ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್ ನ 32 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರಾಜಸ್ತಾನ ರಾಯಲ್ಸ್ ತಂಡ ರೋಚಕ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ರಾಜಸ್ತಾನ ರಾಯಲ್ಸ್ ತಂಡ ನೀಡಿದ್ದ 185 ರನ್ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಅಂತಿಮ ಹಂತದಲ್ಲಿ ಕಾರ್ತಿಕ್ ತ್ಯಾಗಿ ಪಂಜಾಬ್ ಗೆಲುವನ್ನು ಕಸಿದುಕೊಂಡ್ರು. ಈ ಮೂಲಕ ರಾಯಲ್ಸ್ 2 ರನ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿದೆ.

ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಎವಿನ್ ಲೂವಿಸ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಲೂವಿಸ್ 36ರನ್ ಗಳಿಸಿದ್ರೆ, ಜೈಸ್ವಾಲ್ 49 ರನ್‌ಗಳಿಸಿ ಔಟಾದ್ರು. ನಂತರ ಬಂದ ಮಹಿಪಾಲ್ ಲೋಮರರ ಬಾರಿಸಿದ ಸ್ಪೋಟಕ 43 ರನ್ ನೆರವಿನಿಂದ ರಾಜಸ್ತಾನ ತಂಡ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 185 ರನ್ ಗಳಿಸಿತ್ತು. ಪಂಜಾಬ್ ಕಿಂಗ್ಸ್ ಪರ ಅರ್ಷದೀಪ್ ಸಿಂಗ್ 5 ವಿಕೆಟ್ ಪಡೆದುಕೊಂಡ್ರೆ, ಮೊಹಮದ್ ಸೆಮಿ 3 ವಿಕೆಟ್ ತನ್ನದಾಗಿಸಿಕೊಂಡಿದ್ದಾರೆ.

ನಂತರ ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮಾಯಂಕ್ ಅಗರ್‌ವಾಲ್ ಭರ್ಜರಿ ಜೊತೆಯಾಟ ನೀಡಿದ್ರು. ರಾಹುಲ್ ೪೯ರನ್ ಗಳಿಸಿದ್ರೆ ಮಾಯಂಕ್ ಅಗರ್‌ವಾಲ್ 67 ರನ್ ಬಾರಿಸುವ ಮೂಲಕ ಮೊದಲ ವಿಕೆಟ್‌ಗೆ 120 ರನ್ ಜೊತೆಯಾಟ ನೀಡಿದ್ದಾರೆ. ಇನ್ನೇನು ರಾಜಸ್ತಾನ್ ರಾಯಲ್ಸ್ ತಂಡ ಗೆಲುವಿನ ಸನಿಹದಲ್ಲಿತ್ತು. ಅಂತಿಮ ಓವರ್‌ನಲ್ಲಿ ತಂಡದ ಗೆಲುವಿಗೆ ಕೇವಲ 4 ರನ್ ಬೇಕಾಗಿತ್ತು. ಈ ವೇಳೆ ದಾಳಿಗೆ ಇಳಿದ ಕಾರ್ತಿಕ್ ತ್ಯಾಗಿ ಕೇವಲ 2 ರನ್ ನೀಡುವ ಮೂಲಕ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಗೆಲುವನ್ನು ತಂದಿಟ್ಟಿದ್ದಾರೆ.
ಇದನ್ನೂ ಓದಿ : ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 20,000 ರನ್ : ಹೊಸ ದಾಖಲೆ ಬರೆದ ಮಿಥಾಲಿ ರಾಜ್

ಸಂಕ್ಷಿಪ್ತ ಸ್ಕೋರ್ :
ರಾಜಸ್ತಾನ್ ರಾಯಲ್ಸ್ : ಎವಿನ್ ಲೂವಿಸ್ 36, ಯಶಸ್ವಿ ಜೈಸ್ವಾಲ್ 49, ಲೇಮ್ ಲೈವಿಂಗಸ್ಟೋನ್ 25, ಮಹಿಪಾಲ ಲೋಮರೋರ್42, ಅರ್ಷದೀಪ್ ಸಿಂಗ್ 32/5, ಮೊಹಮದ್ ಸೆಮಿ 21/3, ಹರ್ಪ್ರಿತ್ ಬ್ರಾರ್ 17/1
ಪಂಜಾಬ್ ಕಿಂಗ್ಸ್ : ಕೆ.ಎಲ್.ರಾಹುಲ್ 49. ಮಯಾಂಕ್ ಅಗರ್‌ವಾಲ್ 67, ಎ.ಮಕ್ರಮ್ 26, ನಿಕೋಲಸ್ ಪೂರನ್ 32, ಕಾರ್ತಿಕ್ ತ್ಯಾಗಿ 29/2 ಚೇತನ್ ಸಕರಿಯಾ 31/1, ರಾಹುಲ್ ತಿವಾಟಿಯಾ 23/1
ಇದನ್ನೂ ಓದಿ : ಕೊಲ್ಕತ್ತಾ ಎದುರಲ್ಲಿ ಹೀನಾಯ ಸೋಲು ಕಂಡ ಬೆಂಗಳೂರು
ಇದನ್ನೂ ಓದಿ : ಗಾಯಕ್ವಾಡ್ ಅಬ್ಬರಕ್ಕೆ ಮಂಕಾದ ಮುಂಬೈ : ಅಗ್ರಸ್ಥಾನಕ್ಕೇರಿದ ಚೆನ್ನೈ
( IPL 2021 Live Score PBKS vs RR Rajasthan Royals won 2 runs )