Ben stokes: ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಬೆನ್ ಸ್ಟೋಕ್ಸ್ ದಿಢೀರ್ ವಿದಾಯವು ಅಭಿಮಾನಿಗಳಿಗೆ ಆಘಾತ ಮೂಡಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರದ ನಡೆಯಲಿರುವ ಪಂದ್ಯವು ಬೆನ್ ಸ್ಟೋಕ್ಸ್ ವೃತ್ತಿ ಜೀವನದ ಕೊನೆಯ ಏಕದಿನ ಪಂದ್ಯವಾಗಿರಲಿದೆ. ರಿವರ್‌ಸೈಡ್ ಗ್ರೌಂಡ್‌ನಲ್ಲಿ ತವರು ಅಭಿಮಾನಿಗಳ ಸಮ್ಮುಖದಲ್ಲಿ ಬೆನ್ಸ್ಟೋಕ್ಸ್ ತಮ್ಮ ವೃತ್ತಿ ಜೀವನದ ಕೊನೆಯ ಆಟವನ್ನು ಆಡಲಿದ್ದಾರೆ .
ಈ ಸಂಬಂಧ ಟ್ವಿಟರ್ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದಿರುವ ಬೆನ್ ಸ್ಟೋಕ್ಸ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವುದು ಕಠಿಣ ಎನಿಸುತ್ತಿದೆ. ಆದರೆ ಕ್ರಿಕೆಟ್ನ ಮೂರು ವಿಭಾಗಗಳಲ್ಲಿ ಆಡುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ನನಗೆ ನನ್ನ ಸಹ ಆಟಗಾರರಿಗೆ 100 ಪ್ರತಿಶತ ನೆರವು ನೀಡುವುದು ನನ್ನಿಂದಾಗದು. ಇಂಗ್ಲೆಂಡ್ ತಂಡದ ವೇಳಾಪಟ್ಟಿಯಂತೆ ಕ್ರಿಕೆಟ್ನ ಮೂರು ವಿಭಾಗಗಳಲ್ಲಿ ಆಡಲು ನನ್ನ ಶರೀರವು ಸ್ಪಂದಿಸುವುದಿಲ್ಲ. ಹೀಗಾಗಿ ನನ್ನ ಸ್ಥಾನದಲ್ಲಿ ಇನ್ನೊಬ್ಬ ಕ್ರಿಕೆಟಿಗ ಆಡಲಿ. 11 ವರ್ಷಗಳ ಕಾಲ ನಾನು ಏಕದಿನ ಪಂದ್ಯಗಳಲ್ಲಿ ಆಡಿದ್ದೇನೆ. ಇನ್ಮುಂದೆ ನಾನು ಟೆಸ್ಟ್ ಕಡೆಗೆ ಸಂಪೂರ್ಣ ಗಮನ ನೀಡುತ್ತೇನೆ. ಹಾಗೂ ಟಿ 20 ಕ್ರಿಕೆಟ್ಗೂ ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದು ಬರೆದು ಕೊಂಡಿದ್ದಾರೆ.
❤️🏴 pic.twitter.com/xTS5oNfN2j
— Ben Stokes (@benstokes38) July 18, 2022
ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಜೀವನಕ್ಕೆ ಪಾದಾರ್ಪಣೆ ಮಾಡಿರುವ ಬೆನ್ ಸ್ಟೋಕ್ಸ್ ಈವರೆಗೆ 104 ಪಂದ್ಯಗಳನ್ನು ಆಡಿದ್ದಾರೆ. 2912 ರನ್ಗಳನ್ನು ಸ್ಟೋಕ್ಸ್ ಗಳಿಸಿದ್ದು ಇದರಲ್ಲಿ 3 ಶತಕ ಹಾಗೂ 21 ಅರ್ಧ ಶತಕಗಳು ಇವರ ಹೆಸರಿನಲ್ಲಿ ದಾಖಲಾಗಿದೆ. ಈವರೆಗೆ ಏಕದಿನ ಕ್ರಿಕೆಟ್ನಲ್ಲಿ ಬೆನ್ ಸ್ಟೋಕ್ಸ್ 74 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಕೆಲವು ಸಮಯದ ಹಿಂದೆಯಷ್ಟೇ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಟೆಸ್ಟ್ ಕ್ರಿಕೆಟ್ನ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕನಾದ ಬಳಿಕ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 3-0 ಅಂತರದಲ್ಲಿ ಗೆಲುವು ಕಂಡಿದ್ದಾರೆ. ಟೀಂ ಇಂಡಿಯಾ ವಿರುದ್ಧದದ ಟೆಸ್ಟ್ ಪಂದ್ಯದಲ್ಲಿ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿದ್ದಾರೆ.
ಇದನ್ನು ಓದಿ : Ranbir Kapoor-Alia Bhatt : ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರಾ ಆಲಿಯಾ ಭಟ್:ಕುತೂಹಲ ಮೂಡಿಸಿದ ರಣಬೀರ್ ಹೇಳಿಕೆ
ಇದನ್ನೂ ಓದಿ : Virat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ : ಕೊಹ್ಲಿ, ರೋಹಿತ್ ಫ್ಯಾನ್ಸ್ ಫುಲ್ ಖುಷ್
England all-rounder Ben Stokes to retire from ODIs after Tuesday’s match against SA