ಮುಂಬೈ : ಐಪಿಎಲ್ ( IPL 2022) ಗಾಗಿ ಪ್ರಾಂಚೈಸಿಗಳು ಇದೀಗ ಆಟಗಾರರನ್ನು ಉಳಿಸಿಕೊಳ್ಳಲು ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಯಾವೆಲ್ಲಾ ಆಟಗಾರರು ಉಳಿದು ಕೊಳ್ಳುತ್ತಾರೆ, ಯಾರೆಲ್ಲಾ ಮೆಗಾ ಹರಾಜಿನಲ್ಲಿ ಭಾಗಿಯಾಗ್ತಾರೆ ಅನ್ನೋ ಕೂತೂಹಲ ಮನೆ ಮಾಡಿದೆ. ಜೊತೆಗೆ ಒಂದಿಷ್ಟು ಪ್ರಾಂಚೈಸಿಗಳು ಯಾರನ್ನೂ ತಂಡದಲ್ಲಿ ಉಳಿಸಿಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಈ ನಡುವಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಐಪಿಎಲ್ ಸ್ಟಾರ್ ಆಟಗಾರರ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ರಶೀದ್ ಖಾನ್ ( Rahul- Rashid Khan) ಐಪಿಎಲ್ 2022 ಕ್ಕೆ ಅಮಾನತು ಆಗುವ ಸಾಧ್ಯತೆಯಿದೆ.
IPL 2022 ಗೆ ಹೊಸದಾಗಿ ಪ್ರವೇಶಿಸಿದ ಲಕ್ನೋ ಫ್ರಾಂಚೈಸಿ 2022 ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಪಂಜಾಬ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಈ ವಿಷಯದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ದೂರು ನೀಡಿವೆ. ಅಲ್ಲದೇ ಲಕ್ನೋ ತಂಡವು ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ಅವರನ್ನು ತಮ್ಮ ಫ್ರಾಂಚೈಸಿಗಳನ್ನು ತೊರೆಯುವಂತೆ ಮನವೊಲಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಪಂಜಾಬ್ ಹಾಗೂ ಹೈದ್ರಾಬಾದ್ ಅಧಿಕೃತ ದೂರು ನೀಡಿದ ನಂತರ ಸಮಸ್ಯೆಯನ್ನು ಪರಿಹರಿಸುವುದಾಗಿ ಬಿಸಿಸಿಐ ಹೇಳಿದೆ. ಇದುವರೆಗೆ ಯಾವುದೇ ಲಕ್ನೋ ತಂಡದ ವಿರುದ್ದ ದೂರು ಬಂದಿಲ್ಲ. ಈ ಕುರಿತು ಕೇವಲ ಮೌಖಿಕ ದೂರು ಸ್ವೀಕರಿಸಿದ್ದೇವೆ. ಅಲ್ಲದೇ ಅದನ್ನು ಪರಿಶೀಲನೆ ನಡೆಸುತ್ತಿದ್ದೇವೆ. ನಿಜವಾದರೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಲಕ್ನೋ ಪ್ರಾಂಚೈಸಿ ಈಗಾಗಲೇ ಕೆ.ಎಲ್.ರಾಹುಲ್ ಹಾಗೂ ರಶೀದ್ ಖಾನ್ ಅವರನ್ನು ಸಂಪರ್ಕಿಸಿದ್ದು, ತಮ್ಮ ತಂಡಕ್ಕೆ ಸೆಳೆಯುವ ನಿಟ್ಟಿನಲ್ಲಿ ಮಾತುಕತೆ ನಡೆಸಿವೆ ಎಂಬ ಆರೋಪವನ್ನು ಎರಡೂ ತಂಡಗಳು ಮಾಡಿವೆ. ಒಂದೊಮ್ಮೆ ಇಬ್ಬರ ವಿರುದ್ದದ ಆರೋಪ ಸಾಭೀತಾದ್ರೆ ಮುಂದಿನ ಐಪಿಎಲ್‌ನಲ್ಲಿ ಇಬ್ಬರೂ ಆಟಗಾರರಿಗೆ ನಿಷೇಧ ಹೇರುವ ಸಾಧ್ಯತೆಯಿದೆ. ಎಲ್ಲಾ ಫ್ರಾಂಚೈಸಿಗಳಿಂದ ಉಳಿಸಿಕೊಂಡಿರುವ ಆಟಗಾರರ ಸಲ್ಲಿಕೆಗೆ ಒಂದು ದಿನ ಬಾಕಿಯಿರುವಾಗ, ಯಾರು ತಂಡದಲ್ಲಿ ಉಳಿದುಕೊಳ್ತಾರೆ, ಯಾರು ಹೊರ ಹೋಗುತ್ತಾರೆ ಅನ್ನೋ ಕುರಿತು ಇಂದು ನಿರ್ಧಾರವಾಗಲಿದೆ.
ಎಂ.ಎಸ್.ಧೋನಿ ಚೆನ್ನೈ ತಂಡದಲ್ಲಿ ಮುಂದಿನ ಮೂರು ವರ್ಷಗಳ ಕಾಲ ಉಳಿದುಕೊಳ್ಳುವ ಸಾಧ್ಯತೆಯಿದೆ, ಆದರೆ ಡೇವಿಡ್ ವಾರ್ನರ್ ಈ ಬಾರಿ ಹೈದ್ರಾಬಾದ್ ತಂಡವನ್ನು ಪ್ರತಿನಿಧಿಸುವ ಸಾಧ್ಯತೆ ತೀರಾ ಕಡಿಮೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಮ್ಮ ತಂಡದಲ್ಲಿಯೇ ಉಳಿಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2022 ರ ಮೆಗಾ ಹರಾಜಿನ ಮೊದಲು ಉಳಿಸಿಕೊಳ್ಳಲು ಬಯಸುವ ಆಟಗಾರರನ್ನು ಬಹುತೇಕ ಅಂತಿಮಗೊಳಿಸಿವೆ.
ಚೆನ್ನೈ ಸೂಪರ್ ಕಿಂಗ್ಸ್ (CSK) : ಎಂಎಸ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ/ ಸ್ಯಾಮ್ ಕರ್ರಾನ್
ದೆಹಲಿ ಕ್ಯಾಪಿಟಲ್ಸ್ (DC): ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ ಮತ್ತು ಆಂಡ್ರೆ ನಾರ್ಟ್ಜೆ.
ಮುಂಬೈ ಇಂಡಿಯನ್ಸ್ (MI) : ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರಾನ್ ಪೊಲಾರ್ಡ್, ಇಶಾನ್ ಕಿಶನ್ (ಹೆಚ್ಚುವರಿ ಆಟಗಾರ)
ಕೋಲ್ಕತ್ತಾ ನೈಟ್ ರೈಡರ್ಸ್ (KKR): ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) : ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್
ರಾಜಸ್ಥಾನ್ ರಾಯಲ್ಸ್ (RR) : ಸಂಜು ಸ್ಯಾಮ್ಸನ್
ಇದನ್ನೂ ಓದಿ : ಐಪಿಎಲ್ ಮೆಗಾ ಹರಾಜಿಗೆ ಸಿದ್ದತೆ : ಯಾವ ತಂಡದಲ್ಲಿ ಯಾರು ಉಳಿದುಕೊಂಡಿದ್ದಾರೆ : ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಇದನ್ನೂ ಓದಿ : IPL 2022 RCB : 3 ಮಂದಿ ಸ್ಟಾರ್ ಆಟಗಾರರನ್ನುಕೈಬಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು
( KL Rahul and Rashid Khan might get suspended for IPL 2022 )