ಸೋಮವಾರ, ಏಪ್ರಿಲ್ 28, 2025
HomeSportsCricketKrunal Pandya : ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

Krunal Pandya : ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

- Advertisement -

ಮುಂಬೈ: ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಟ್ವೀಟರ್‌ ಖ್ಯಾತೆ ಹ್ಯಾಕ್‌ ಆಗುತ್ತಿರುವ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ (Krunal Pandya) ಟ್ವೀಟರ್‌ ಖಾತೆ ಹ್ಯಾಕ್‌ ಆಗಿದೆ. ಬಿಟ್‌ ಕಾಯಿನ್‌ ಮೂಲಕ ಖಾತೆಯನ್ನು ಮಾರಾಟ ಮಾಡುತ್ತಿರುವುದಾಗಿ ಪೋಸ್ಟ್‌ ಪೋಸ್ಟ್‌ ಮಾಡಲಾಗಿದೆ. ಬಿಟ್‌ ಕಾಯಿನ್‌ ಹ್ಯಾಕರ್ಸ್‌ ಈ ಕೃತ್ಯವೆಸಗಿರೋ ಶಂಕೆ ವ್ಯಕ್ತವಾಗಿದೆ.

ವೆಸ್ಟ್‌ಇಂಡಿಸ್‌ ವಿರುದ್ದ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ ಸರಣಿಗೆ ಕೃನಾಲ್‌ ಪಾಂಡ್ಯವನ್ನು ತಂಡದಿಂದ ಕೈ ಬಿಡಲಾಗಿದೆ. ಹಲವು ವರ್ಷಗಳಿಂದಲೂ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಕ್ರುನಾಲ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಕೂಡ ಈ ಬಾರಿ ಬಿಡುಗಡೆ ಮಾಡಿದೆ. ಹೀಗಾಗಿ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಕೃನಾಲ್‌ ಯಾವ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಅನ್ನೋ ಕುತೂಹಲ ವ್ಯಕ್ತವಾಗಿದೆ.

ಇದೀಗ ವೆಸ್ಟ್‌ ಇಂಡಿಸ್‌ ವಿರುದ್ದದ ಸರಣಿಗೆ ಟೀಂ ಇಂಡಿಯಾ ಪ್ರಕಟವಾದ ಒಂದು ದಿನದ ನಂತರ ಕೃನಾಲ್‌ ಪಾಂಡ್ಯ ಅವರ ಟ್ವೀಟರ್‌ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಆಲ್‌ರೌಂಡರ್‌ ದೀಪಕ್‌ ಹೂಡಾ ಜೊತೆಗೆ ಪಾಂಡ್ಯ ಕಿರಿಕ್‌ ಮಾಡಿಕೊಂಡಿದ್ದರು. ವೆಸ್ಟ್‌ ಇಂಡಿಸ್‌ ವಿರುದ್ದದ ಸರಣಿಗೆ ಪಾಂಡ್ಯ ಬದಲು ದೀಪಕ್‌ ಹೂಡಾ ಅವರಿಗೆ ಸ್ಥಾನವನ್ನು ನೀಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಹಾರ್ದಿಕ್‌ ಪಾಂಡ್ಯ ಮುಂದಿನ ಐಪಿಎಲ್‌ ಪಂದ್ಯಾವಳಿಯಲ್ಲಿ ಅಹಮದಾಬಾದ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್‌ ತಂಡದಿಂದ ಹೊರಬಿದ್ದಿರುವ ಕ್ರುನಾಲ್‌ ಪಾಂಡ್ಯ ಕೂಡ ಅಹಮದಾಬಾದ್‌ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಐಪಿಎಲ್‌ನಲ್ಲಿ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿರುವ ಕೃನಾಲ್‌ ಪಾಂಡ್ಯ ಮೆಗಾ ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಸೇಲ್‌ ಆಗುವ ಸಾದ್ಯತೆಯಿದೆ.

ವೆಸ್ಟ್‌ಇಂಡಿಸ್‌ ವಿರುದ್ದದ ಸರಣಿಗೆ ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್ , ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್.

ವೆಸ್ಟ್‌ಇಂಡಿಸ್‌ ವಿರುದ್ದದ ಸರಣಿಗೆ ಭಾರತ T20I ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್ , ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್. ಸಿರಾಜ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್.

ಇದನ್ನೂ ಓದಿ : ಲಕ್ನೋ ತಂಡಕ್ಕೆ ಲಕ್ನೋ ಸೂಪರ್‌ ಜೈಂಟ್ಸ್‌ ಹೆಸರಿಟ್ಟ RPS ಗ್ರೂಫ್‌

ಇದನ್ನೂ ಓದಿ : Jason Holder IPL 2022 ಆರ್‌ಸಿಬಿ ತಂಡಕ್ಕೆ ಜೇಸನ್ ಹೋಲ್ಡರ್ ನಾಯಕ

ಇದನ್ನೂ ಓದಿ : ವೆಸ್ಟ್ ಇಂಡೀಸ್ ಸರಣಿಗೆ ಮುನ್ನ ಸ್ಲಿಮ್‌ ಆಂಡ್‌ ಫಿಟ್‌ ಆದ ರೋಹಿತ್ ಶರ್ಮಾ

( India famous cricketer, Mumbai Indians ex-all Rounder Krunal Pandya twitter account has been hacked)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular