ಮುಂಬೈ: ಭಾರತ ಮತ್ತು ಪ್ರವಾಸಿ ಶ್ರೀಲಂಕಾ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿಯ (India Vs Sri Lanka T20) ಮೊದಲ ಪಂದ್ಯ ನಾಳೆ (ಜನವರಿ 3) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. 2023ನೇ ವರ್ಷ ಭಾರತದ ಕ್ರಿಕೆಟ್ ಅಭಿಯಾನ ಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಟೀಮ್ ಇಂಡಿಯಾ ಗೆಲುವಿನೊಂದಿಗೆ ವರ್ಷದ ಅಭಿಯಾನ ಆರಂಭಿಸುವ ವಿಶ್ವಾಸದಲ್ಲಿದೆ.
ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮುನ್ನಡೆಸಲಿದ್ದು, ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.ಯುವ ಆಟಗಾರರ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದು, ಸರಣಿ ಗೆಲುವಿನ ತವಕದಲ್ಲಿದೆ. ಈಗಾಗಲೇ ಟಿ20 ತಂಡಕ್ಕೆ ಪ್ರತ್ಯೇಕ ನಾಯಕನನ್ನು ನೇಮಕ ಮಾಡಲು ಬಿಸಿಸಿಐ ಮುಂದಾಗಿದ್ದು, ಈ ಸರಣಿ ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ಸತ್ವಪರೀಕ್ಷೆಯೂ ಹೌದು.
ಯುವ ಬಲಗೈ ಓಪನರ್ ಶುಭಮನ್ ಗಿಲ್ ಮತ್ತು ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಇಶಾನ್ ಕಿಶನ್ ಭಾರತದ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. 3ನೇ ಕ್ರಮಾಂಕದಲ್ಲಿ ಉಪನಾಯಕ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. 4ನೇ ಕ್ರಮಾಂಕದಲ್ಲಿ ಕೇರಳದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI:
1.ಹಾರ್ದಿಕ್ ಪಾಂಡ್ಯ (ನಾಯಕ), 2.ಶುಭಮನ್ ಗಿಲ್, 3.ಇಶಾನ್ ಕಿಶನ್ (ವಿಕೆಟ್ ಕೀಪರ್), 4.ಸೂರ್ಯಕುಮಾರ್ ಯಾದವ್, 5.ಸಂಜು ಸ್ಯಾಮ್ಸನ್, 6.ದೀಪಕ್ ಹೂಡ, 7.ಅಕ್ಷರ್ ಪಟೇಲ್, 8.ವಾಷಿಂಗ್ಟನ್ ಸುಂದರ್, 9.ಯುಜ್ವೇಂದ್ರ ಚಹಲ್, 10.ಅರ್ಷದೀಪ್ ಸಿಂಗ್, 11.ಉಮ್ರಾನ್ ಮಲಿಕ್.
India Vs Sri Lanka T20 : ಭಾರತ Vs ಶ್ರೀಲಂಕಾ ಮೊದಲ ಟಿ20 :
ಪಂದ್ಯ ಆರಂಭ: ಸಂಜೆ 7ಕ್ಕೆ
ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
ಇದನ್ನೂ ಓದಿ : ರಿಷಬ್ ಪಂತ್ ಆರೋಗ್ಯದಲ್ಲಿ ಚೇತರಿಕೆ : ಖಾಸಗಿ ವಾರ್ಡ್‌ಗೆ ಶಿಫ್ಟ್
ಇದನ್ನೂ ಓದಿ : Virat Kohli 50 ODI hundreds: 2023 ವಿರಾಟ್ ಕೊಹ್ಲಿ ವರ್ಷ, ಈ ವರ್ಷವೇ 50 ಏಕದಿನ ಶತಕ ಬಾರಿಸಲಿದ್ದಾರೆ ಕಿಂಗ್ ಕೊಹ್ಲಿ
ಇದನ್ನೂ ಓದಿ : ಭಾರತದಲ್ಲಿ ವಿಶ್ವಕಪ್ ಗೆಲ್ಲಲು ಕಾಂಗರೂಗಳ ಮಾಸ್ಟರ್‌ಪ್ಲಾನ್, ಹೇಗಿದೆ ಗೊತ್ತಾ ಆಸ್ಟ್ರೇಲಿಯಾ ರಣವ್ಯೂಹ ?
ಹೆಡ್ To ಹೆಡ್ (ಕಳೆದ 5 ಪಂದ್ಯಗಳಲ್ಲಿ) (India Vs Sri Lanka Head to Head in last 5 t20 matches) :
ಸೆಪ್ಟೆಂಬರ್ 6, 2022: ಶ್ರೀಲಂಕಾಗೆ 6 ವಿಕೆಟ್ ಜಯ
ಫೆಬ್ರವರಿ 27, 2022: ಭಾರತಕ್ಕೆ 6 ವಿಕೆಟ್ ಜಯ
ಫೆಬ್ರವರಿ 26, 2022: ಭಾರತಕ್ 7 ವಿಕೆಟ್ ಜಯ
ಫೆಬ್ರವರಿ 24, 2022: ಭಾರತಕ್ಕೆ 62 ರನ್ ಜಯ
ಜುಲೈ 29, 2021: ಶ್ರೀಲಂಕಾಗೆ 7 ವಿಕೆಟ್ ಜಯ
New Year New Challenge, Tomorrow India Vs Sri Lanka First T20; Here is the playing XI, match time, live telecast details