ದುಬೈ: (Naseem Shah age Fraud) ಪಾಕಿಸ್ತಾನದ ಯುವ ವೇಗದ ಬೌಲರ್ ನಸೀಮ್ ಶಾ (Naseem Shah), ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆ ಪಾತ್ರರಾಗಿದ್ದರು.
ಭಾರತ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದ್ದ 19 ವರ್ಷ ವಯಸ್ಸಿನ ನಸೀಮ್ ಶಾ (Naseem Shah), ತಮ್ಮ 2ನೇ ಎಸೆತದಲ್ಲೇ ಟೀಮ್ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಅವರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡಿದ್ದರು. ತಮ್ಮ ಪದಾರ್ಪಣೆಯ ಪಂದ್ಯದಲ್ಲೇ 4 ಓವರ್’ಗಲ್ಲಿ 27 ರನ್ನಿತ್ತು 2 ವಿಕೆಟ್ ಪಡೆದಿದ್ದ ಪಾಕಿಸ್ತಾನದ ಯುವ ವೇಗಿಯ ಪ್ರತಿಭೆಯ ಎಲ್ಲರೂ ಕೊಂಡಾಡಿದ್ದರು.
2018ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ನಸೀಮ್ ಶಾ (Naseem Shah) ಅವರನ್ನು ಪಾಕಿಸ್ತಾನದ ಭವಿಷ್ಯದ ತಾರೆ ಎಂದೇ ಕರೆಯಲಾಗುತ್ತಿದೆ. ಭಾರತ ವಿರುದ್ಧ ಟಿ20 ಪಂದ್ಯವಾಡುವ ಹೊತ್ತಿಗೆ ಕ್ರಿಕೆಟ್ ದಾಖಲೆಗಳ ಪ್ರಕಾರ ನಸೀಮ್ ಶಾ ವಯಸ್ಸು 19. ಆದರೆ ಇದು ಸುಳ್ಳು ಎಂಬುದಕ್ಕೆ ಪಾಕಿಸ್ತಾನದ ಪತ್ರಕರ್ತ ಸಾಜ್ ಸಾದಿಕ್ (Saj Sadiq) ಎಂಬವರು ನಾಲ್ಕು ವರ್ಷಗಳ ಹಿಂದೆ ಹಿಂದೆ ಮಾಡಿದ್ದ ಟ್ವೀಟ್ ಸಾಕ್ಷಿ ನುಡಿಯುತ್ತಿದೆ.
2018ರಲ್ಲಿ ಪಾಕ್ ಪತ್ರಕರ್ತರ ಸಾಜ್ ಸಾದಿಕ್ ಮಾಡಿದ್ದ ಟ್ವೀಟ್’ನಲ್ಲಿ ಹೀಗೆ ಬರೆಯಲಾಗಿತ್ತು. “ಪಾಕಿಸ್ತಾನ ಸೂಪರ್ ಲೀಗ್’ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ ತಂಡದ ಜೊತೆ ಒಪ್ಪಂದ ಮಾಡಿಕೊಂಡಿದ್ದ 17 ವರ್ಷದ ಪ್ರತಿಭಾವಂತ ಯುವ ವೇಗದ ಬೌಲರ್ ನಸೀಮ್ ಶಾ (Naseem Shah), ಬೆನ್ನು ನೋವಿಗೆ ಒಳಗಾಗಿದ್ದಾರೆ” ಎಂದು ಪಾಕ್ ಪತ್ರಕರ್ತ ಸಾಜ್ ಸಾದಿಕ್ (Saj Sadiq)ಟ್ವೀಟ್ ಮಾಡಿದ್ದರು. ಮೊನ್ನೆ ನಡೆದ ಭಾರತ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ನಸೀಮ್ ಶಾ ಮಿಂಚುತ್ತಿದ್ದಂತೆ ಆ ಹಳೆಯ ಟ್ವೀಟ್ ವೈರಲ್ ಆಗಿತ್ತು.
2018ರಲ್ಲಿ(Naseem Shah) ನಸೀಮ್ ಶಾಗೆ 17 ವರ್ಷ ಎಂದಾದಲ್ಲಿ, 2022ರಲ್ಲಿ 21 ವರ್ಷ ಆಗಬೇಕಿತ್ತು. ಆದರೆ ಕ್ರಿಕೆಟ್ ದಾಖಲೆಗಳ ಪ್ರಕಾರ ನಸೀಮ್ ಶಾ (Naseem Shah)ಅವರಿಗೆ ಇನ್ನೂ 19 ವರ್ಷ ಅಷ್ಟೇ. ಹಾಗಾದರೆ ನಸೀಮ್ ಶಾ (Naseem Shah) ತಮ್ಮ ನಿಜವಾದ ವಯಸ್ಸನ್ನು ಮರೆ ಮಾಚಿದ್ರಾ? ಹೌದು ಎನ್ನುತ್ತಿವೆ ಕ್ರಿಕೆಟ್ ಮೂಲಗಳು. ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಕಳೆದ ವರ್ಷ ನೀಡಿದ್ದ ಹೇಳಿಕೆಯೊಂದು ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತಿದೆ.
ಅಸಲಿ ವಯಸ್ಸನ್ನು ಮರೆ ಮಾಚಿ ವಯಸ್ಸಿನ ವಿಚಾರದಲ್ಲಿ ಕಳ್ಳಾಟವಾಡುವುದು ಪಾಕಿಸ್ತಾನ ಕ್ರಿಕೆಟಿಗರಿಗೆ ಹೊಸತೇನಲ್ಲ. ಈ ಹಿಂದೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ವಿರುದ್ಧವೂ ಇಂಥದ್ದೇ ಆರೋಪ ಕೇಳಿ ಬಂದಿತ್ತು. ಈಗ ಯುವ ವೇಗದ ಬೌಲರ್ ನಸೀಮ್ ಶಾ (Naseem Shah) ಸರದಿ.
💯#ChallengeAccepted | #Hardwork | #Cricket pic.twitter.com/mygCjlFbI8
— Naseem Shah (@iNaseemShah) July 6, 2021
ಇದನ್ನೂ ಓದಿ: ಮಿಸ್ಟರ್ 360 ಸೂರ್ಯನ ಯಶಸ್ಸಿನ ಹಿಂದೆ ರಬ್ಬರ್ ಬಾಲ್ ಮಹಿಮೆ
ಇದನ್ನೂ ಓದಿ: ನಾಳೆ ಕಡಲನಗರಿಯಲ್ಲಿ ‘ನಮೋ’ ಕಮಾಲ್ : ಟೈಟ್ ಸೆಕ್ಯೂರಿಟಿ
ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧ ನಾಗಿನ್ ಡ್ಯಾನ್ಸ್ ಮಾಡಿ ಸೇಡು ತೀರಿಸಿಕೊಂಡ ಶ್ರೀಲಂಕಾ
ಇದನ್ನೂ ಓದಿ: ಇಂದು ವಿಶ್ವ ತೆಂಗು ದಿನ : ತೆಂಗಿನಕಾಯಿಯಿಂದ ಮಾಡಬಹುದಾದ ಸವಿರುಚಿಗಳು
naseem shah age fraud pakistani saj sadiq