ಧರ್ಮಶಾಲಾ : ಶ್ರೇಯಸ್ ಅಯ್ಯರ್. ಸಂಜು ಸ್ಯಾಮ್ಸನ್ ಹಾಗೂ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ದದ ಟಿ20 ಸರಣಿಯ (India vs Sri Lanka 2nd T20I) ಎರಡನೇ ಪಂದ್ಯವನ್ನು 7 ವಿಕೆಟ್ ಅಂತರದಿಂದ ಜಯಿಸುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡಕ್ಕೆ ಆರಂಭಿಕರಾದ ಪುತಮ್ ನಿಶಾಂಕ್ ಹಾಗೂ ಗುಣತಿಲಕ ಉತ್ತಮ ಆರಂಭವೊದಗಿಸಿದ್ರು. ಗುಣತಿಲಕ 28 ರನ್ ಗಳಿಸಿ ಔಟಾದ್ರೆ, ನಿಶಾಂಕ 52 ಎಸೆತಗಳಲ್ಲಿ ಭರ್ಜರಿ 75 ರನ್ ಬಾರಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ನೆರವಾದ್ರು. ಒಂದೆಡೆಯಲ್ಲಿ ವಿಕೆಟ್ ಉರುಳುತ್ತಿದ್ದರೂ ಕೂಡ ನಿಶಾಂಕ ಭರ್ಜರಿ ಅರ್ಧಶತ ಸಿಡಿಸಿದ್ರು. ನಂತರ ಜೊತೆಯಾದ ನಾಯ ಶನಕ ಕೇವಲ 19 ಎಸೆತಗಳಲ್ಲಿ 47 ರನ್ ಬಾರಿಸುವ ಮೂಲಕ ಶ್ರೀಲಂಕಾ ಉತ್ತಮ ಮೊತ್ತ ಗಳಿಸುವಲ್ಲಿ ನೆರವಾದ್ರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳಲ್ಲಿ5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು. ಭಾರತ ಪರ ಭುವನೇಶ್ವರ್ ಕುಮಾರ್, ಬೂಮ್ರಾ, ಹರ್ಷಲ್ ಪಟೇಲ್, ಚಹಾಲ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
ಶ್ರೀಲಂಕಾ ನೀಡಿದ್ದ 184 ರನ್ ಸವಾಲು ಬೆನ್ನತ್ತಿದ ಭಾರತ ತಂಡಕ್ಕೆ ಚಾಮೀರ್ ಆರಂಭಿಕ ಆಘಾತ ನೀಡಿದ್ರು. 2 ಎಸೆತಗಳಲ್ಲಿ 1 ರನ್ ಸಿಡಿಸಿ ಆಟವಾಡುತ್ತಿದ್ದ ರೋಹಿತ್ ಶರ್ಮಾ ಅವರನ್ನು ಬೌಲ್ಡ್ ಮಾಡಿದ್ರು. ನಂತರ ಇಶಾನ್ ಕಿಶಾನ್ ಜೊತೆಗೆ ಶ್ರೇಯಸ್ ಅಯ್ಯರ್ ಇನ್ನಿಂಗ್ಸ್ ಕಟ್ಟುವುದಕ್ಕೆ ಮುಂದಾದ್ರೂ ಕೂಡ ಇಶಾನ್ ಕಿಶನ್ 19 ರನ್ ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ರು. ಶ್ರೇಯಸ್ ಅಯ್ಯರ್ ಜೊತೆಯಾದ ಸಂಜು ಸ್ಯಾಮ್ಸನ್ ಉತ್ತಮ ಜೊತೆಯಾಟ ನಡೆಸಿದ್ರು. ಭಾರತ 128 ರನ್ ಗಳಿಸಿದ್ದಾಗ ಸಂಜು ಸ್ಯಾಮ್ಸನ್ 29 ರನ್ ಗಳಿಸಿ ಫೆವಿಲಿಯನ್ ಹಾದಿ ಹಿಡಿದ್ರು. ನಂತರ ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ ಸ್ಟೋಟಕ ಆಟಕ್ಕೆ ಮನ ಮಾಡಿದ್ರು. ಒಂದೆಡೆಯಲ್ಲಿ ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 74 ರನ್ ಬಾರಿಸಿದ್ರೆ, ಜಡೇಜಾ ಕೇವಲ 18 ಎಸೆತಗಳಲ್ಲಿ 45 ರನ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದಿತ್ತರು. ಭಾರತ ಅಂತಿಮವಾಗಿ 17.1 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 186ರನ್ ಬಾರಿಸುವ ಮೂಲಕ ಸರಣಿಯನ್ನು (India vs Sri Lanka 2nd T20I) ಕೈವಶ ಮಾಡಿಕೊಂಡಿದೆ. ಲಹಿರು ಕುಮಾರ್ 2 ಹಾಗೂ ಚಾಮೀರ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
11th T20I win on the bounce for #TeamIndia 👏👏@Paytm #INDvSL pic.twitter.com/zsrm3abCls
— BCCI (@BCCI) February 26, 2022
ಸಂಕ್ಷೀಪ್ತ ಸ್ಕೋರ್ :
ಭಾರತ : ಶ್ರೇಯಸ್ ಅಯ್ಯರ್ 74, ರವೀಂದ್ರ ಜಡೇಜಾ 45, ಸಂಜು ಸ್ಯಾಮ್ಸ್ 39, ಇಶಾನ್ ಕಿಶನ್ 16, ಲಹಿರು ಕುಮಾರ್ 31/2, ಚಾಮೀರ 39/1
ಶ್ರೀಲಂಕಾ : ನಿಶಾಂಕ 75, ಶನಕ 47, ಗುಣತಿಲಕ 38, ಭವನೇಶ್ವರ್ 1/36, ಬೂಮ್ರಾ 1/24, ಹರ್ಷಲ್ ಪಟೇಲ್ 1/52 , ಚಹಾಲ್ 1/27, ರವೀಂದ್ರ ಜಡೇಜಾ 1/37.
Mr Jay Shah, Honorary Secretary, BCCI & Mr Arun Singh Dhumal, Honorary Treasurer, BCCI in attendance for the second India-Sri Lanka T20I. @JayShah | @ThakurArunS | #INDvSL | @Paytm | pic.twitter.com/M1OAN0hupK
— BCCI (@BCCI) February 26, 2022
ಇದನ್ನೂ ಓದಿ : ಸಚಿನ್ ತೆಂಡೂಲ್ಕರ್ ಬಳಿ ಕ್ರಿಕೆಟ್ ಕಲಿಯಲು ಅವಕಾಶ !
ಇದನ್ನೂ ಓದಿ : ಹೊಸ ಸ್ವರೂಪದಲ್ಲಿ IPL 2022 : 2 ಗುಂಪು, 10 ತಂಡ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
India vs Sri Lanka 2nd T20 Live Score updates: Shreyas, Jadeja batting india win 7 wicket win series victory