ಲಂಡನ್ : ನ್ಯೂಜಿಲೆಂಡ್ ವಿರುದ್ದ 3ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಖ್ಯಾತ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ (Ben Stokes) ದಾಖಲೆಯ ಶತಕ ಬಾರಿಸಿದ್ದಾರೆ. ಕ್ರಿಕೆಟ್‌ಗೆ ನಿವೃತ್ತಿ (Cricket Retaird ) ಘೋಷಣೆ ಮಾಡಿದ್ದ ಬೆನ್‌ಸ್ಟೋಕ್ಸ್ ನಿವೃತ್ತಿ ವಾಪಾಸ್ ಪಡೆದ 3ನೇ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. 6,6,6,6,6,6,6,6,6 ಒಟ್ಟು 9 ಸಿಕ್ಸರ್ ಸಿಡಿಸಿ 124 ಎಸೆತಗಳಲ್ಲಿ 182 ರನ್ ಬಾರಿಸಿದ್ದಾರೆ.
ಇಂಗ್ಲೆಂಡ್ ತಂಡ ಖ್ಯಾತ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಆರ್ಭಟಿಸೋದಕ್ಕೆ ನಿಂತ್ರೆ ಖ್ಯಾತ ನಾಮ ಬೌಲರ್‌ಗಳೇ ಬೌಲಿಂಗ್ ಮಾಡೋದಕ್ಕೆ ಭಯ ಪಡುತ್ತಾರೆ. ಇದೀಗ ಸ್ಟೋಕ್ಸ್ ಆರ್ಭಟ ಮತ್ತೊಂದು ಕ್ರಿಕೆಟ್ ಜಗತ್ತು ಕಣ್ತುಂಬಿಕೊಂಡಿದೆ. ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಬರೋಬ್ಬರಿ 9 ಸಿಕ್ಸರ್ ಸಿಡಿಸಿರುವ ಸ್ಟೋಕ್ಸ್ ಕೇವಲ 124ಎಸೆತಗಳಲ್ಲಿ 182 ರನ್ ಸಿಡಿಸಿದ್ದಾರೆ.

13 ರನ್ ಗಳಿಗೆ 2 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಬೆನ್‌ಸ್ಟೋಕ್ಸ್ ಡಿ ಮಲನ್ ಜೊತೆ ಶತಕದ ಜೊತೆಯಾಟ ಆಡಿದ್ದಾರೆ. ಬೆನ್ ಸ್ಟೋಕ್ಸ್ ಆರಂಭದಿಂದಲೂ ಸ್ಪೋಟಕ ಆಟಕ್ಕೆ ಮನ ಮಾಡಿದ್ದಾರೆ. ಕೇವಲ 125 ಎಸೆತಗಳಲ್ಲಿ 15 ಬೌಂಡರಿ ಹಾಗೂ 9 ಸಿಕ್ಸರ್ ನರವಿನಿಂದ ಸ್ಪೋಟಕ ಶತಕ ಸಿಡಿಸಿದ್ದಾರೆ.
ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಜು ಸ್ಯಾಮ್ಸನ್ ನಿವೃತ್ತಿ ! ವಿಶೇಷ ಪೋಟೋ ವೈರಲ್
ಬೆನ್‌ಸ್ಟೋಕ್ಸ್ ಇತ್ತೀಚಿಗಷ್ಟೇ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಆದ್ರೆ ನ್ಯೂಜಿಲೆಂಡ್ ಸರಣಿಗೂ ಮುನ್ನವೇ ನಿವೃತ್ತಿಯನ್ನು ವಾಪಾಸ್ ಪಡೆದುಕೊಂಡಿದ್ದರು. ಬೆನ್‌ಸ್ಟೋಕ್ 2017 ರಲ್ಲಿ ಕೊನೆಯ ಬಾರಿಗೆ ಶತಕ ಬಾರಿಸಿದ್ದರು. ಇದೀಗ ಬರೋಬ್ಬರಿ 6 ವರ್ಷಗಳ ನಂತರ ಸ್ಟೋಟ್ಸ್ ಶತಕ ಬಾರಿಸಿದ್ದಾರೆ.
