ಭಾನುವಾರ, ಏಪ್ರಿಲ್ 27, 2025
HomeSportsCricketLucknow IPL 2022 : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್...

Lucknow IPL 2022 : ಲಕ್ನೋ ತಂಡಕ್ಕೆ ಕೆ.ಎಲ್.ರಾಹುಲ್‌ ನಾಯಕ, ಮಾರ್ಕಸ್ ಸ್ಟೊಯಿನಿಸ್, ರವಿ ಬಿಷ್ಣೋಯ್ ಸೇರ್ಪಡೆ

- Advertisement -

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮುಂಬರುವ ಮೆಗಾ ಹರಾಜಿಗೆ ಮೊದಲು, ಎರಡು ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್‌ ತಂಡಗಳು ಡ್ರಾಫ್ಟ್‌ ಪಿಕ್‌ ಮೂಲಕ ಮೂವರು ಆಟಗಾರರ ಆಯ್ಕೆಗೆ ಬಿಸಿಸಿಐ ಅವಕಾಶವನ್ನು ನೀಡಿತ್ತು. ಇದೀಗ ಲಕ್ನೋ ತಂಡ (Lucknow IPL 2022) ಕನ್ನಡಿಗ ಕೆ.ಎಲ್.ರಾಹುಲ್‌ ಸೇರಿದಂತೆ ಮೂವರು ಆಟಗಾರರನ್ನು ಆಯ್ಕೆ ಮಾಡಿದೆ.

ಲಕ್ನೋ ಹಾಗೂ ಅಹಮದಾಬಾದ್‌ ತಂಡಗಳಿಗೆ ಡ್ರಾಫ್ಟ್‌ ಪಿಕ್‌ ಮೂಲಕ ಆಟಗಾರರ ಆಯ್ಕೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ಗಡುವನ್ನು ಜನವರಿ 22 ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಲಕ್ನೋ ಫ್ರಾಂಚೈಸ್ ಮೂರು ಆಟಗಾರರನ್ನು ಆಯ್ಕೆ ಮಾಡಿದೆ. ಕನ್ನಡಿಗ KL ರಾಹುಲ್, ವಿದೇಶಿ ಆಟಗಾರ ಮಾರ್ಕಸ್ ಸ್ಟೊಯಿನಿಸ್ ಮತ್ತು ರವಿ ಬಿಷ್ಣೋಯ್ ಅವರನ್ನು ಆಯ್ಕೆ ಮಾಡಿದೆ. ಲಕ್ನೋ ತಂಡ ಕೊನೆಗೂ ಕೆ.ಎಲ್.ರಾಹುಲ್‌ ಅವರ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಆಲ್‌ರೌಂಡರ್‌ ರಶೀದ್‌ ಖಾನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ರಶೀದ್ ಖಾನ್ ಲಕ್ನೋ ಜೊತೆಗೆ ಸಹಿ ಹಾಕಿಲ್ಲ ಬದಲಾಗಿ, ಅವರು ಅಹಮದ್ ಬಾದ್ ತಂಡದ ಪರ ಸಹಿ ಮಾಡಿದ್ದಾರೆ.

ಲಕ್ನೋ ತಂಡ ಕೆಎಲ್ ರಾಹುಲ್ ಅವರನ್ನು 17 ಕೋಟಿ ರೂಪಾಯಿಗೆ ಖರೀದಿಸಿದ್ದು, ನಾಯಕತ್ವವನ್ನು ವಹಿಸಿದೆ. ಆಸ್ಟ್ರೇಲಿಯಾದ ಆಟಗಾರ ಆಟಗಾರ ಮಾರ್ಕಸ್ ಸ್ಟೊಯಿನಿಸ್ 9.2 ಕೋಟಿ ರೂ. ಹಾಗೂ ಪಂಜಾಬ್‌ ಕಿಂಗ್ಸ್‌ ತಂಡದ ಬೌಲರ್‌ ರವಿ ಬಿಷ್ಣೋಯ್ ಅವರನ್ನು 4 ಕೋಟಿ ರೂ. ಖರೀದಿ ಮಾಡಿದೆ. ಇದೀಗ ಲಕ್ನೋ ತಂಡ ಮೆಗಾ ಹರಾಜಿನಲ್ಲಿ ೫೮ ಕೋಟಿ ರೂಪಾಯಿಗೆ ಉಳಿದ ಆಟಗಾರನ್ನು ಖರೀದಿ ಮಾಡಬೇಕಾಗಿದೆ.

