ಪರ್ಲ್ : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ (India vs South Africa 1st ODI Live Score Updates) ಇಂದಿನಿಂದ ಆರಂಭಗೊಂಡಿದೆ. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೆಸ್ಟ್ ಸರಣಿಯ ಸೋಲಿನ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ ಇಳಿಯಲಿದ್ದು, ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ.
ವಿರಾಟ್ ಕೊಯ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಲೇ ರೋಹಿತ್ ಶರ್ಮಾ ಅವರನ್ನು ಏಕದಿನ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಗಾಯದ ಸಮಸ್ಯೆಯಿಂದ ಶರ್ಮಾ ಹೊರಗುಳಿಯುತ್ತಲೇ ರಾಹುಲ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿದೆ. ಈಗಾಗಲೇ ಟೀಂ ಇಂಡಿಯಾ ಕಠಿಣ ಅಭ್ಯಾಸವನ್ನು ನಡೆಸಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಈಗಾಗಲೇ ಉತ್ತಮ ಪ್ರದರ್ಶನ ತೋರುತ್ತಿದ್ದು, ಇಬ್ಬರು ಕನ್ನಡಿಗರ ಸಾಮರ್ಥ್ಯ ಪ್ರದರ್ಶನಕ್ಕೆ ದಕ್ಷಿಣ ಆಫ್ರಿಕಾ ಸರಣಿ ವೇದಿಕೆಯಾಗಿದೆ.
ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವೇಳೆಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ರಾಹುಲ್, ಮೊದಲು ಬ್ಯಾಟ್ ಮಾಡಲು ಬಯಸಿದ್ದೆ. ಎರಡೂ ಕೆಲಸಗಳನ್ನು ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಪಿಚ್ ಸ್ವಲ್ಪ ಒಣಗಿದಂತೆ ಕಾಣುತ್ತದೆ. ನಮ್ಮ ದಾಳಿಯಲ್ಲಿ ಕೆಲವು ಗುಣಮಟ್ಟದ ಸ್ಪಿನ್ನರ್‌ಗಳನ್ನು ಹೊಂದಿದ್ದೇವೆ. ಬುಮ್ರಾ ಮತ್ತು ಭುವಿ ಆರಂಭದೊಂದಿಗೆ, ಆಶಾದಾಯಕವಾಗಿ ಅವರು ಸ್ವಿಂಗ್‌ನೊಂದಿಗೆ ಜೋಡಿಯನ್ನು ಪಡೆಯುತ್ತಾರೆ. ವೆಂಕಟೇಶ್ ಅಯ್ಯರ್ ಪದಾರ್ಪಣೆ ಇದೇ ಮೊದಲ ಬಾರಿಗೆ ಏಕದಿನ ತಂಡಕ್ಕೆ ಪದಾರ್ಪಣೆಯನ್ನು ಮಾಡಿದ್ದಾರೆ. ವಿರಾಟ್ ನಾಯಕತ್ವದಲ್ಲಿ ನಮ್ಮ ತಂಡ ಉತ್ತಮ ಸಾಧನೆ ಮಾಡಿದೆ. ಇದೀಗ ಅವರು ನಮ್ಮ ಜೊತೆಗಿದ್ದು ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ತಂತ್ರಗಳು ಮತ್ತು ತಂತ್ರಗಳ ವಿಷಯದಲ್ಲಿ ಕೆಲವು ವಿಷಯಗಳನ್ನು ಪ್ರಯತ್ನಿಸಲು ಬಯಸುತ್ತೇನೆ ಎಂದಿದ್ದಾರೆ.
#TeamIndia all set and raring to go for the 1st ODI 💪💪#SAvIND pic.twitter.com/rfIMTxVZ2q
— BCCI (@BCCI) January 19, 2022
ರೋಹಿರ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕ ಕೆ.ಎಲ್.ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ. ಶಿಖರ್ ಧವನ್ ಸ್ಥಾನ ಪಡೆದುಕೊಂಡಿದ್ದು, ವಿರಾಟ್ ಕೊಯ್ಲಿ, ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಅದ್ಬುತ್ ಫಾರ್ಮ್‌ನಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ವೆಂಕಟೇಶ್ ಅಯ್ಯರ್ ಹಾಗೂ ಶಾರ್ದೂಲ್ ಠಾಕೂರ್ ಆಲ್‌ರೌಂಡರ್ ಕೋಟಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಶ್ಚಿನ್, ಭುವನೇಶ್ವರ್ ಕುಮಾರ್, ಬೂಮ್ರಾ ಹಾಗೂ ಚಹಾಲ್ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಾಡಲಿದ್ದಾರೆ.
A look at our Playing XI for the 1st game.
— BCCI (@BCCI) January 19, 2022
Congratulations to Venkatesh Iyer who makes his ODI debut for #TeamIndia. 👏 👏
Follow the match ➡️ https://t.co/PJ4gV8SFQb #SAvIND pic.twitter.com/8oUN1wDBXy
ಉಭಯ ತಂಡಗಳು ಇಂತಿವೆ:
ಭಾರತ : ಕೆಎಲ್ ರಾಹುಲ್ (ನಾಯಕ ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿ.ಕೀ.), ವೆಂಕಟೇಶ್ ಅಯ್ಯರ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್
1st ODI. South Africa XI: Q de Kock (wk), J Malan, A Markram, R van der Dussen, T Bavuma (c), D Miller, A Phehlukwayo, K Maharaj, T Shamsi, M Jansen, L Ngidi https://t.co/PJ4gV8SFQb #SAvIND
— BCCI (@BCCI) January 19, 2022
ದಕ್ಷಿಣ ಆಫ್ರಿಕಾ : ಕ್ವಿಂಟನ್ ಡಿ ಕಾಕ್(ವಿ.ಕೀ.), ಜಾನ್ನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ( ನಾಯಕ ), ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಲುಂಗಿ ಎನ್‌ಗಿಡಿ.
ಇದನ್ನೂ ಓದಿ : ವಿರಾಟ್ ಕೊಹ್ಲಿ ರಾಜೀನಾಮೆ ಹಿಂದಿದೆ ಆ ಮೂರು ಕಾರಣ
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಮತ್ತು ರಶೀದ್ ಖಾನ್ ಖರೀದಿಸಿದ ಅಹಮದಾಬಾದ್
(India vs South Africa 1st ODI Live Score Updates: South Africa opt to bat; Venkatesh debuts)