ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿ ಧೋನಿ ಹಾಗೂ ಪುತ್ರಿ ಝೀವಾ ಧೋನಿ ಜೊತೆಯಲ್ಲಿ ಜೈಪುರದಲ್ಲಿ ಕಾಂಗ್ರೆಸ್ ನಾಯಕ ಪ್ರಫುಲ್ ಪಟೇಲ್ ವಿವಾಹದಲ್ಲಿ ಕಾಣಿಸಿಕೊಂಡರು. ಈ ಅದ್ಧೂರಿ ವಿವಾಹದಲ್ಲಿ ಮಹೇಂದ್ರ ಸಿಂಗ್ ಧೋನಿ ಸಖತ್ ರೊಮ್ಯಾಂಟಿಕ್ ಮೂಡನಲ್ಲಿ ಕಾಣಿಸಿಕೊಂಡಿದ್ದು ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.(sakshi-Dhoni Romantic)

ಜನರಿಂದ ತುಂಬಿ ತುಳುಕುತ್ತಿದ್ದ ಕಾರ್ಯಕ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿಯ ಜೊತೆಯಲ್ಲಿ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡರು. ಪತಿ – ಪತ್ನಿ ಒಬ್ಬರನ್ನೊಬ್ಬರು ನೋಡುತ್ತಾ ಕುಳಿತಿರುವ ಮುದ್ದಾದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಕೇಕ್ನಂತೆ ಸೇಲ್ ಆಗ್ತಿದೆ. ಫೋಟೋದಲ್ಲಿ ಸಾಕ್ಷಿ ಹಾಗೂ ಧೋನಿ ನಡುವಿನ ಕೆಮಿಸ್ಟ್ರಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೇವಲ ಈ ಮುದ್ದಾದ ಫೋಟೋ ಮಾತ್ರವಲ್ಲದೇ ಮಹೇಂದ್ರ ಸಿಂಗ್ ಧೋನಿ ಈ ಮದುವೆ ಕಾರ್ಯಕ್ರಮದಲ್ಲಿ ಪತ್ನಿ ಸಾಕ್ಷಿ ಜೊತೆಯಲ್ಲಿ ಹೆಜ್ಜೆ ಕೂಡ ಹಾಕಿದ್ದಾರೆ. ಅದ್ಧೂರಿ ಮದುವೆಯನ್ನು ಧೋನಿ ದಂಪತಿ ತಮ್ಮದೇ ಶೈಲಿಯಲ್ಲಿ ಎಂಜಾಯ್ ಮಾಡಿದ್ದಾರೆ . ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಈ ರೀತಿಯಾಗಿ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ಧೋನಿಯನ್ನು ನೋಡಿರದ ಅಭಿಮಾನಿಗಳಂತೂ ಫುಲ್ ಖುಶ್ ಆಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿ ದಂಪತಿ ಸಾಕಷ್ಟು ಬಾರಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ನಂತರ ಸಾಕಷ್ಟು ಬಿಡುವು ಮಾಡಿಕೊಂಡಿರುವ ಧೋನಿ ಪತ್ನಿಯೊಂದಿಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹೇಂದ್ರ ಸಿಂಗ್ ಧೋನಿ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದ್ದು, ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿದೆ. ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಈ ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ಇದನ್ನು ಓದಿ :Ragini Dwivedi Injured : ರಾಗಿಣಿ ಅಭಿಮಾನಿಗಳಿಗೆ ಶಾಕ್: ತುಪ್ಪದ ಬೆಡಗಿ ಕೊಟ್ರು ಸ್ಯಾಡ್ ನ್ಯೂಸ್
ಇದನ್ನೂ ಓದಿ : Vijay Hazare Trophy 2021 : ಪಾಂಡೆ, ಸಿದ್ದಾರ್ಥ್, ಸಮರ್ಥ ಆರ್ಭಟ : ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ
mahendra singh dhoni goes romantic with wife sakshi dhoni at congress leader praful patel so wedding Sakshi-Dhoni Romantic