ವಿಶ್ವಕಪ್ ಆರಂಭಕ್ಕೂ ಮೊದಲೇ ಬೆನ್‌ಸ್ಟೋಕ್ಸ್ ಸಿಡಿಸಿರುವ ಸಿಡಿಲಬ್ಬರ ಶತಕ ಇತರ ತಂಡಗಳಿಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಬೆನ್‌ಸ್ಟೋಕ್ಸ್ ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನೆರವಾಗಿರೋದು ಇದೇ ಮೊದಲೇ ನಲ್ಲ. 2019ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಇಂಗ್ಲೆಂಡ್ ವಿಶ್ವಕಪ್ ಮುಡಿಗೇರಿಸಿದ್ದು ಕೂಡ ಇದೇ ಬೆನ್‌ಸ್ಟೋಕ್ಸ್.
ಇದನ್ನೂ ಓದಿ : ವಿರಾಟ್ ಕೊಹ್ಲಿ ಇನ್ನು 3 ಶತಕ ಬಾರಿಸಿದ್ರೆ ಸಚಿನ್ ತೆಂಡೂಲ್ಕರ್ ದಾಖಲೆ ಧೂಳಿಪಟ
ಬೆನ್‌ಸ್ಟೋಕ್ಸ್ ಸಿಡಿಸಿರುವ ವೇಗದ ಶತಕ ಹಲವು ದಾಖಲೆಗಳನ್ನು ಅಳಿಸಿ ಹಾಕಿದೆ. ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕವಾಗಿ ಅತ್ಯಧಿಕ ರನ್‌ಗಳಿಸಿ ಆಟಗಾರ ಅನ್ನೋ ಖ್ಯಾತಿಗೆ ಬೆನ್‌ಸ್ಟೋಕ್ಸ್ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸೂಪರ್‌ಸ್ಟಾರ್ ಕೇವಲ 76 ಎಸೆತಗಳಲ್ಲಿ 11 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

ಇದೀಗ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗಾಗಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಏಕದಿನ ತಂಡಕ್ಕೆ ಮರಳಿದ್ದಾರೆ. ಕಳೆದ ವರ್ಷ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 32 ವರ್ಷದ ಆಟಗಾರ 50 ಓವರ್‌ಗಳ ಏಕದಿನ ಕ್ರಿಕೆಟ್‌ನಿಂದ ಅವರು ನಿವೃತ್ತರಾಗಿದ್ದರು.
ಇದನ್ನೂ ಓದಿ : Deepak Devadiga Alevooru : ಕರ್ನಾಟಕಕ್ಕೆ ಮತ್ತೊಬ್ಬ ಮಿಸ್ಟರಿ ಸ್ಪಿನ್‌ರ್ : ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ದೀಪಕ್ ದೇವಾಡಿಗ ಅಲೆವೂರು
ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸ್ಟೋಕ್ಸ್ 180 ರನ್ ಗಳ ಗಡಿ ದಾಟಿ ಹೊಸ ಇತಿಹಾಸ ಬರೆದಿದ್ದಾರೆ. ಈ ಹಿಂದೆ 2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜೇಸನ್ ರಾಯ್ 180ರನ್ ಗಳಿಸಿದ್ದರು. ಆದ್ರೆ ಇದೀಗ ಬೆನ್‌ಸ್ಟೋಕ್ಸ್ 124 ಎಸೆತಗಳಲ್ಲಿ 15 ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 182 ರನ್ ಗಳಿಸಿ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
Ben Stokes record century after retirement 9 sixes 182 runs off 124 balls in England Vs Newzealand
1⃣8⃣2⃣ reasons to catch up on that simply incredible innings 😱
We put 3⃣6⃣8⃣ on the board 🏏💥
See the best of the action here 👇
— England Cricket (@englandcricket) September 13, 2023