ಅಹಮದಾಬಾದ್ : ಸಿವಿಸಿ ಸ್ಪೋರ್ಟ್ಸ್ (CVC Sports ) ಖರೀದಿಸಿದ ಅಹಮದಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂದುವರಿಯಲಿದೆಯಾ ಅನ್ನೋ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಆದರೆ ಅಹಮದಾಬಾದ್ ತಂಡ ಆಟಗಾರರನ್ನು( Ahmedabad list out IPL 2022) ತನ್ನತ್ತ ಸೆಳೆಯಲು ತೆರೆ ಮರೆಯಲ್ಲೇ ಕಸರತ್ತು ನಡೆಸುತ್ತಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ( Shreyas Iyer ), ಸ್ಪೋಟಕ ಆಟಗಾರ ಡೇವಿಡ್ ವಾರ್ನರ್ ( David Warner ) ಹಾಗೂ ಖ್ಯಾತ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya ) ಅವರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿದೆ. ಈ ಮೂವರು ಆಟಗಾರರು ಐಪಿಎಲ್ 2022 ಗಾಗಿ ಮೆಗಾ ಹರಾಜಿಗೆ ಮೊದಲು ತಂಡ ಸೇರುವ ಸಾಧ್ಯತೆಯಿದೆ.
CVC ಸ್ಪೋರ್ಟ್ಸ್ ಅಹಮದಾಬಾದ್ ತಂಡ ಬರೋಬ್ಬರಿ 5,625 ಕೋಟಿ ಕೊಟ್ಟು ತಂಡವನ್ನು ಖರೀದಿಸಿತ್ತು. ಆದರೆ ತಂಡದ ಮಾಲೀಕರ CVCCP ಜಾಗತಿಕ ವೇಜಿಂಗ್ ಸಂಸ್ಥೆ ಗಳೊಂದಿಗೆ ವ್ಯವಹಾರದೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಭಾಗಿಯಾಗಲು ಕಾನೂನು ತೊಡಕು ಉಂಟಾಗಿದೆ. ಈ ಕುರಿತು ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಇಈ ಕುರಿತು ಟ್ವೀಟ್ ಮಾಡಿದ್ದರು. ನಾನು wagering ಸಂಸ್ಥೆಗಳು @ipl ಗುಂಪನ್ನು ಖರೀದಿಸಬಹುದು ಎಂದು ಭಾವಿಸುತ್ತೇನೆ. ಇನ್ನೊಂದು ಮಾನದಂಡ ಇರಬೇಕು. ಸ್ಪಷ್ಟವಾಗಿ, ಒಬ್ಬ ಅರ್ಹ ಬಿಡ್ದಾರರು ಹೆಚ್ಚುವರಿಯಾಗಿ ಪ್ರಮುಖ ಪಂತದ ಸಂಸ್ಥೆಯನ್ನು ಕ್ಲೈಮ್ ಮಾಡುತ್ತಾರೆ. @BCCI ಶಾಲೆಯ ಕೆಲಸವನ್ನು ಮಾಡುವುದಿಲ್ಲವೇ? ಅಂತಹ ಸಂದರ್ಭದಲ್ಲಿ ಅಪನಗದೀಕರಣದ ವಿರುದ್ಧ ಏನು ಮಾಡಬಹುದು ? ಎಂದು ಪ್ರಶ್ನಿಸಿದ್ದರು.
ಆರ್‌ಪಿ- ಸಂಜೀವ್ ಗೋಯೆಂಕಾ (ಆರ್‌ಪಿಎಸ್‌ಜಿ) ಗ್ರೂಪ್ 7,090 ಕೋಟಿ ಮೊತ್ತದೊಂದಿಗೆ ಅತೀ ದೊಡ್ಡ ಬಿಡ್ಡರ್ ಆಗಿದ್ದರೆ, ಖಾಸಗಿ ಈಕ್ವಿಟಿ ಸಂಸ್ಥೆ CVC ಕ್ಯಾಪಿಟಲ್ ಪಾರ್ಟ್‌ನರ್ಸ್ (ಐರೇಲಿಯಾ ಕಂಪನಿ ಪ್ರೈ. Ltd) 5,625 ಕೋಟಿಯೊಂದಿಗೆ ಎರಡನೇ ಅತಿ ಹೆಚ್ಚು ಬಿಡ್ಡರ್ ಆಗಿತ್ತು. RPSG ಗುಂಪು ಲಕ್ನೋ ಮೂಲದ ಫ್ರಾಂಚೈಸ್ ಅನ್ನು ಸ್ವಾಧೀನಪಡಿಸಿಕೊಂಡರೆ, CVC ಕ್ಯಾಪಿಟಲ್ಸ್ ಅಹಮದಾಬಾದ್ ಫ್ರ್ಯಾಂಚೈಸ್ ಅನ್ನು ತನ್ನದಾಗಿಸಿಕೊಂಡಿತ್ತು. ಇದೀಗ ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ ಅಹಮದಾಬಾದ್‌ನ ಐಪಿಎಲ್ ಫ್ರಾಂಚೈಸ್ 3 ಆಟಗಾರರನ್ನು ಖರೀದಿಸಬಹುದು:
ಶ್ರೇಯಸ್ ಅಯ್ಯರ್ ( Shreyas Iyer )
