ಲಕ್ನೋ : ಇಂಡಿಯನ್ ಪ್ರೀಮಿಯರ್ ಲೀಗ್ 2022ರಲ್ಲಿ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಸೇರ್ಪಡೆಯಾಗಿವೆ. ಎರಡೂ ತಂಡಗಳು ತಲಾ ಮೂವರು ಆಟಗಾರರ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ಇದೀಗ ಲಕ್ನೋ ತಂಡ ಕೊನೆಗೂ ತಂಡದ ಹೆಸರನ್ನು ಘೋಷಣೆ ಮಾಡಿದೆ. ಆರ್ ಪಿ ಸಂಜೀವ್ ಗೋಯೆಂಕಾ ಗ್ರೂಫ್ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಎಂದು ನಾಮಕರಣ ಮಾಡಿದೆ.
ಲಕ್ನೋ ತಂಡ ಮಾಲೀಕರಾಗಿರುವ ಆರ್‌ಪಿಎಸ್ ಗ್ರೂಫ್ ಚೇರ್ಮೆನ್ ಡಾ.ಸಂಜೀವ ಗೋಯೆಂಕಾ ಅವರು ಅಧಿಕೃತವಾಗಿ ತಂಡದ ಹೆಸರನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ ತಂಡಕ್ಕೆ ಹೆಸರನ್ನು ಸೂಚಿಸಿರುವವರಿಗೆ ಧನ್ಯವಾದವನ್ನು ಸಮರ್ಪಿಸಿದ್ದಾರೆ. ಲಕ್ನೋ ತಂಡಕ್ಕೆ ಆರ್‌ಪಿಎಸ್‌ಜಿ ಗ್ರೂಪ್ 7,090 ಕೋಟಿ ರೂ. ಬಿಡ್ ಮಾಡುವ ಮೂಲಕ ಐಪಿಎಲ್‌ನ ತಂಡವನ್ನು ಖರೀದಿಸಿದ್ದರು.
And here it is,
— Lucknow Super Giants (@TeamLucknowIPL) January 24, 2022
Our identity,
Our name…. 🤩🙌#NaamBanaoNaamKamao #LucknowSuperGiants @BCCI @IPL @GautamGambhir @klrahul11 pic.twitter.com/OVQaw39l3A
ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್ ನಾಯಕ, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್ ಸೇರ್ಪಡೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮುಂಬರುವ ಮೆಗಾ ಹರಾಜಿಗೆ ಮೊದಲು ಲಕ್ನೋ ತಂಡ ಕನ್ನಡಿಗ ಕೆ.ಎಲ್.ರಾಹುಲ್ ಸೇರಿದಂತೆ ಮೂವರು ಆಟಗಾರರನ್ನು ಆಯ್ಕೆ ಮಾಡಿದೆ. ಕನ್ನಡಿಗ ಕೆ.ಎಲ್. ರಾಹುಲ್, ವಿದೇಶಿ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿದೆ. ಲಕ್ನೋ ತಂಡ ಕೊನೆಗೂ ಕೆ.ಎಲ್.ರಾಹುಲ್ ಅವರ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಆಲ್‌ರೌಂಡರ್ ರಶೀದ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ರಶೀದ್ ಖಾನ್ ಲಕ್ನೋ ಜೊತೆಗೆ ಸಹಿ ಹಾಕಿಲ್ಲ ಬದಲಾಗಿ, ಅವರು ಅಹಮದ್ ಬಾದ್ ತಂಡದ ಪರ ಸಹಿ ಮಾಡಿದ್ದಾರೆ.
Team owner, Dr. Sanjiv Goenka, Chairman @rpsggroup unveils the name for the Lucknow IPL team. 😊👏🏼#LucknowSuperGiants #NaamBanaoNaamKamao #IPL2022 @IPL @BCCI @GautamGambhir @klrahul11 pic.twitter.com/TvGaZlIgFR
— Lucknow Super Giants (@TeamLucknowIPL) January 24, 2022
ಲಕ್ನೋ ತಂಡ ಕೆಎಲ್ ರಾಹುಲ್ ಅವರನ್ನು 17 ಕೋಟಿ ರೂಪಾಯಿಗೆ ಖರೀದಿಸಿದ್ದು, ನಾಯಕತ್ವವನ್ನು ವಹಿಸಿದೆ. ಆಸ್ಟ್ರೇಲಿಯಾದ ಆಟಗಾರ ಆಟಗಾರ ಮಾರ್ಕಸ್ ಸ್ಟೊಯಿನಿಸ್ 9.2 ಕೋಟಿ ರೂ. ಹಾಗೂ ಪಂಜಾಬ್ ಕಿಂಗ್ಸ್ ತಂಡದ ಬೌಲರ್ ರವಿ ಬಿಷ್ಣೋಯ್ ಅವರನ್ನು 4 ಕೋಟಿ ರೂ. ಖರೀದಿ ಮಾಡಿದೆ. ಇದೀಗ ಲಕ್ನೋ ತಂಡ ಮೆಗಾ ಹರಾಜಿನಲ್ಲಿ ೫೮ ಕೋಟಿ ರೂಪಾಯಿಗೆ ಉಳಿದ ಆಟಗಾರನ್ನು ಖರೀದಿ ಮಾಡಬೇಕಾಗಿದೆ.
ಇದನ್ನೂ ಓದಿ : ಕೆಎಲ್ ರಾಹುಲ್ ಐಪಿಎಲ್ 2022 ರ ದುಬಾರಿ ಆಟಗಾರ
ಇದನ್ನೂ ಓದಿ : ಐಪಿಲ್ ಮೆಗಾ ಹರಾಜಿಗೆ ಆಟಗಾರರ ಪಟ್ಟಿ ಸಿದ್ದ: ಆಟಗಾರರ ಮೂಲ ಬೆಲೆ ಎಷ್ಟು ಗೊತ್ತಾ
( IPL 2022 : RPS Group, named after the Lucknow Super Giants)