ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿ ಯಶಸ್ಸು ಕಂಡಿದೆ. ಅರಬ್ ನಾಡಲ್ಲಿ ಐಪಿಎಲ್ ೧೪ನೇ ಆವೃತ್ತಿ ಅಂತಿಮ ಹಂತ ತಲುಪಿದೆ. ಈ ನಡುವಲ್ಲೇ ಬಿಸಿಸಿಐ ಮುಂದಿನ ಆವೃತ್ತಿಗೆ ಸಿದ್ದವಾಗುತ್ತಿದೆ. ಐಪಿಎಲ್‌ಗೆ ಹೊಸದಾಗಿ 2 ತಂಡಗಳ ಸೇರ್ಪಡೆಗೆ ಟೆಂಡರ್ ಆಹ್ವಾನಿಸಿದ್ದು, ಪ್ರತಿಷ್ಠಿತ ಕಂಪೆನಿಗಳು ತಂಡ ಖರೀದಿಗೆ ಮುಗಿಬಿದ್ದಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಫೈನಲ್ ಪ್ರವೇಶಿಸಿವೆ. ಫೈನಲ್ ಪಂದ್ಯದ ನಂತರ ಪ್ರಸಕ್ತ ವರ್ಷದ ಐಪಿಎಲ್ ಪಂದ್ಯಾವಳಿಗೆ ತೆರೆ ಬೀಳಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 8 ತಂಡಗಳು ಸೆಣಸಾಟವನ್ನು ನಡೆಸುತ್ತಿದ್ದು, ಮುಂದಿನ ಸಾಲಿನಿಂದ ಇನ್ನೆರಡು ತಂಡಗಳು ಐಪಿಎಲ್ ಸೇರ್ಪಡೆಯಾಗಲಿವೆ.

ಬೆಂಗಳೂರು ರಾಯಲ್ ಚಾಲೆಂಜರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸಸ್ ಹೈದ್ರಬಾದ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ರಾಜಸ್ತಾನ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪ್ರಸಕ್ತ ಋತುವಿನಲ್ಲಿ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗಿಯಾಗಿವೆ. ಆದರೆ ಈ ಹಿಂದೆ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ತಂಡ ಗಳು ಐಪಿಎಲ್ ಪಂದ್ಯಾವಳಿಯನ್ನಾಡಿದ್ದವು. ನಂತರದಲ್ಲಿ ಎರಡೂ ತಂಡಗಳು ಐಪಿಎಲ್‌ನಿಂದ ಹಿಂದೆ ಸರಿದಿದ್ದವು. ಇನ್ನೊಂದೆಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣದ ಹಿನ್ನೆಲೆ ಯಲ್ಲಿ ರಾಜಸ್ತಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಒಂದು ಸೀಸನ್‌ನಿಂದ ಅಮಾನತ್ತು ಮಾಡುತ್ತಿದ್ದಂತೆಯೇ ಮತ್ತೆ ಕೊಚ್ಚಿ ಟಸ್ಕರ್ಸ್ ಹಾಗೂ ಪುಣೆ ವಾರಿಯರ್ಸ್ ತಂಡಗಳು ಐಪಿಎಲ್ ಸೇರ್ಪಡೆ ಮಾತು ಕೇಳಿಬಂದಿತ್ತು. ಆದರೆ ಕೊಚ್ಚಿ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಗುಜರಾತ್ ಲಯನ್ಸ್ ತಂಡಕ್ಕೆ ಬಿಸಿಸಿಐ ಅವಕಾಶವನ್ನು ನೀಡಿತ್ತು.
ಇದನ್ನೂ ಓದಿ : 10 ಲಕ್ಷ ಇದ್ರೆ ನೀವೂ ಖರೀದಿಸಬಹುದು ಐಪಿಎಲ್ ತಂಡ : ಬಿಡ್ಡರ್‌ಗಳಿಂದ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಮುಂದಿನ ಬಾರಿಯಿಂದ ಐಪಿಎಲ್‌ಗೆ ಹೊಸ ಎರಡು ತಂಡಗಳು ಸೇರ್ಪಡೆಯಾಗಲಿವೆ. ತಂಡ ಖರೀದಿಗೆ 2,000 ರೂಪಾಯಿ ಮೂಲ ಬೆಲೆಯನ್ನು ನಿಗದಿ ಮಾಡಿದೆ. ಅದಾನಿ, ಬಿರ್ಲಾ, ಗೋಯೆಂಕಾ, ಕೋಟಕ್, ಬಿಂದೋ ಫಾರ್ಮಾ ಕಂಪೆನಿ ಸೇರಿದಂತೆ ಸುಮಾರು 14 ತಂಡಗಳು ಈಗಾಗಲೇ ಹೊಸ ತಂಡ ಖರೀದಿಗೆ ಮನಸ್ಸು ಮಾಡಿವೆ. ಮೂಲ ಬೆಲೆ 2,000 ಕೋಟಿ ರೂಪಾಯಿ ಇದ್ದರೂ ಕೂಡ ಹಲವು ಸಂಸ್ಥೆಗಳು ತಂಡ ಖರೀದಿಗೆ ಮುಗಿಬಿದ್ದಿವೆ. ಅಕ್ಟೋಬರ್ 25 ರಂದು ದುಬೈನಲ್ಲಿ ಹೊಸ ತಂಡಗಳ ಬಿಡ್ಡಿಂಗ್ ಕಾರ್ಯ ನಡೆಯಲಿದೆ. ಬಿಸಿಸಿಐ ಎರಡು ತಂಡ ಖರೀದಿಯಿಂದ ಬರೋಬ್ಬರಿ 7,500 ಕೋಟಿ ರೂಪಾಯಿ ಸಂಪಾದನೆಯ ಲೆಕ್ಕಾಚಾರ ಹಾಕಿಕೊಂಡಿವೆ.
ಇದನ್ನೂ ಓದಿ : ನಾಯಕತ್ವ ತ್ಯೆಜಿಸಿದ ವಿರಾಟ್ ಕೊಯ್ಲಿ : ಆರ್‌ಸಿಬಿ ನಾಯಕನಾಗಿ ಗೆಲುವಿಗಿಂತ ಸೋತಿದ್ದೆ ಹೆಚ್ಚು !
(Two new teams, Adani, Kotak and Birla firms taking on IPL )