ವರದಿಯ ಪ್ರಕಾರ IPL 2022 ರಲ್ಲಿ ಅಹಮದಾಬಾದ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕರಾಗಲಿದ್ದಾರೆ. ಶ್ರೇಯಸ್ ಅಯ್ಯರ್ ದೆಹಲಿ ಕ್ಯಾಪಿಟಲ್ಸ್ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನೆಡೆಸಿದ್ದ ಶ್ರೇಯಸ್ ಅಯ್ಯರ್, ಗಾಯಗೊಂಡು ಹೊರ ನಡೆಯುತ್ತಲೇ ಪಂತ್ ನಾಯಕತ್ವ ವಹಿಸಿಕೊಂಡಿದ್ದರು. ಅಲ್ಲದೇ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದರು. ಇದೇ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶ್ರೇಯಸ್ ಅಯ್ಯರ್ ಬದಲು ಪಂತ್ ಅವರನ್ನೇ ತಂಡದ ನಾಯಕತ್ವ ಜವಾಬ್ದಾರಿ ಯನ್ನು ವಹಿಸಿತ್ತು. ಇದರಿಂದ ಬೇಸರಗೊಂಡಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಡೆಲ್ಲಿ ತಂಡದಿಂದ ಹೊರ ನಡೆದಿದ್ದಾರೆ. ಅಲ್ಲದೇ ಮುಂದಿನ ಐಪಿಎಲ್‌ನಲ್ಲಿ ತಂಡವೊಂದರ ನಾಯಕರಾಗುವ ಕನಸು ಕಾಣುತ್ತಿದ್ದಾರೆ. ಇದೇ ಹೊತ್ತಲ್ಲೇ ಐಪಿಎಲ್‌ನ ಹೊಸ ತಂಡಗಳಾಗಿರುವ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಹೊಸ ನಾಯಕನ ಹುಡುಕಾಟ ದಲ್ಲಿದ್ದು, ಅಹಮದಾಬಾದ್ ತಂಡ ಅಯ್ಯರ್ ಅವರನ್ನು ತನ್ನ ಸೆಳೆಯಲು ಯತ್ನಿಸುತ್ತಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅದ್ಬುತ ಪ್ರದರ್ಶನವನ್ನು ನೀಡಿತ್ತು. ಇದೇ ಕಾರಣಕ್ಕೆ ಅಹಮದಾಬಾದ್ ತಂಡ ಶ್ರೇಯಸ್ ಅಯ್ಯರ್‌ಗೆ15 ಕೋಟಿ ಅಥವಾ 11 ಕೋಟಿ ರುಪಾಯಿ ನೀಡಿ ಖರೀದಿ ಮಾಡುವ ಸಾಧ್ಯತೆಯಿದೆ.
ಡೇವಿಡ್ ವಾರ್ನರ್ ( David Warner )
ಆಸ್ಟ್ರೇಲಿಯನ್ ಆಟಗಾರ ಡೇವಿಡ್ ವಾರ್ನರ್ ಇತ್ತೀಚೆಗೆ ಉನ್ನತ ಫಾರ್ಮ್‌ನಲ್ಲಿದ್ದಾ. ಆಸ್ಟ್ರೇಲಿಯಾ ತಂಡ ಟಿ೨೦ ವಿಶ್ವಕಪ್ ಗೆಲುವಿನಲ್ಲಿ ವಾರ್ನರ್ ಪ್ರಮುಖ ಪಾತ್ರವಹಿಸಿದ್ದಾರೆ. 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ತಂಡದ ಮ್ಯಾನೇಜ್‌ಮೆಂಟ್ ಜೊತೆಗಿನ ಮುನಿಸಿನಿಂದ ವಾರ್ನರ್ ಕಳೆದ ಬಾರಿ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅಲ್ಲದೇ ಅರ್ಧದಲ್ಲಿಯೇ ಐಪಿಎಲ್‌ನಿಂದ ಹೊರ ನಡೆದಿದ್ದರು. ಅನುಭವಿ ಆಟಗಾರನ ಅಗತ್ಯತೆಯನ್ನು ಇದೀಗ ಅಹಮದಾಬಾದ್ ತಂಡ ಮನಗಂಡಿದೆ. ಇದೇ ಕಾರಣಕ್ಕೆ ವಾರ್ನರ್ ಈ ಬಾರಿ ಮೆಗಾ ಹರಾಜಿಗೂ ಮೊದಲೇ ತಂಡವನ್ನು ಸೇರುವ ಸಾಧ್ಯತೆಯಿದೆ.
ಹಾರ್ದಿಕ್ ಪಾಂಡ್ಯ ( Hardik Pandya )
ಇನ್ನು ಮುಂಬೈ ಇಂಡಿಯನ್ಸ್ ತಂಡದ ಖ್ಯಾತ ಆಟಗಾರ ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆಯಲು ಅಹಮದಾಬಾದ್ ಉತ್ಸುಕವಾಗಿದೆ. ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇದ್ದರೂ ಕೂಡ ಬ್ಯಾಟಿಂಗ್‌ನಿಂದ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಸಾಕಷ್ಟು ವರ್ಷಗಳ ಕಾಲ ಆಟವಾಡಿರುವ ಹಾರ್ದಿಕ್ ಪಾಂಡ್ಯ ಅದ್ಬುತ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಹಲವು ಪಂದ್ಯಗಳನ್ನು ಅಂತಿಮ ಹಂತದಲ್ಲಿ ಗೆಲುವುದು ದೊರಕಿಸಿಕೊಟ್ಟಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ಅಹಮದಾಬಾದ್ ತಂಡ 8 ಕೋಟಿ ಕೋಟಿ ರೂಪಾಯಿ ಖರೀದಿ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ
ಇದನ್ನೂ ಓದಿ : RCB IPL 2022 ಗೆ ನಾಯಕನಾಗಿ ಮನೀಶ್ ಪಾಂಡೆ
( Ahmedabad list out IPL 2022 : Ahmedabad brought Shreyas Iyer, David Warner and Hardik Pandya for IPL 2022)