗೆ ಒಟ್ಟು 22 ಶತಕಗಳನ್ನು ಸಿಡಿಸಿರುವ ಎಡಿಬಿ ಅತ್ಯಧಿಕ 278 ರನ್‌ ಗಳಿಸಿದ್ದಾರೆ. ಅಲ್ದಲೇ ಏಕದಿನ ಸರಣಿಯಲ್ಲಿ ಒಟ್ಟು 25 ಶತಕ ಮತ್ತು 53 ಅರ್ಧಶತಕಗಳನ್ನುಸಿಡಿಸಿದ್ದು ಒಟ್ಟು 53.50 ರ ಸರಾಸರಿಯಲ್ಲಿ 9,577 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೇ ಇದುವರೆಗೆ ಒಟ್ಟು 78 T20 ಪಂದ್ಯಗಳ ಮೂಲಕ 1,672 ರನ್ ಗಳಿಸಿದ್ದಾರೆ.

360 ಡಿಗ್ರಿ ಶಾಟ್‌ ಮೂಲಕವೇ ಖ್ಯಾತಿಯನ್ನು ಪಡೆದುಕೊಂಡಿರುವ ಎಬಿ ಡಿವಿಲಿಯರ್ಸ್‌ ಟೆಸ್ಟ್‌ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಟೆಸ್ಟ್‌ ಪಂದ್ಯದ ವೇಗದ ಶತಕ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಇನ್ನು ಏಕದಿನ ಪಂದ್ಯದಲ್ಲಿ ಕೇವಲ 16 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಎಬಿ ಡಿವಿಲಿಯರ್ಸ್‌ ಮೇ 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಡಿವಿಲಿಯರ್ಸ್ ನಾಯಕತ್ವದಲ್ಲಿ, ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದಲಲಿ ಸೆಮಿಫೈನಲ್‌ ಪ್ರವೇಶಿಸಿತ್ತು. ಆದರೆ ನ್ಯೂಜಿಲೆಂಡ್‌ ವಿರುದ್ದದ ಪಂದ್ಯದಲ್ಲಿ ಸೋಲನ್ನು ಕಂಡು ನಿರಾಸೆ ಅನುಭವಿಸಿತ್ತು. ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದರೂ ಕೂಡ ಎಬಿಡಿ ಐಪಿಎಲ್‌ ಪಂದ್ಯಾವಳಿಯಲ್ಲಿ ಕಾಣಿಸಿಕೊಂಡಿದ್ದರು. ರಾಯಲ್‌ ಚಾಲೆಂಜರ್ಸ್‌ ತಂಡದ ಪ್ರಮುಖ ಆಟಗಾರನಾಗಿರುವ ಎಡಿಬಿ ಹಲವು ವರ್ಷಗಳಿಂದಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇದನ್ನೂ ಓದಿ : SMA T20 Karnataka win : ಬಂಗಾಳ ವಿರುದ್ದ ಸೂಪರ್‌ ಓವರ್‌ನಲ್ಲಿ ಗೆದ್ದಕರ್ನಾಟಕ ಸೆಮಿಫೈನಲ್‌ಗೆ ಎಂಟ್ರಿ

ಇದನ್ನೂ ಓದಿ : AB de Villiers : ಐಪಿಎಲ್‌ ಅಭ್ಯಾಸ ಪಂದ್ಯದಲ್ಲಿ ಎಬಿಡಿ ಅಬ್ಬರ : ಮೈದಾನದ ಹೊರಗೆ ಸಿಡಿದ ಸಿಕ್ಸರ್‌

(AB de Villiers announces retirement from all forms of cricket including IPL )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular