ಸೋಮವಾರ, ಏಪ್ರಿಲ್ 28, 2025
HomeSportsCricketIPL 2022 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಖ್ಯಾತ ಆಟಗಾರ ಇದೀಗ ಗುಜರಾತ್‌ ಟೈಟಾನ್ಸ್‌...

IPL 2022 : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಖ್ಯಾತ ಆಟಗಾರ ಇದೀಗ ಗುಜರಾತ್‌ ಟೈಟಾನ್ಸ್‌ ತಂಡ ನೆಟ್‌ ಬೌಲರ್‌

- Advertisement -

ದೊಡ್ಡ ಯಶಸ್ಸನ್ನು ಸಾಧಿಸಲು ಹಗಲಿರುಳು ಶ್ರಮಿಸಿದ ಹಲವಾರು ಕ್ರಿಕೆಟಿಗರನ್ನು ಇತಿಹಾಸದ ಪುಟ ಸೇರುತ್ತಾರೆ. ಚೆನ್ನೂ ಸೂಪರ್‌ ಕಿಂಗ್ಸ್‌ (CSK )ತಂಡದ ಪರ್ಪಲ್ ಕ್ಯಾಪ್ ವಿಜೇತ ಬೌಲರ್‌ ಮೋಹಿತ್‌ ಶರ್ಮಾ ಇದೀಗ IPL 2022 ಗಾಗಿ ಗುಜರಾತ್ ಟೈಟಾನ್ಸ್ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಐಪಿಎಲ್ 2014 ರ ಪರ್ಪಲ್ ಕ್ಯಾಪ್ ವಿಜೇತರಾಗಿದ್ದ ಭಾರತದ ಮಾಜಿ ಸೀಮಿತ ಓವರ್‌ಗಳ ವೇಗಿ ಮೋಹಿತ್ ಶರ್ಮಾ ಅವರನ್ನು ಗುಜರಾತ್ ಟೈಟಾನ್ಸ್ ನೆಟ್ ಬೌಲರ್ ಆಗಿ ಆಯ್ಕೆ ಮಾಡಿದ ನಂತರ ಕ್ರಿಕೆಟ್ ಅಭಿಮಾನಿಗಳು ಆಘಾತಗೊಂಡಿದ್ದಾರೆ.

ಬಲಗೈ ವೇಗಿ ಚೆನ್ನೈ ಸೂಪರ್ ಕಿಂಗ್ಸ್ (CSK) MS ಧೋನಿ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಬೌಲರ್‌ ಆಗಿದ್ದರು. ಐಪಿಎಲ್‌ ಪಂದ್ಯಾವಳಿಯಲ್ಲಿ ತೋರಿದ್ದ ಪ್ರದರ್ಶನದಿಂದಾಗಿಯೇ ಬಾಂಗ್ಲಾದೇಶದಲ್ಲಿ 2014 ರಲ್ಲಿ ನಡೆದ T20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಷ್ಟೇ ಅಲ್ಲಾ ಏಕದಿನ ವಿಶ್ವಕಪ್‌ ತಂಡದ ಸದಸ್ಯರಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (IPL) 2014 ರಲ್ಲಿ, ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಪ್ರತಿನಿಧಿಸಿದ್ದು, ಐಪಿಎಲ್‌ನಲ್ಲಿ ಪರ್ಪಲ್‌ ಕ್ಯಾಪ್‌ ಪಡೆದ ಆಟಗಾರ ಅನ್ನೋ ಖ್ಯಾತಿಗೂ ಪಾತ್ರರಾಗಿದ್ದಾರೆ.

CSK Purple Cap-winner Mohit Sharma enter Gujarat Titans for IPL 2022 as net bowler
ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಚಿತ್ರಕೃಪೆ : ಬಿಸಿಸಿಐ

ಆದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಎರಡು ವರ್ಷಗಳ ಕಾಲ ಅಮಾನತ್ತು ಆಗುತ್ತಿದ್ದಂತೆಯೇ ಮೋಹಿತ್‌ ಶರ್ಮಾ ಅವರ ಬೇಡಿಕೆಯೂ ಕುಗ್ಗುವುದಕ್ಕೆ ಶುರುವಾಗಿತ್ತು. ಚೆನ್ನೈ ನಿಂದ ದೂರವಾದ ಮೋಹಿತ್‌ ಶರ್ಮಾ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಪ್ರತಿನಿಧಿಸಿದ್ದರೂ ಕೂಡ ನಿರೀಕ್ಷಿತ ಮಟ್ಟದ ಸಾಧನೆ ಸಾಧ್ಯವಾಗಲೇ ಇಲ್ಲ. ಆದರೆ ಎಂಎಸ್ ಧೋನಿ ನೇತೃತ್ವದ ತಂಡಕ್ಕೆ ಮರಳಿದರು ಆದರೆ ಹಳೆಯ ದಿನಗಳಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮೋಹಿತ್ ಶರ್ಮಾ 2020 ರಲ್ಲಿ ದೆಹಲಿ ಕ್ಯಾಪಿಟಲ್ಸ್‌ ತಂಡವನ್ನು ಸೇರಿಸಿಕೊಂಡಿದ್ದರು. ಆದರೆ ಕೇವಲ ಒಂದೇ ಒಂದು ಪಂದ್ಯವನ್ನಾಡಲು ಮಾತ್ರವೇ ಅವಕಾಶ ದೊರೆತಿತ್ತು. ಆದರೆ ಆ ಪಂದ್ಯದಲ್ಲಿಯೂ ಕೇವಲ ಒಂದು ವಿಕೆಟ್‌ ಮಾತ್ರವೇ ಪಡೆಯಲು ಅವರಿಂದ ಸಾಧ್ಯವಾಗಿತ್ತು.

CSK Purple Cap-winner Mohit Sharma enter Gujarat Titans for IPL 2022 as net bowler
image credit : bcci/ipl

ಆದರೆ ಈ ಬಾರಿಯ ಐಪಿಎಲ್‌ ಮೆಗಾ ಹರಾಜಿನಲ್ಲಿ ಅವರನ್ನು ಯಾವುದೇ ಪ್ರಾಂಚೈಸಿಯೂ ಖರೀದಿ ಮಾಡಲಿಲ್ಲ. ಇದೇ ಕಾರಣಕ್ಕೆ ಅವರು ಗುಜರಾತ್‌ ಟೈಟಾನ್ಸ್ ತಂಡದ ನೆಟ್‌ ಬೌಲರ್‌ ಆಗಿ ಸೇರಿಕೊಂಡಿದ್ದಾರೆ. ಈ ಸುದ್ದಿ ಹೊರಬಿದ್ದ ಕೂಡಲೇ ಒಬ್ಬ ಕ್ರಿಕೆಟಿಗನ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ನೆಟ್ಟಿಗರು ಬೆರಗಾಗಿದ್ದಾರೆ. CSK ಮಾಜಿ ಆಟಗಾರ ಮೋಹಿತ್ ಶರ್ಮಾ IPL ನಲ್ಲಿ ಕೆಲವು ಭರವಸೆಯ ಬೌಲಿಂಗ್ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು 86 ಪಂದ್ಯಗಳನ್ನು ಆಡಿದ್ದಾರೆ ಮತ್ತು 26.85 ಸರಾಸರಿಯಲ್ಲಿ 92 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು ಭಾರತ ಪರ 26 ಏಕದಿನ ಮತ್ತು 8 T20I ಪಂದ್ಯಗಳನ್ನು ಆಡಿದ್ದಾರೆ, ಕ್ರಮವಾಗಿ 31 ಮತ್ತು 6 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

CSK Purple Cap-winner Mohit Sharma enter Gujarat Titans for IPL 2022 as net bowler
image credit : bcci/ipl

ಗುಜರಾತ್ ಟೈಟಾನ್ಸ್ (GT) IPL 2022 ಸಂಪೂರ್ಣ ತಂಡ

ಹಾರ್ದಿಕ್ ಪಾಂಡ್ಯ, ರಶೀದ್ ಖಾನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಜೇಸನ್ ರಾಯ್, ಲಾಕಿ ಫರ್ಗುಸನ್, ಅಭಿನವ್ ಸದಾರಂಗನಿ, ರಾಹುಲ್ ತೆವಾಟಿಯಾ, ನೂರ್ ಅಹಮದ್, ಸಾಯಿ ಕಿಶೋರ್, ವಿಜಯ್ ಶಂಕರ್, ಜಯಂತ್ ಯಾದವ್, ಡೊಮಿನಿಕ್ ಡ್ರೇಕ್ಸ್, ದರ್ಶನ್ ನಲ್ಕಂಡೆ, ಯಶ್ ಜೊಸೆಫ್ ದಯಾಳ್, ಪ್ರದೀಪ್ ಶ್ರೀವಾನ್ ದಯಾಳ್, , ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ವರುಣ್ ಆರೋನ್, ಬಿ ಸಾಯಿ ಸುದರ್ಶನ್.

ಇದನ್ನೂ ಓದಿ : ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್‌ಶಾಕ್‌ : IPL 2022 ರಿಂದ ಹೊರಗುಳಿಯಲಿದ್ದಾರೆ ಆಲ್ ರೌಂಡರ್ ಮೊಯಿನ್ ಅಲಿ

ಇದನ್ನೂ ಓದಿ : ಲಕ್ನೋ ಸೂಪರ್ ಜೈಂಟ್ಸ್‌ಗೆ ಶಾಕ್‌ ಕೊಟ್ಟ ಬಿಸಿಬಿ : ಟಸ್ಕಿನ್ ಅಹ್ಮದ್ ಐಪಿಎಲ್‌ ಆಡೋದು ಅನುಮಾನ

(CSK Purple Cap-winner Mohit Sharma enter Gujarat Titans for IPL 2022 as net bowler)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular