ಬೆಂಗಳೂರು: ಕ್ರಿಕೆಟ್’ಗೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲದ ರಾಯಚೂರಿನ ಪ್ರತಿಭೆಯೊಬ್ಬ ರಾಯಲ್ ಚಾಲೆಂಜರ್ಸ್ ಬೆಂಗಳೂರು (Manoj Bhandage) ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ನಡೆದ ಐಪಿಎಲ್ 2023 ಆಟಗಾರರ (IPL 2023 players auction) ಹರಾಜು ಪ್ರಕ್ರಿಯೆಯಲ್ಲಿ ರಾಯಚೂರಿನ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿ ಖರೀದಿಸಿದೆ. ಆ ಆಟಗಾರ ಬೇರಾರೂ ಅಲ್ಲ, ಕರ್ನಾಟಕ ತಂಡದ ಯುವ ಆಲ್ರೌಂಡರ್ ಮನೋಜ್ ಭಾಂಡಗೆ.
24 ವರ್ಷದ ಮನೋಜ್ ಭಾಂಡಗೆ ಕರ್ನಾಟಕದ ಯುವ ಆಲ್ರೌಂಡರ್. ಕರ್ನಾಟಕ ಪರ ಈಗಾಗಲೇ 10 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿರುವ ಮನೋಜ್, ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಮಿಂಚಬಲ್ಲ ಪ್ರತಿಭೆ. ಬಲಗೈ ಮಧ್ಯಮ ವೇಗದ ಬೌಲರ್ ಆಗಿರುವ ಮನೋಜ್, ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್’ಮನ್. ಈಗಾಗಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ರಾಜ್ಯ ಕ್ರಿಕೆಟ್’ನಲ್ಲಿ ಸದ್ದು ಮಾಡಿರುವ ಮನೋಜ್ ಭಾಂಡಗೆ, ಇದೀಗ ಐಪಿಎಲ್’ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಐಪಿಎಲ್ ಹರಾಜಿನಲ್ಲಿ 20 ಲಕ್ಷ ಮೂಲ ಬೆಲೆ ಹೊಂದಿದ್ದ ಮನೋಜ್ ಭಾಂಡಗೆ ಅವರನ್ನು ಅಷ್ಟೇ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿದೆ. ಮನೋಜ್ ಭಾಂಡಗೆ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಏಕೈಕ ಕನ್ನಡಿಗ. ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ತಂಡದಲ್ಲಿದ್ದ ಕರ್ನಾಟಕದ ಆಟಗಾರರಾದ ಅನೀಶ್ವರ್ ಗೌತಮ್ ಮತ್ತು ಲವ್ನೀತ್ ಸಿಸೋಡಿಯಾ ಅವರನ್ನು ಬೆಂಗಳೂರು ಫ್ರಾಂಚೈಸಿ ತಂಡದಿಂದ ರಿಲೀಸ್ ಮಾಡಿತ್ತು.
ಇದನ್ನೂ ಓದಿ : IPL 2023 Players Auction: ಯಾವ ಆಟಗಾರರು, ಯಾವ ತಂಡಗಳಿಗೆ ಸೇಲ್ ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಇದನ್ನೂ ಓದಿ : IPL Auction Sam Curran: 18.5 ಕೋಟಿಗೆ ಸ್ಯಾಮ್ ಕರನ್ ಸೇಲ್, ಗ್ರೀನ್‌ಗೆ 17.5 ಕೋಟಿ, ಸ್ಟೋಕ್ಸ್‌ಗೆ 16.25 ಕೋಟಿ
ಇದನ್ನೂ ಓದಿ : IPL Auction Mayank Agarwal: 8.25 ಕೋಟಿ ಸನ್ ರೈಸರ್ಸ್ ಹೈದರಾಬಾದ್ ಪಾಲಾದ ಮಯಾಂಕ್ ಅಗರ್ವಾಲ್
ಈ ಬಾರಿ ಕರ್ನಾಟಕದ ಆಟಗಾರರ ಪೈಕಿ ಮನೋಜ್ ಭಾಂಡಗೆ ಅವರನ್ನು ಮಾತ್ರ ಖರೀದಿಸಿದೆ. ಕರ್ನಾಟಕ ತಂಡದ ಮಾಜಿ ನಾಯಕ ಮನೀಶ್ ಪಾಂಡೆ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಮುಂದಾದರೂ ಬಿಡ್ಡಿಂಗ್ ಮೊತ್ತ 2 ಕೋಟಿಗೂ ಮೀರಿದ್ದರಿಂದ ಪಾಂಡೆ ಅವರನ್ನು ಖರೀದಿಸಲಿಲ್ಲ. 1 ಕೋಟಿ ರೂ.ಗಳ ಮೂಲ ಬೆಲೆ ಹೊಂದಿದ್ದ ಮನೀಶ್ ಪಾಂಡೆ 2.40 ಕೋಟಿ ರೂ. ಮೊತ್ತಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.
Manoj Bhandage : The Raichur talent who got a spot in the Royal Challengers Bangalore team