ಸೇಂಟ್ ಕಿಟ್ಸ್: (3 Arshdeep singh) ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಮೂವರು ಅರ್ಷದೀಪ್ ಸಿಂಗ್’ಗಳು ಆಡಿದ್ರು. ಇದು ಹೇಗೆ ಸಾಧ್ಯ..? ಟೀಮ್ ಇಂಡಿಯಾದಲ್ಲಿರುವುದು ಒಬ್ಬನೇ ಅರ್ಷದೀಪ್ ಸಿಂಗ್. ಆತ ಪಂಜಾಬ್”ನ ಯುವ ಮಧ್ಯಮ ವೇಗದ ಬೌಲರ್ ! ಹೀಗಿರುವಾಗ ಮೂವರು ಅರ್ಷದೀಪ್’ಗಳು ಒಂದೇ ಪಂದ್ಯದಲ್ಲಿ ಆಡಿದ್ದಾದ್ರೂ ಹೇಗೆ? ಕುತೂಹಲ ಅಡಗಿರುವುದು ಅಲ್ಲೇ.
ಸೇಂಟ್ ಕಿಟ್ಸ್’ನ ವಾರ್ನರ್ ಪಾರ್ಕ್ ಮೈದಾನದಲ್ಲಿ ಸೋಮವಾರ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಭಾರತೀಯ ಕಾಲಮಾನ ರಾತ್ರಿ 8ಕ್ಕೆ ಶುರುವಾಗಬೇಕಿದ್ದ ಪಂದ್ಯ ಆರಂಭವಾಗಿತ್ತು ರಾತ್ರಿ 10ಕ್ಕೆ. ಆಟಗಾರರ ಜರ್ಸಿ ಸೇರಿದಂತೆ ಕ್ರಿಕೆಟ್ ಪರಿಕರಗಳನ್ನೊಳಗೊಂಡ ಕಿಟ್ ಸೇಂಟ್ ಟ್ರಿನಿಡಾಡ್’ನಿಂದ ಸೇಂಟ್ ಕಿಟ್ಸ್”ಗೆ ತಲುಪುವುದು ವಿಳಂಬವಾದ ಕಾರಣ ಪಂದ್ಯವೂ ತಡವಾಗಿ ಆರಂಭಗೊಂಡಿತ್ತು.
ಭಾರತ ತಂಡದ ಕೆಲ ಆಟಗಾರರ ಜರ್ಸಿಗಳೂ ಸರಿಯಾದ ಸಮಯಕ್ಕೆ ಸೇಂಟ್ ಕಿಟ್ಸ್ ತಲುಪಿರಲಿಲ್ಲ. ಹೀಗಾಗಿ ಆರಂಭಿಕನಾಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್, ಎಡಗೈ ಮಧ್ಯಮ ವೇಗಿ ಅರ್ಷದೀಪ್ ಸಿಂಗ್ ಅವರ ಹೆಚ್ಚುವರಿ ಜರ್ಸಿಯನ್ನೇ ಧರಿಸಿ ಬ್ಯಾಟಿಂಗ್ ಮಾಡುವಂತಾಯಿತು.
ಭಾರತ ಯುವ ವೇಗದ ಬೌಲರ್ ಆವೇಶ್ ಖಾನ್ ಅವರ ಜರ್ಸಿಯೂ ಸೇಂಟ್ ಕಿಟ್ಸ್ ತಲುಪಿರಲಿಲ್ಲ. ಹೀಗಾಗಿ ಆವೇಶ್ ಖಾನ್ ಕೂಡ ಅರ್ಷದೀಪ್ ಸಿಂಗ್ ಅವರ ಜರ್ಸಿಯನ್ನೇ ಧರಿಸಿ ಆಡುವಂತಾಯ್ತು.
ವಾರ್ನರ್ ಪಾರ್ಕ್ ಮೈದಾನದಲ್ಲಿ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ನಡೆಸಿತು. ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್”ನ ಮೊದಲ ಎಸೆತದಲ್ಲೇ ಔಟಾದ್ರು. ವಿಂಡೀಸ್ ಮಧ್ಯಮ ವೇಗಿ ಓಬೆಡ್ ಮೆಕೋಯ್ ಅವರ ಮಾರಕ ದಾಳಿಗೆ (6/17) ತತ್ತರಿಸಿದ ಟೀಮ್ ಇಂಡಿಯಾ 19.4 ಓವರ್’ಗಳಲ್ಲಿ ಕೇವಲ 138 ರನ್ನಿಗೆ ಆಲೌಟಾಯ್ತು.
ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 19.2 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಗೆಲುವು ದಾಖಲಿಸಿ 5 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು. ಸರಣಿಯ 3ನೇ ಪಂದ್ಯ ಇಂದು (ಮಂಗಳವಾರ) ಸೇಂಟ್ ಕಿಟ್ಸ್ ಮೈದಾನದಲ್ಲೇ ನಡೆಯಲಿದೆ.
ಇದನ್ನೂ ಓದಿ : India Vs West Indies 2nd T20 : ಭಾರತವನ್ನು ಸೋಲಿಸಿದ್ದು ನಾಯಕ ರೋಹಿತ್.. ಹಿಟ್‌ಮ್ಯಾನ್ ಯಾಕೆ ಹೀಗ್ ಮಾಡಿದ್ರು ?
ಇದನ್ನೂ ಓದಿ : Shreyas Iyer : ಶ್ರೇಯಸ್ ಅಯ್ಯರ್‌ಗೆ ಪದೇ ಪದೇ ಅವಕಾಶದ ಗುಟ್ಟೇನು..? ಮುಂಬೈ ಲಾಬಿನಾ..? ದ್ರಾವಿಡ್ ಇದ್ದೂ ಹೀಗಾದ್ರೆ ಹೇಗೆ..?
India Vs West Indies T20 : 3 Arshdeep singh in single match, how is this possible