ಗುಜರಾತ್ : ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ (Jadeja’s wife gets BJP ticket)ಮುಂಬರುವ ಗುಜರಾತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ರವೀಂದ್ರ ಜಡೇಜಾ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ, “ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದಿದ್ದಕ್ಕಾಗಿ ನನ್ನ ಹೆಂಡತಿಗೆ ಅಭಿನಂದನೆಗಳು. ನೀವು ಮಾಡಿದ ಎಲ್ಲಾ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಬಗ್ಗೆ ಹೆಮ್ಮೆ ಇದೆ. ನಿಮಗೆ ನನ್ನ ಶುಭಾಶಯಗಳು, ನೀವು ಮುಂದುವರಿಯಿರಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿ’ ಎಂದು ಅಭಿನಂದಿಸಿದ್ದಾರೆ. ಹಾಗೆ “ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ಅಮಿತ್ ಶಾ ಜಿ ಅವರ ಸಾಮರ್ಥ್ಯಗಳಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಉದಾತ್ತ ಕೆಲಸ ಮಾಡಲು ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಧನ್ಯವಾದವನ್ನು ಹೇಳಿದ್ದಾರೆ.
Jai hind 🇮🇳 pic.twitter.com/JWdbV0brab
— Ravindrasinh jadeja (@imjadeja) November 10, 2022
ಇಂದು ಬಿಡುಗಡೆಯಾದ 160 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿ ರಿವಾಬಾ ಜಡೇಜಾ ಆಯ್ಕೆಯಾಗಿದ್ದಾರೆ. ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಎಂ ಜಡೇಜಾ ಅವರನ್ನು ಪಕ್ಷ ಕೈಬಿಟ್ಟಿದ್ದಾರೆ. ರಿವಾಬಾ ಜಡೇಜಾ ಶಿಕ್ಷಣದಿಂದ ಮೆಕ್ಯಾನಿಕಲ್ ಇಂಜಿನಿಯರ್. ಕಾಂಗ್ರೆಸ್ ಹಿರಿಯ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿದ್ದಾರೆ. 2016 ರಲ್ಲಿ ರಿವಾಬಾ ರವೀಂದ್ರ ಜಡೇಜಾ ಅವರನ್ನು ವಿವಾಹವಾಗಿದ್ದರು.ರಜಪೂತ ಪರಂಪರೆ ಮತ್ತು ಮಾಜಿ ರಾಜವಂಶಸ್ಥೆಯಾಗಿರುವ ರಿವಾಬಾ ಜಾಮ್‌ನಗರ-ಸೌರಾಷ್ಟ್ರ ಪ್ರದೇಶದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದಾರೆ.ಕಳೆದ ಕೆಲವು ತಿಂಗಳುಗಳಿಂದಲೂ ಅವರು ಚುನಾವಣೆಗಾಗಿ ಹಳ್ಳಿಹಳ್ಳಿಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : Jadeja’s wife gets BJP ticket : ವಿಧಾನಸಭಾ ಚುನಾವಣೆ: ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್
ಇದನ್ನೂ ಓದಿ : India vs England : ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಹಿನಾಯ ಸೋಲು : ವಿಶ್ವಕಪ್ ಗೆಲ್ಲುವ ಕನಸು ಭಗ್ನ
ಇದನ್ನೂ ಓದಿ : Semi-final phobia for India: ಭಾರತಕ್ಕೆ ಸೆಮೀಸ್ ಫೋಬಿಯಾ. 7 ವರ್ಷಗಳಲ್ಲಿ 4 ವಿಶ್ವಕಪ್ ಸೆಮಿಫೈನಲ್ ಸೋತ ಟೀಮ್ ಇಂಡಿಯಾ
ಭಾರತೀಯ ಪುರುಷರ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ, ಈ ವರ್ಷ ಏಷ್ಯಾಕಪ್ ವೇಳೆ ಮೊಣಕಾಲಿನ ಗಾಯದಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಿಂದ ಹೊರಗೆ ಉಳಿದಿರುತ್ತಾರೆ.
Jadeja’s wife gets BJP ticket : BJP ticket for wife: Ravindra Jadeja thanked PM Modi