Ranji Trophy Karnataka: ಪಾಂಡಿಚೇರಿ ವಿರುದ್ಧ ಮೊದಲ ದಿನವೇ ಕನ್ನಡಿಗರ ಭರ್ಜರಿ ಆಟ

ಬೆಂಗಳೂರು: ಪಾಂಡಿಚೇರಿ ವಿರುದ್ಧ ( Karnataka vs Puducherry ) ಮಂಗಳವಾರ ಆರಂಭಗೊಂಡ ರಣಜಿ ಪಂದ್ಯದ ( Ranji Trophy 2022-23 ) ಮೊದಲ ದಿನವೇ ಕರ್ನಾಟಕ ಭರ್ಜರಿ ಆಟವಾಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಎಲೈಟ್ ‘ಸಿ’ ಗ್ರೂಪ್’ನ ತನ್ನ 2ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕದ ತಂಡ (Karnataka Vs Pondicherry) ಮೊದಲ ದಿನವೇ ಮೇಲುಗೈ ಸಾಧಿಸಿತು. ಪಾಂಡಿಚೇರಿ ವಿರುದ್ಧ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಆರಂಭಿಸಿದ ಪಾಂಡಿಚೇರಿ, ಆತಿಥೇಯ ಕರ್ನಾಟಕ ತಂಡದ ಮಧ್ಯಮ ವೇಗಿಗಳ ಮಾರಕ ದಾಳಿಗೆ ತತ್ತರಿಸಿತು.

ಯುವ ಬಲಗೈ ಸ್ವಿಂಗ್ ಬೌಲರ್ ವಿದ್ವತ್ ಕಾವೇರಪ್ಪ 31 ರನ್’ಗಳೊಳಗೆ ಪಾಂಡಿಚೇರಿ ಆರಂಭಿಕರಿಬ್ಬರನ್ನೂ ಪೆವಿಲಿಯನ್’ಗಟ್ಟಿ ಕರ್ನಾಟಕಕ್ಕೆ ಅಮೋಘ ಆರಂಭ ತಂದುಕೊಟ್ಟರು. ಮಧ್ಯಮ ಕ್ರಮಾಂಕದ ಅನುಭವಿ ಆಟಗಾರ ಪರಾಸ್ ಡೋಗ್ರಾರನ್ನು ಅಲ್ಪ ಮೊತ್ತಕ್ಕೆ (9 ರನ್) ಕಟ್ಟಿ ಹಾಕಿದ ಕಾವೇರಪ್ಪ, 16 ಓವರ್’ಗಳಲ್ಲಿ ಕೇವಲ 52 ರನ್ನಿತ್ತು 4 ವಿಕೆಟ್ ಕಬಳಿಸಿದರು. ಮತ್ತೊಬ್ಬ ಬಲಗೈ ಮಧ್ಯಮ ವೇಗಿ ವೈಶಾಖ್ ವಿಜಯ್ ಕುಮಾರ್ 39 ರನ್ನಿಗೆ 3 ವಿಕೆಟ್ ಉರುಳಿಸಿ ಪಾಂಡಿಚೇರಿಗೆ ಆಘಾತ ನೀಡಿದ್ರು. ಅನುಭವಿ ವೇಗಿ ರೋನಿತ್ ಮೋರೆ (2/34) 2 ವಿಕೆಟ್ ಪಡೆದ್ರೆ, ಉಳಿದೊಂದು ವಿಕೆಟ್ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಪಾಲಾಯಿತು. ಆತಿಥೇಯದ ಸಂಘಟಿತ ದಾಳಿಗೆ ತತ್ತರಿಸಿದ ಪಾಂಡಿಚೇರಿ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 170 ರನ್’ಗಳಿಗೆ (54 ಓವರ್) ಆಲೌಟಾಯಿತು.

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಮತ್ತು ಉಪನಾಯಕ ಆರ್.ಸಮರ್ಥ್ ಉತ್ತಮ ಆರಂಭ ಒದಗಿಸಿದರು. ನಾಯಕ-ಉಪನಾಯಕ ಜೋಡಿ ಮೊದಲ ವಿಕೆಟ್’ಗೆ 111 ರನ್ ಸೇರಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ನಾಯಕ ಮಯಾಂಕ್ 91 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ಔಟಾದ್ರೆ, ಉಪನಾಯಕ ಆರ್.ಸಮರ್ಥ್ 97 ಎಸೆತಗಳಲ್ಲಿ 9 ಬೌಂಡರಿಗಳ ನೆರವಿನಿಂದ ಅಜೇಯ 59 ರನ್ ಗಳಿಸಿ 2ನೇ ದಿನಕ್ಕೆ ನೈಟ್ ವಾಚ್’ಮನ್ ರೋನಿತ್ ಮೋರೆ ಜೊತೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ : Karnataka star to captain Sunrisers IPL: ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕನ್ನಡಿಗ ನಾಯಕ ?

ಇದನ್ನೂ ಓದಿ : IPL Players Auction : ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಗೇಲ್, ಎಬಿಡಿ, ರೈನಾ, ಉತ್ತಪ್ಪ

Karnataka vs Puducherry Ranji Trophy 2022 First Day Karnataka Lead

Comments are closed.