ದುಬೈ : ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ದ ಸೆಣೆಸಾಟ ನಡೆಸಲಿದೆ. ಭಾನುವಾರ ನಡೆಯಲಿರುವ ಹೈ ವೋಲ್ಟೇಜ್ ಪಂದ್ಯಕ್ಕೂ ಮುನ್ನವೇ ನ್ಯೂಜಿಲೆಂಡ್ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಲಾಕಿ ಫರ್ಗುಸನ್ ಗಾಯಗೊಂಡು ಪಂದ್ಯಾವಳಿಯಿಂದ ಹೊರ ನಡೆದಿದ್ದಾರೆ.
ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆಯಲ್ಲಿ ಫರ್ಗುಸನ್ ಗಾಯಗೊಂಡಿದ್ದರು. ನಂತರ ಅವರನ್ನು ಎಂಆರ್ಐ ಸ್ಕ್ಯಾನಿಂಗ್ಗೆ ಒಳಪಡಿಸಿದ ವೈದ್ಯರು ಮೂರರಿಂದ ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡ ಇದೀಗ ಸ್ಟಾರ್ ಆಟಗಾರನನ್ನು ತಂಡದಿಂದ ಹೊರಗಿಟ್ಟಿದೆ. ನಮಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ ಎಂದು ನ್ಯೂಜಿಲೆಂಡ್ ತಂಡದ ತರಬೇತುದಾರ ಗ್ಯಾರಿಸ್ಟೆಡ್ ತಿಳಿಸಿದ್ದಾರೆ.
ಇನ್ನು ICC ತಾಂತ್ರಿಕ ಸಮಿತಿಯ ಅನುಮೋದನೆಗೆ ಒಳಪಟ್ಟು ಆಡಮ್ ಮಿಲ್ನೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮಿಲ್ನೆ ಈಗಾಗಲೇ ಯುಎಇಯಲ್ಲಿದ್ದಾರೆ. ಫರ್ಗುಸನ್ ಬದಲಿಗೆ ಮಿಲ್ನೆ ಸೇರ್ಪಡೆಗೊಳಿಸುವ ಕುರಿತು ಈಗಾಗಲೇ ನ್ಯೂಜಿಲೆಂಡ್ ತಂಡ ಐಸಿಸಿ ಅನುಮತಿಯನ್ನು ಕೋರಿದೆ. ಐಸಿಸಿ ಅನುಮತಿಯನ್ನು ನೀಡುವವರೆಗೂ ಮಿಲ್ನೆ ನ್ಯೂಜಿಲೆಂಡ್ ಪರ ಆಡಲು ಲಭ್ಯವಾಗುವುದಿಲ್ಲ.
( India vs New Zealand Match NZ Star player ruled out T20 world cup )