ಮುಲ್ತಾನ್ : ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ (England tour of Pakistan) ಆಟಗಾರರು ಗುರುವಾರ ಸಂಜೆ ಒಂದು ಕ್ಷಣ ಬೆಚ್ಚಿ ಬಿದ್ದ ಘಟನೆ ಸಂಭವಿಸಿದೆ. ಕಾರಣ ಇಂಗ್ಲೀಷ್ ಆಟಗಾರರು ತಂಗಿದ್ದ ಮುಲ್ತಾನ್’ನ (Multan) ಹೋಟೆಲ್ ಹೊರ ಭಾಗದಲ್ಲಿ ಕೇಳಿಸಿದ ಗುಂಡಿನ ಸದ್ದು.
ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿರುವ ಇಂಗ್ಲೆಂಡ್ ತಂಡ 2ನೇ ಟೆಸ್ಟ್ ಪಂದ್ಯಕ್ಕಾಗಿ ಮುಲ್ತಾನ್’ನ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿತ್ತು. ಗುರುವಾರ ಸಂಜೆ ಹೋಟೆಲ್’ನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗುಂಡಿನ ಸದ್ದು ಕೇಳಿಸಿದೆ. ಮೊದಲೇ ಪಾಕಿಸ್ತಾನ ಬಾಂಬ್ ಸ್ಫೋಟ, ಭಯೋತ್ಪಾದಕ ದಾಳಿಗಳಿಗೆ ಫೇಮಸ್. ಹೀಗಾಗಿ ಗುಂಡಿನ ಸದ್ದು ಕೇಳಿಸಿದ ಕ್ಷಣ ಹೋಟೆಲ್’ನಲ್ಲಿದ್ದ ಇಂಗ್ಲೆಂಡ್ ಆಟಗಾರರು ಒಂದು ಕ್ಷಣ ಬೆಚ್ಚಿ ಬಿದ್ದರು.
ಆದರೆ ಆ ಗುಂಡಿನ ಸದ್ದು ಯಾವ ಬಾಂಬ್ ಸ್ಫೋಟವೂ ಅಲ್ಲ, ಭಯೋತ್ಪಾದಕ ಕೃತ್ಯವೂ ಅಲ್ಲ ಎಂಬುದು ತಿಳಿದು ಬಂದ ನಂತರ ಇಂಗ್ಲೆಂಡ್ ಆಟಗಾರರು ನಿಟ್ಟುಸಿರು ಬಿಟ್ಟಿದ್ದಾರೆ. ಅಸಲಿಗೆ ಎರಡು ಸ್ಥಳೀಯ ಗುಂಪುಗಳ ಮಧ್ಯೆ ಜಗಳವಾಗಿ ಗನ್’ನಿಂದ ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ನಂತರ ಪೊಲೀಸರು ಆ ಗ್ಯಾಂಗ್’ನ ಸದಸ್ಯರನ್ನು ಅರೆಸ್ಟ್ ಮಾಡಿದ್ದಾರೆ.
15 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಆತಿಥೇಯರ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡುತ್ತಿದೆ. ರಾವಲ್ಪಿಂಡಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯವನ್ನು 74 ರನ್’ಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ, ಇವತ್ತು (ಶುಕ್ರವಾರ) ಮುಲ್ತಾನ್ ಕ್ರಿಕೆಟ್ ಗ್ರೌಂಡ್’ನಲ್ಲಿ (Multan Cricket Ground) ಆರಂಭವಾಗಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ : Exclusive: Srinivas Chandrasekaran Video analyst: ಭಾರತ ವಿರುದ್ಧ ಬಾಂಗ್ಲಾದೇಶದ ಐತಿಹಾಸಿಕ ಸರಣಿ ಗೆಲುವಿನ ಹಿಂದೆ ಕನ್ನಡಿಗನ ಕಮಾಲ್
ಇದನ್ನೂ ಓದಿ : Rohith Sharma thump injury : ಬಾಂಗ್ಲಾ ಪ್ರವಾಸದಿಂದ ರೋಹಿತ್ ಔಟ್, ಮುಂಬೈಗೆ ವಾಪಸ್; ಕೊನೆಯ ಏಕದಿನ ಪಂದ್ಯಕ್ಕೆ ರಾಹುಲ್ ಕ್ಯಾಪ್ಟನ್
ರಾವಲ್ಪಿಂಡಿ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್’ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನವಿತ್ತಿದ್ದ ಇಂಗ್ಲೆಂಡ್ 101 ಓವರ್’ಗಳಲ್ಲಿ 6.50ರ ರನ್’ರೇಟ್’ನಲ್ಲಿ 657 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇಂಗ್ಲೆಂಡ್ ಪರ ಟಾಪ್—5 ಬ್ಯಾಟ್ಸ್’ಮನ್’ಗಳ ಪೈಕಿ ನಾಲ್ವರು ಅಮೋಘ ಶತಕಗಳನ್ನು ಬಾರಿಸಿದ್ದರು.
England tour of Pakistan : The sound of gunshots near the hotel where the England team was staying, the English players were shocked