ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್‌ನ ೫೦ನೇ ಪಂದ್ಯದಲ್ಲಿ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಡೆಲ್ಲಿ ಅಗ್ರಸ್ಥಾನಕ್ಕೇರಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಡೆಲ್ಲಿಯ ಆಟಗಾರರು ಆರಂಭದಲ್ಲಿಯೇ ಆಘಾತ ನೀಡಿದ್ದರು. ಅದ್ಬುತ ಫಾರ್ಮ್‌ನಲ್ಲಿರುವ ಫಾಲ್ ಡುಪ್ಲಸಿಸ್ ಹಾಗೂ ರುತುರಾಜ್ ಗಾಯಕ್‌ವಾಡ್ ಬೃಹತ್ ಜೊತೆಯಾಟ ನೀಡುವಲ್ಲಿ ವಿಫಲರಾಗಿದ್ದಾರೆ. ಚೆನ್ನೈ ತಂಡ 28 ರನ್ ಗಳಿಸಿದ್ದಾಗಲೇ ಡುಪ್ಲಸಿಸ್ ಔಟಾದ್ರು. ನಂತರ ರಾಬಿನ್ ಉತ್ತಪ್ಪ ಜೊತೆಗೆ ಆಟಕ್ಕಿಳಿದ ರುತುರಾಜ್ ಗಾಯಕ್ವಾಡ್ ಕೇವಲ 13 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆಯನ್ನು ಅನುಭವಿಸಿದ್ದರು. ಭರವಸೆಯ ಆಲ್‌ರೌಂಡರ್ ಮೊಯಿನ್ ಆಲಿ ಆಟ 5ಕ್ಕೆ ಸ್ಥಗಿತವಾಗಿದ್ರೆ ಅಂಬಟಿ ರಾಯಡು ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.

ರಾಬಿನ್ ಉತ್ತಪ್ಪ ಹಾಗೂ ಮಹೇಂದ್ರ ಸಿಂಗ್ ಧೋನಿ ಜೊತೆಗೆಯಲ್ಲಿ ಉತ್ತಮ ಜೊತೆಯಾಟ ನೀಡಿದ ಅಂಬಟಿ ರಾಯಡು ಭರ್ಜರಿ ಅರ್ಧಶತಕ ಸಿಡಿಸಿದ್ದಾರೆ. ಚೆನ್ನೈ ತಂಡಕ್ಕೆ ಅಕ್ಸರ್ ಪಟೇಲ್ ಮಾರಕವಾಗಿ ಕಾಡಿದ್ದಾರೆ. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 136 ರನ್‌ಗಳಿಗೆ ಇನ್ಸಿಂಗ್ ಅಂತ್ಯಗೊಳಿಸಿತ್ತು. ಡೆಲ್ಲಿಪರ ಅಕ್ಷರ್ ಪಟೇಲ್ 2, ನಿಟ್ರೋಜಿ, ಆವೇಶ್ ಖಾನ್, ಆರ್.ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ನಂತರ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭಿಕರಾದ ಪ್ರಥ್ವಿಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದ್ರು. ಆದರೆ ಪ್ರಥ್ವಿ ಶಾ 18 ರನ್ ಗಳಿಸಿ ಔಟಾದ್ರೆ ನಂತರ ಬಂದ ಶ್ರೇಯಸ್ ಅಯ್ಯರ್ ಕೇವಲ 2 ರನ್ ಗಳಿಸಿ ಫೆವಿಲಿಯನ್ ಹಾದಿ ಹಿಡಿದ್ರು. ಶಿಖರ್ ಧವನ್, ರಿಷಬ್ ಪಂತ್, ಪಿಪ್ಪಲ್ ಪಟೇಲ್ ಉತ್ತಮ ಆಟವಾಡಿದ್ರು. ಅಂತಿಮವಾಗಿ ಶಿಮ್ರೋನ್ ಹೆಟ್ಮಯರ್ 28 ರನ್ ಆಟದ ನೆರವಿನಿಂದ ಡೆಲ್ಲಿ ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.
ಇದನ್ನೂ ಓದಿ : ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಶ್ರೀಶಾಂತ್
ಇದನ್ನೂ ಓದಿ : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್
ಸಂಕ್ಷಿಪ್ತ ಸ್ಕೋರ್ :
ಚೆನ್ನೈ ಸೂಪರ್ ಕಿಂಗ್ಸ್ : ಅಂಬಟಿ ರಾಯಡು 55 , ರಾಬಿನ್ ಉತ್ತಪ್ಪ 19, ಎಂ.ಎಸ್. ಧೋನಿ 18 , ರುತುರಾಜ್ ಗಾಯಕ್ವಾಡ್ 13, ಫೌಲ್ ಡುಪ್ಲಸಿಸ್ 10, ಅಕ್ಷರ್ ಪಟೇಲ್ 18/2
ಡೆಲ್ಲಿ ಕ್ಯಾಪಿಟಲ್ಸ್ : ಶಿಖರ್ ಧವನ್ 39, ಶಿಮ್ರೋನ್ ಹೆಟ್ಮಯರ್ 28, ಪ್ರಥ್ವಿಶಾ 18 , ರಿಪ್ಪಲ್ ಪಟೇಲ್ 28, ರಿಷಬ್ ಪಂತ್ 15, ರವೀಂದ್ರ ಜಡೇಜಾ 28/2, ಶಾರ್ದೂಲ್ ಠಾಕೂರ್ 13/2