ಸೋಮವಾರ, ಏಪ್ರಿಲ್ 28, 2025
HomeSportsCricketEngland World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್...

England World record : 50 ಓವರ್‌ಗಳಲ್ಲಿ 498 ರನ್ : ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿಶ್ವದಾಖಲೆ

- Advertisement -

ಆಮ್’ಸ್ಟಲ್ವೀನ್: ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್”ನಲ್ಲಿ ನೂತನ ವಿಶ್ವದಾಖಲೆ ( England World record ) ನಿರ್ಮಿಸಿದೆ. ನೆದರ್ಲೆಂಡ್ಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 50 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಕಲೆ ಹಾಕುವ ಮೂಲಕ ಹೊಸ ದಾಖಲೆ ಬರೆದಿದೆ.

ಇದು ತಂಡವೊಂದು ಏಕದಿನ ಕ್ರಿಕೆಟ್’ನ ಒಂದೇ ಇನ್ನಿಂಗ್ಸ್”ನಲ್ಲಿ ಗಳಿಸಿದ ಅತ್ಯಧಿಕ ಮೊತ್ತ (highest score in an odi). ಈ ಮೂಲಕ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದೆ. 2018ರಲ್ಲಿ ನಾಟಿಂಗ್”ಹ್ಯಾಮ್’ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 481 ರನ್ ಗಳಿಸಿದ್ದು ಇಲ್ಲಿಯವರೆಗಿನ ವಿಶ್ವದಾಖಲೆಯಾಗಿತ್ತು. ಆ ದಾಖಲೆಯನ್ನು ಇಂಗ್ಲೆಂಡ್ ಉತ್ತಮ ಪಡಿಸಿಕೊಂಡಿದೆ.

ನೆದರ್ಲೆಂಡ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 2ನೇ ಓವರ್”ನಲ್ಲೇ ಜೇಸನ್ ರಾಯ್ ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್’ಗೆ ಜೊತೆಯಾದ ಫಿಲ್ ಸಾಲ್ಟ್ ಮತ್ತು ಡಾವಿಡ್ ಮಲಾನ್ 222 ರನ್”ಗಳ ಜೊತೆಯಾಟವಾಡಿದ್ರು. ಫಿಲ್ ಸಾಲ್ಟ್ 93 ಎಸೆತಗಳಲ್ಲಿ 122 ರನ್ ಗಳಿಸಿದ್ರೆ, ಡಾವಿಡ್ ಮಲಾನ್ 109 ಎಸೆತಗಳಲ್ಲಿ 125 ರನ್ ಬಾರಿಸಿದ್ರು.

ಇಂಗ್ಲೆಂಡ್ ಇನ್ನಿಂಗ್ಸ್ ನಾಗಾಲೋಟ ಪಡೆದುಕೊಂಡದ್ದು ಜೋಸ್ ಬಟ್ಲರ್ (Jos Butler) ಮತ್ತು ಲಿಯಾಮ್ ಲಿವಿಂಗ್”ಸ್ಟನ್ (Liam Livingstone) ಜೊತೆಯಾದ ಬಳಿಕ. ನೆದರ್ಲೆಂಡ್ಸ್ ದಾಳಿಯನ್ನು ಚಿಂದಿ ಉಡಾಯಿಸಿದ ಈ ಜೋಡಿ ಮುರಿಯದ 5ನೇ ವಿಕೆಟ್’ಗೆ ಕೇವಲ 32 ಎಸೆತಗಳಲ್ಲಿ 91 ರನ್ ಸೇರಿಸಿತು. ಸಿಡಿಲಬ್ಬರದ ಶತಕ ಬಾರಿಸಿದ ಜೋಸ್ ಬಟ್ಲರ್ ಕೇವಲ 70 ಎಸೆತಗಳಲ್ಲಿ 7 ಬೌಂಡರಿ ಮತ್ತು 14 ಸಿಕ್ಸರ್ಸ್ ನೆರವಿನೊಂದಿಗೆ ಅಜೇಯ 162 ರನ್ ಗಳಿಸಿದ್ರೆ, ಲಿವಿಂಗ್”ಸ್ಟನ್ ಕೇವಲ 22 ಎಸೆತಗಳ ಮುಂದೆ 6 ಬೌಂಡರಿ ಮತ್ತು 6 ಸಿಕ್ಸರ್ಸ್ ಸಹಿತ ಅಜೇಯ 66 ರನ್ ಸಿಡಿಸಿದ್ರು.

ಇದನ್ನೂ ಓದಿ : News Next Exclusive : ಕೆ.ಎಲ್ ರಾಹುಲ್‌ಗೆ ಜರ್ಮನಿಯಲ್ಲಿ ಸರ್ಜರಿ, ಇಂಗ್ಲೆಂಡ್ ಪ್ರವಾಸದಿಂದ ಔಟ್

ಇದನ್ನೂ ಓದಿ : ರಣಜಿ ಸೆಮಿಫೈನಲ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಪಾನಿಪುರಿ ಹುಡುಗ

England World record in ODI Score 498 runs in 50 overs Netherlands

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular