ಬುಧವಾರ, ಏಪ್ರಿಲ್ 30, 2025
HomeSportsShikhar Dhavan : ಶಿಖರ್‌ ಧವನ್‌ ಗೆ ಇನ್ನೂ ಮುಗಿದಿಲ್ಲ ಟೀಂ ಇಂಡಿಯಾದಲ್ಲಿ ಅವಕಾಶ

Shikhar Dhavan : ಶಿಖರ್‌ ಧವನ್‌ ಗೆ ಇನ್ನೂ ಮುಗಿದಿಲ್ಲ ಟೀಂ ಇಂಡಿಯಾದಲ್ಲಿ ಅವಕಾಶ

- Advertisement -

ಮುಂಬೈ : ಟಿ 20 ವಿಶ್ವಕಪ್‌ಗೆ ಬಿಸಿಸಿಐ ಬುಧವಾರ ಭಾರತ ತಂಡವನ್ನು ಅಂತಿಮಗೊಳಿಸಿದೆ. ಆದರೆ ಓಪನರ್ ಶಿಖರ್ ಧವನ್ ಹೆಸರನ್ನು ಆಯ್ಕೆ ಸಮಿತಿ ಕೈಬಿಟ್ಟು ಅಚ್ಚರಿ ಮೂಡಿಸಿದೆ. ಅಂತಿಮ 15 ಮಂದಿಯ ತಂಡದಲ್ಲಿ ಧವನ್ ಸೇರಿಸಿಕೊಂಡಿಲಿಲ್ಲ. ಎಡಗೈ ಬ್ಯಾಟ್ಸಮನ್ ಆದ ಧವನ್, ಕೇವಲ ಎರಡು ತಿಂಗಳ ಹಿಂದೆಯಷ್ಟೇ ಭಾರತ ತಂಡದಲ್ಲಿ ಆಡಿದ್ದರು. ಆದರೆ ವಿಶ್ವಕಪ್ ಸ್ಪರ್ಧೆಯ ವೇಳೆಗೆ ಇವರನ್ನು ಪರಿಗಣಿಸಿಲ್ಲ.

2013 ರಿಂದ ನಿರಂತರವಾಗಿ ತಂಡದಲ್ಲಿ ಇದ್ದ ಧವನ್ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಹಿರಿಯ ಆಟಗಾರನಿಲ್ಲದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಧವನ್ ಬದಲಾಗಿ ತಂಡದಲ್ಲಿ ಯಾರನ್ನು ತೆಗೆದುಕೊಂಡಿಲ್ಲ ಎಂಬುದೇ ಅಚ್ಚರಿ ಸಂಗತಿ. ತಂಡದಲ್ಲಿ ರೋಹಿತ್ ಶರ್ಮ ಮತ್ತು ಕೆ.ಎಲ್. ರಾಹುಲ್ ಅವರನ್ನು ಪ್ರಾರಂಭಿಕ ಆಟಗಾರ ರಾಗಿ ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: T20 World CUP : ಭಾರತ ತಂಡಕ್ಕೆ ಕೊಯ್ಲಿ ಸಾರಥ್ಯ , ಧೋನಿ ಮೆಂಟರ್‌

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ, ಶಿಖರ್ ಧವನ್ ಕೈಬಿಟ್ಟ ಬಗ್ಗೆ ಹೆಚ್ಚಿಗೆ ಹೇಳಲಾರೆ. ಈತ ಅತ್ಯಂತ ಪ್ರಮುಖ ಆಟಗಾರ. ಸದ್ಯಕ್ಕೆ ಅವರಿಗೆ ವಿಶ್ರಾಂತಿ ಬೇಕಿದೆ ಎಂದಷ್ಟೇ ತಿಳಿಸಿದರು.

ವಿಶ್ವಕಪ್ ತಂಡದಲ್ಲಿಲ್ಲದ ಧವನ್ ಅವರ ಟಿ20 ವೃತ್ತಿ ಜೀವನ ಮುಗಿಯಿತೆಂದು ಅಂದುಕೊಂಡರೆ ತಪ್ಪಾಗುತ್ತದೆ. ಐಪಿಎಲ್ 2021ರ ವೇದಿಕೆಯಲ್ಲಿ ಮತ್ತೆ ಧವನ್ ಅಬ್ಬರ ನೋಡಬಹುದು.

ಇದನ್ನೂ ಓದಿ: INDIA VS ENGLAND 4 TEST : ಭಾರತೀಯರ ಪರಾಕ್ರಮಕ್ಕೆ ನೆಲಕ್ಕಚ್ಚಿದ ಇಂಗ್ಲೆಂಡ್‌ ಪಡೆ

ಪ್ರಸ್ತುತ ಧವನ್ ಹೆಸರು ಟಿ 20 ತಂಡದಲ್ಲಿ ಇರದಿದ್ದರೂ, ಆಯ್ಕೆ ಸಮಿತಿ ಅಕ್ಟೊಬರ್ 10ರ ವರೆಗೆ ತಂಡದ ಹೆಸರುಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ನಡೆಯುತ್ತಿದ್ದು, ಇಲ್ಲಿ ಭಾಗವಹಿಸುವ ಆಟಗಾರರ ಪ್ರದರ್ಶನದ ಮೇಲೂ ಅವಲಂಬಿತವಾಗಿರುತ್ತದೆ. ಇದಲ್ಲದೆ ಯುಜ್ವೇಂದ್ರ ಚಹಲ್ ಕೂಡ ಇದೆ ರೀತಿ ತಂಡ ಸೇರಿಸಿಕೊಳ್ಳುವ ಸಾಧ್ಯತೆಯೂ ಇದೆ.

(Shikhar Dhawan’s chance in Team India is not over yet)

RELATED ARTICLES

Most Popular