ಅಹಮದಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ( IPL 2022) ಗುಜರಾತ್ ಟೈಟಾನ್ಸ್ ತಂಡ (Gujarat Titans) ರಾಜಸ್ಥಾನ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ಐಪಿಎಲ್‌ನಲ್ಲೇ ಟ್ರೋಫಿಯನ್ನು ಜಯಿಸಿದ ಸಾಧನೆಯನ್ನು ಮಾಡಿದೆ. ಗುಜರಾತ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಭರ್ಜರಿ ಗೆಲುವು ದಾಖಲಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ನ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ರಾಜಸ್ಥಾನ್ ರಾಯಲ್ಸ್ ಅನ್ನು ಒಂಬತ್ತು ವಿಕೆಟ್‌ಗೆ 130 ರನ್‌ಗಳಿಗೆ ಕಟ್ಟಿಹಾಕಿದ್ದರು.. ಹಾರ್ದಿಕ್ ಪಾಂಡ್ಯ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್ ನೀಡಿ ಮೂರು ವಿಕೆಟ್ ಕಬಳಿಸಿದರೆ, ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ನಾಲ್ಕು ಓವರ್‌ಗಳಲ್ಲಿ ಕೇವಲ 18 ರನ್‌ಗಳಿಗೆ ಒಂದು ವಿಕೆಟ್ ಪಡೆದರು. ರಾಜಸ್ಥಾನದ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ರು, ಆದರೆ ಗುಜರಾತ್ ಬೌಲಿಂಗ್ ಬಲದ ಮುಂದೆ ಯಾವೊಬ್ಬ ಆಟಗಾರ ಕೂಡ ಉತ್ತಮ ಆಟದ ಪ್ರದರ್ಶನ ನೀಡುವಲ್ಲಿ ವಿಫಲರಾದ್ರು.
ಜೋಸ್ ಬಟ್ಲರ್ (35 ಎಸೆತಗಳಲ್ಲಿ 39) ಮತ್ತು ಯಶಸ್ವಿ ಜೈಸ್ವಾಲ್ (16 ಎಸೆತಗಳಲ್ಲಿ 22) ಬ್ಯಾಟ್‌ನಿಂದ ಸ್ವಲ್ಪ ರನ್ ಗಳಿಸಿದ್ರು, ಆದರೆ ಆರೆಂಜ್ ಕ್ಯಾಪ್ ಹೋಲ್ಡರ್ ಬಟ್ಲರ್ ಫೈನಲ್ ಪಂದ್ಯದಲ್ಲಿ ಗುಜರಾತ್ ಬೌಲಿಂಗ್ ದಾಳಿಗೆ ಎಡವಿದ್ರು. ಇನ್ನು ನಾಯಕ ಸಂಜು ಸ್ಯಾಮ್ಸನ್ ಕೂಡ ನಾಯಕ ಆಟವಾಡಲಿಲ್ಲ. ದೇವದತ್ ಪಡಿಕ್ಕಲ್ ಖಾತೆ ತೆರೆಯಲು ಎಂಟು ಎಸೆತಗಳನ್ನು ತೆಗೆದುಕೊಂಡರು ಮತ್ತು ಎರಡು ರನ್ ಗಳಿಸಿದ ನಂತರ ಮರಳಿದರು. ಮೂರು ಎಸೆತಗಳ ನಂತರ ಬಟ್ಲರ್ ಕೂಡ ವಿಕೆಟ್ ಕಳೆದುಕೊಂಡರು. ಹಾರ್ದಿಕ್ ಕೂಡ ಶಿಮ್ರಾನ್ ಹೆಟ್ಮೆಯರ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ್ದು, ಇದೀಗ ರಾಜಸ್ಥಾನದ ಸ್ಕೋರ್ 5 ವಿಕೆಟ್ ನಷ್ಟಕ್ಕೆ 94 ಆಗಿತ್ತು. ರವಿಚಂದ್ರನ್ ಅಶ್ವಿನ್ ಔಟಾಗುವುದರೊಂದಿಗೆ ರಾಜಸ್ಥಾನ ದೊಡ್ಡ ಮೊತ್ತ ಪೇರಿಸುವ ಕನಸನ್ನು ಕಳೆದುಕೊಂಡಿತ್ತು.
ರಾಜಸ್ಥಾನ ರಾಯಲ್ಸ್ ತಂಡ ನೀಡಿದ್ದ ಸುಲಭ ಗುರಿಯನ್ನು ಬೆನ್ನತ್ತಲು ಹೊರಟ ಗುಜರಾತ್ ತಂಡಕ್ಕೆ ಕನ್ನಡಿಗ ಪ್ರಸಿದ್ದ ಕೃಷ್ಣ ಆಘಾತವನ್ನು ನೀಡಿದ್ರು. ವೃದ್ದಿಮಾನ್ ಸಾಹ ಅವರನ್ನು ಕೇವಲ 5 ರನ್ ಗಳಿಗೆ ಔಟ್ ಮಾಡಿದ್ರು. ಇನ್ನೊಂದೆಡೆಯಲ್ಲಿ ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಮ್ಯಾಥ್ಯೂ ವೇಡ್ ಅವರನ್ನು ಬೋಲ್ಟ್ ಬಲಿ ಪಡೆದ್ರು. ಆದರೆ ಹಾರ್ದಿಕ್ ಪಟೇಲ್ ಜೊತೆಯಾದ ಶುಭಮನ್ ಗಿಲ್ಲ ವಿಕೆಟ್ ಗೆ ಕಚ್ಚಿಕೊಂಡು ಬ್ಯಾಟಿಂಗ್ ನಡೆಸಿದ್ರು. ಅಂತಿಮವಾಗಿ ಶುಭಮನ್ ಗಿಲ್ 45, ಹಾರ್ದಿಕ್ ಪಾಂಡ್ಯ 34 ಹಾಗೂ ಡೇವಿಡ್ ಮಿಲ್ಲರ್ 32 ರನ್ ಆಟದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 133 ರನ್ ಬಾರಿಸುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಜಯಿಸಿದೆ.
ಐಪಿಎಲ್ ವಿಜೇತರು :
ರಾಜಸ್ಥಾನ್ ರಾಯಲ್ಸ್: 2008
ಮುಂಬೈ ಇಂಡಿಯನ್ಸ್: 2013, 2015, 2017, 2019, 2020
ಚೆನ್ನೈ ಸೂಪರ್ ಕಿಂಗ್ಸ್: 2010, 2011, 2018,2021
ಕೋಲ್ಕತ್ತಾ ನೈಟ್ ರೈಡರ್ಸ್: 2012, 2014
ಸನ್‌ರೈಸರ್ಸ್ ಹೈದರಾಬಾದ್: 2016
ಗುಜರಾತ್ ಟೈಟಾನ್ಸ್: 2022
Final. Gujarat Titans Won by 7 Wicket(s) (Winners) https://t.co/8QjB0b5n7z #Final #TATAIPL #IPL2022
— IndianPremierLeague (@IPL) May 29, 2022
ಇದನ್ನೂ ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್
ಇದನ್ನೂ ಓದಿ : BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್ ಖಷ್
IPL 2022 GT Vs RR Final Gujarat Titans Maiden Title