ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ (IPL 2021)ನ ಮೊದಲ ಕ್ವಾಲಿಫೈಯರ್ ಪಂದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿದೆ. ಗುರು ಧೋನಿ, ಶಿಷ್ಯ ಪಂತ್ ಬಳಗದ ನಡುವಿನ ಕಾಳಗ ರೋಚಕವಾಗಿರುವುದರಲ್ಲಿ ಅನುಮಾನವಿಲ್ಲ. ಗೆದ್ದ ತಂಡ ನೇರವಾಗಿ ಫೈನಲ್‌ಗೆ ಎಂಟ್ರಿ ಕೊಟ್ರೆ, ಸೋತವರಿಗೆ ಮತ್ತೊಂದು ಅವಕಾಶ ದೊರೆಯಲಿದೆ.

ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯವನ್ನು ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಎಂಟ್ರಿಯನ್ನು ಕೊಡಲಿದೆ. ಆದರೆ ಸೋತ ತಂಡ ದ್ವಿತೀಯ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ. ಈಗಾಗಲೇ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಜಯಗಳಿಸುವ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಪ್ರಸಕ್ತ ಋತುವಿನ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ತಂಡ ಚೆನ್ನೈ ವಿರುದ್ದ ಭರ್ಜರಿ ಗೆಲುವನ್ನು ದಾಖಲಿಸಿತ್ತು. ಈ ಬಾರಿ ಡೆಲ್ಲಿ ತಂಡ ಬಲಿಷ್ಠವಾಗಿದೆ. ದೇಶೀಯ ಆಟಗಾರರಾದ ನಾಯಕ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಪ್ರಥ್ವಿಶಾ, ಶಿಖರ್ ಧವನ್ ಅದ್ಬುತ ಫಾರ್ಮ್‌ನಲ್ಲಿದ್ದಾರೆ, ಆವೇಶಾ ಖಾನ್, ಕಗಿಸೋ ರಬಾಡಾ ಹಾಗೂ ನೊಟ್ರೋಜೆ ಅದ್ಬುತ ಬೌಲಿಂಗ್ ಮಾಡುತ್ತಿದ್ದಾರೆ. ಸ್ಪಿನ್ನರ್ ಅಕ್ಷರ ಪಟೇಲ್ ಹಾಗೂ ಆರ್.ಅಶ್ವಿನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ಹೆಟ್ಮಯರ್ ಹಾಗೂ ಸ್ಟೋನಿಸ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ.

ಇನ್ನೊಂದೆಡೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಬಲಿಷ್ಠವಾಗಿದೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವ ತಂಡಕ್ಕೆ ಫ್ಲಸ್ ಪಾಯಿಂಟ್. ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಅನುಭವದ ಜೊತೆಗೆ ಬ್ಯಾಟಿಂಗ್ ನಿಂದಲೂ ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಡುಪ್ಲಸಿ ಅದ್ಬುತ ಫಾರ್ಮ್‌ನಲ್ಲಿದ್ದು, ತಂಡ ಬೃಹತ್ ಮೊತ್ತಕ್ಕೇರಲು ಸಹಕರಿಸುತ್ತಿದ್ದಾರೆ. ಮೋಯಿನ್ ಆಲಿ, ಅಂಬಟಿ ರಾಯಡು, ಸುರೇಶ್ ರೈನಾ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಅನುಭವಿ ಡ್ವೇನ್ ಸ್ಮಿತ್, ರವೀಂದ್ರ ಜಡೆಜಾ, ಶಾರ್ದೂಲ್ ಠಾಕೂರು ಹಾಗೂ ದೀಪಕ್ ಚಹರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಆರ್ಭಟಿಸುತ್ತಿದ್ದಾರೆ. ಜೊತೆಗೆ ಜೋಸ್ ಹಜಲ್‌ವುಡ್ ಎದುರಾಳಿಗಳನ್ನು ಬೌಲಿಂಗ್‌ನಿಂದಲೇ ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಡೆಲ್ಲಿ ಹಾಗೂ ಚೆನ್ನೂ ಸೂಪರ್ ಕಿಂಗ್ಸ್ ತಂಡಗಳು ಬಲಾಡ್ಯವಾಗಿದ್ದು, ಎರಡೂ ತಂಡಗಳು ಗೆಲ್ಲುವ ಸಾಮರ್ಥ್ಯವನ್ನು ಹೊಂದಿವೆ. ಮೊದಲು ಬ್ಯಾಟಿಂಗ್ ನಡೆಸುವ ತಂಡ ಗೆಲುವನ್ನು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ. ಹಿಂದಿನ ಅಂಕಿಅಂಶಗಳನ್ನು ನೋಡಿದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂದ್ಯ ಗೆಲ್ಲುವ ಫೇವರೇಟ್ ತಂಡವಾಗಿದ್ರೆ, ಪ್ರಸಕ್ತ ಸಾಲಿನ ಡೆಲ್ಲಿ ತಂಡವನ್ನು ನೋಡಿದ್ರೆ ಚೆನ್ನೈಗೆ ಪ್ರಬಲ ಪೈಪೋಟಿಯೊಡ್ಡುವುದು ಗ್ಯಾರಂಟಿ.