KL ರಾಹುಲ್ ಅವರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೃತ್ತಿಜೀವನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗಾಗಿ 2013 ರಲ್ಲಿ ವಿಕೆಟ್ ಕೀಪರ್ ಆಗಿ ಪ್ರಾರಂಭಿಸಿದರು. 2014 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಆಟಗಾರರ ಹರಾಜಿನಲ್ಲಿ ಅವರನ್ನು 1 ಕೋಟಿಗೆ ಖರೀದಿಸಿತು. ನಂತರ ಅವರು 2016 ರಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡಕ್ಕೆ ಮರಳಿದ್ದರು. ಆ ಆವೃತ್ತಿಯಲ್ಲಿ ರಾಹುಲ್‌ 44.11 ರ ಸರಾಸರಿಯಲ್ಲಿ 397 ರನ್ ಗಳಿಸಿದರು. ಭುಜದ ಗಾಯದಿಂದಾಗಿ ಕೆಎಲ್ ರಾಹುಲ್ 2017 ರ ಆವೃತ್ತಿಯುದ್ದಕ್ಕೂ ಯಾವುದೇ ಪಂದ್ಯವನ್ನೂ ಆಡುವುದಕ್ಕೆ ಸಾಧ್ಯವಾಗಿರಲಿಲ್ಲ.

ಐಪಿಎಲ್ 2018 ರ ಆಟಗಾರರ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಕೆಎಲ್ ರಾಹುಲ್ ಅವರನ್ನು 11 ಕೋಟಿ ರೂ.ಗೆ ಖರೀದಿ ಮಾಡಿತ್ತು. ರಾಹುಲ್‌ ಅಬ್ಬರದ ಆಟದಿಂದಲೇ ಆವೃತ್ತಿಯಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 67 ಪಂದ್ಯಗಳಲ್ಲಿ, KL ರಾಹುಲ್ 42.06 ರ ಸರಾಸರಿಯಲ್ಲಿ 1,977 ರನ್ ಗಳಿಸಿದ್ದಾರೆ. 138.15 ರ ದರ, 16 ಅರ್ಧಶತಕಗಳು ಮತ್ತು ಶತಕ ಬಾರಿಸಿದ್ದರು.

ಇದನ್ನೂ ಓದಿ : T20 World Cup 2022 ವೇಳಾಪಟ್ಟಿ ಪ್ರಕಟ : ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಅವರು ಹರಾಜಿನ ಸಮಯದಲ್ಲಿ 4.8 ಕೋಟಿ ರೂಪಾಯಿಗಳಿಗೆ ಖರೀದಿಸಲ್ಪಟ್ಟ ನಂತರ IPL 2020 ಗಾಗಿ ದೆಹಲಿ ಕ್ಯಾಪಿಟಲ್ಸ್‌ ತಂಡದ ಪರ ಕಾಣಿಸಿಕೊಂಡಿದ್ದರು. ಪಶ್ಚಿಮ ಆಸ್ಟ್ರೇಲಿಯಾದಿಂದ ಬಂದ ಸ್ಟೊಯಿನಿಸ್, ನಿರೀಕ್ಷೆಗಳಿಗೆ ತಕ್ಕಂತೆ IPL 2020 ರಲ್ಲಿ ಅತ್ಯುತ್ತಮ ಆಲ್‌ರೌಂಡರ್‌ ಪ್ರದರ್ಶನ ನೀಡಿದ್ದಾರೆ. 350 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಅಲ್ಲದೇ IPL 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಫೈನಲ್‌ ಪ್ರವೇಶ ಕಾಣುವಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು, 13 ವಿಕೆಟ್‌ ಕಬಳಿಸಿದ್ದರು.

IPL 2022 ಹರಾಜು ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. 8 ಫ್ರಾಂಚೈಸಿಗಳು ಗರಿಷ್ಠ 4 ಆಟಗಾರರನ್ನು ಉಳಿಸಿಕೊಂಡಿವೆ. ಉಳಿದಂತೆ ಹೊಸ ತಂಡಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೂವರು ಆಟಗಾರರ ಆಯ್ಕೆಗೆ ಅವಕಾಶ ನೀಡಿತ್ತು. RPSG ಗ್ರೂಪ್ ಒಡೆತನದಲ್ಲಿರುವ ಲಕ್ನೋ ಫ್ರಾಂಚೈಸ್ ಅನ್ನು 7090 ಕೋಟಿ ರೂ. ಕೊಟ್ಟು ತಂಡವನ್ನು ಖರೀದಿ ಮಾಡಿತ್ತು.

ಇದನ್ನೂ ಓದಿ : ಹರಾಜಿನಲ್ಲಿ ವಿಟೇಂಜ್ ಕಾರು ಖರೀದಿಸಿದ ಎಂ.ಎಸ್.ದೋನಿ

ಇದನ್ನೂ ಓದಿ : 2ನೇ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಸೋಲು; ಸರಣಿ ದಕ್ಷಿಣ ಆಫ್ರಿಕಾ ಪಾಲು

(Lucknow signings KL Rahul captain and 2 more player for IPL 2022)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular