ಟ್ರಿನಿಡಾಡ್: ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal pose) ಅವರದ್ದು ಇಂಟ್ರೆಸ್ಟಿಂಗ್ ವ್ಯಕ್ತಿತ್ವ. 2019ರ ಐಸಿಸಿ ವಿಶ್ವಕಪ್ ಟೂರ್ನಿಯ ವೇಳೆ ಚಹಾಲ್ ವಿಶಿಷ್ಠ ಪೋಸ್ ಮೂಲಕ ಸುದ್ದಿಯಾಗಿದ್ದರು. ಚಹಾಲ್ ಕೊಟ್ಟಿದ್ದ ಈ ಪೋಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಮುಂದಿನ ದಿನಗಳಲ್ಲಿ ಅದು ಚಹಾಲ್ ಅವರ ಟ್ರೇಡ್ ಮಾರ್ಕ್ ಕೂಡ ಆಗಿತ್ತು. ಮೂರು ವರ್ಷಗಳ ಹಿಂದೆ ಚಹಾಲ್ ಕ್ರಿಯೇಟ್ ಮಾಡಿದ್ದ ಈ ವಿಶಿಷ್ಠ ಪೋಸ್ ಅನ್ನು ಟೀಮ್ ಇಂಡಿಯಾ ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) ಮತ್ತು ಯುವ ವೇಗಿ ಆವೇಶ್ ಖಾನ್ (Avesh Khan) ವೆಸ್ಟ್ ಇಂಡೀಸ್’ನಲ್ಲಿ ರೀಕ್ರಿಯೆಟ್ ಮಾಡಿದ್ದಾರೆ.
ಆತಿಥೇಯ ವೆಸ್ಟ್ ಇಂಡೀಸ್ (India Vs West Indies ODI Series) ವಿರುದ್ಧದ 2ನೇ ಏಕದಿನ ಪಂದ್ಯವನ್ನು 2 ವಿಕೆಟ್’ಗಳಿಂದ ರೋಚಕವಾಗಿ ಗೆದ್ದು ಏಕದಿನ ಸರಣಿ ಕೈವಶ ಮಾಡಿಕೊಂಡ ನಂತರ, ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ವೇಗಿ ಆವೇಶ್ ಖಾನ್ ಮತ್ತು ಆಲ್ರೌಂಡರ್ ಅಕ್ಷರ್ ಪಟೇಲ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಟ್ರೇಡ್ ಮಾರ್ಕ್ ಪೋಸ್”ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಮಧ್ಯದಲ್ಲಿ ಚಹಾಲ್ ಕೂಡ ಇದ್ದದ್ದು ವಿಶೇಷ. ಈ ಚಿತ್ರವನ್ನು ಬಿಸಿಸಿಐ ತನ್ನ ಇನ್”ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.
ಮಧ್ಯಪ್ರದೇಶದ 25 ವರ್ಷದ ಯುವ ವೇಗಿ ಆವೇಶ್ ಖಾನ್ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯದ ಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಭಾನುವಾರ ನಡೆದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ 2 ವಿಕೆಟ್’ಗಳ ರೋಚಕ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 50 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್”ಗಳ ಬೃಹತ್ ಮೊತ್ತ ಕಲೆ ಹಾಕಿತು. ವಿಂಡೀಸ್ ಪರ 100ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಶಾಯ್ ಹೋಪ್, 100ನೇ ಪಂದ್ಯದಲ್ಲಿ ಶತಕ ಬಾರಿಸಿದರು.
312 ರನ್’ಗಳ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 79 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ 4ನೇ ವಿಕೆಟ್”ಗೆ ಉಪನಾಯಕ ಶ್ರೇಯಸ್ ಅಯ್ಯರ್ (71 ಎಸೆತಗಳಲ್ಲಿ 63 ರನ್) ಮತ್ತು ಸಂಜು ಸ್ಯಾಮ್ಸನ್ (51 ಎಸೆತಗಳಲ್ಲಿ 54 ರನ್) 99 ರನ್”ಗಳ ಜೊತೆಯಾಟವಾಡುವ ಮೂಲಕ ಭಾರತವನ್ನು ಮತ್ತೆ ಗೆಲುವಿನ ಹಳಿಗೆ ತಂದು ನಿಲ್ಲಿಸಿದರು. 6ನೇ ಕ್ರಮಾಂಕದಲ್ಲಿ ಆಲ್ರೌಂಡರ್ ದೀಪಕ್ ಹೂಡ 33 ರನ್ ಗಳಿಸಿದ್ರೆ, ಫಿನಿಷರ್ ರೂಪದಲ್ಲಿ 7ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿದ ಮತ್ತೊಬ್ಬ ಆಲ್ರೌಂಡರ್ ಅಕ್ಷರ್ ಪಟೇಲ್ ಕೇವಲ 35 ಎಸೆತಗಳಲ್ಲಿ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 64 ರನ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಸರಣಿಯ 3ನೇ ಪಂದ್ಯ ಬುಧವಾರ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ.
ಇದನ್ನೂ ಓದಿ : Rohit Sharma : ಲಂಡನ್‌ನಲ್ಲಿ ಹಾಲಿ ಡೇ ಜಾಲಿ ಡೇ ಮುಗಿಸಿ ವಿಂಡೀಸ್‌ಗೆ ತೆರಳಿದ ರೋಹಿತ್ ಶರ್ಮಾ & ಟೀಮ್
ಇದನ್ನೂ ಓದಿ : Nathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್
Avesh Khan Axar Patel Recreates Yuzvendra Chahal pose