ಪಿಚ್ ರಿಪೋರ್ಟ್ : ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನ ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವಾಗಲಿದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡ 160ಕ್ಕಿಂತ ಅಧಿಕ ರನ್ ಗಳಿಸಿದ್ರೂ ಕೂಡ ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ರನ್ ಚೇಸ್ ಮಾಡುವುದು ಕಷ್ಟ ಸಾಧ್ಯ. ಪಿಚ್ ವೇಗಿಗಳಿಗೆ ಹೆಚ್ಚು ನೆರವಾಗಲಿದೆ.
ಸಂಭಾವ್ಯ ತಂಡ :
ಡೆಲ್ಲಿ ಕ್ಯಾಪಿಟಲ್ಸ್ : ಪ್ರಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್, ರಿಷಬ್ ಪಂಥ್ ( ನಾಯಕ), ಮಾರ್ಕಸ್ ಸ್ಟೋನಿಸ್, ಶಿಮ್ರಾನ್ ಹೆಟ್ಮಯರ್, ಅಕ್ಷರ್ ಪಟೇರ್, ರವಿಚಂದ್ರನ್ ಅಶ್ವಿನ್, ಕಗಿಸೋ ರಬಾಡಾ, ಆವೇಶ್ ಖಾನ್, ಅನ್‌ರಿಚ್ ನೋರ್ಟಜೆ.
ಚೆನ್ನೈ ಸೂಪರ್ ಕಿಂಗ್ಸ್ : ರುತುರಾಜ್ ಗಾಯಕ್ವಾಡ್, ಫೌಲ್ ಡು ಪ್ಲಸಿಸ್, ಮೊಯಿನ್ ಆಲಿ, ಅಂಬಟಿ ರಾಯಡು, ಸುರೇಶ್ ರೈನಾ, ಎಮ್.ಎಸ್.ಧೋನಿ ( ನಾಯಕ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹಜಲ್‌ವುಡ್.
ಡ್ರೀಮ್ 11 ತಂಡ ( Dream11 Predictions) :
ವಿಕೆಟ್ ಕೀಪರ್ : ರಿಶಬ್ ಪಂತ್, ಬ್ಯಾಟ್ಸಮನ್ : ಫೌಲ್ ಡುಪ್ಲಸೀಸ್,ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ಪ್ರಥ್ವಿಶಾ / ಶ್ರೇಯಸ್ ಅಯ್ಯರ್ ), ಆಲ್‌ರೌಂಡರ್ : ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಅಕ್ಸರ್ ಪಟೇಲ್, ಬೌಲರ್ : ಶಾರ್ದೂಲ್ ಠಾಕೂರ್, ಕಗಿಸೋ ರಬಾಡಾ, ಆವೇಶ್ ಖಾನ್
( DC vs CSK IPL 2021 Qualifier 1 Dream11 Prediction, today match playing XI, Fantasy tips )