ravindra jadeja :ಐಪಿಎಲ್ ಎಂದಾಕ್ಷಣ ನೆನಪಾಗುವ ಹೆಸರಾಂತ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹೌದು. ಆದರೆ ಈ ಬಾರಿಯ ಸೀಸನ್ನಲ್ಲಿ ಮಾತ್ರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಹಿನ್ನೆಡೆಯನ್ನು ಅನುಭವಿಸಿತ್ತು. ಈ ಬಾರಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸಿಎಸ್ಕೆ ಹೀನಾಯ ಪ್ರದರ್ಶನ ನೀಡಿದ ಬಳಿಕ ತಮ್ಮ ನಾಯಕತ್ವವನ್ನು ಜಡಾಜಾ ಪುನಃ ಧೋನಿಗೆ ಹಿಂದಿರುಗಿಸಿದ್ದರು. ಆದರೆ ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ಸಿಎಸ್ಕೆ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ 2021 ಹಾಗೂ 2022ರ ಐಪಿಎಲ್ ಟೂರ್ನಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಇದು ಸಾಕಷ್ಟು ಅನುಮಾಗಳಿಗೆ ದಾರಿ ಮಾಡಿಕೊಟ್ಟಿದೆ.
ಐಪಿಎಲ್ 15ನೇ ಆವೃತ್ತಿ ಆರಂಭಗೊಳ್ಳಲು ಇನ್ನೇನು 2 ದಿನ ಬಾಕಿ ಇದ್ದಾಗ ಧೋನಿ ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಹೀಗಾಗಿ ಸಿಎಸ್ಕೆ ನಾಯಕತ್ವವನ್ನು ರವೀಂದ್ರ ಜಡೇಜಾರಿಗೆ ನೀಡಲಾಗಿತ್ತು. ಆದರೆ ಇದಾದ ಬಳಿಕ ಸಿಎಸ್ಕೆ ಅತ್ಯಂತ ಹೀನಾಯವಾಗಿ ಪ್ರದರ್ಶನವನ್ನು ನೀಡಿತ್ತು. ಆಡಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಸಿಎಸ್ಕೆ ಸೋಲನ್ನು ಕಂಡಿತ್ತು. ತಂಡದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತ ರವೀಂದ್ರ ಜಡೇಜಾ ಪುನಃ ಸಿಎಸ್ಕೆ ತಂಡದ ನಾಯಕತ್ವವನ್ನು ಧೋನಿಗೆ ಹಸ್ತಾಂತರಿಸಿದ್ದರು. ಇದಾದ ಬಳಿಕ ಗಾಯದ ಕಾರಣಗಳಿಂದಾಗಿ ಜಡೇಜಾ ತಂಡದಿಂದಲೂ ಹೊರಗುಳಿದಿದ್ದರು. ಸಿಎಸ್ಕೆ ತಂಡವೇ ಜಡೇಜಾರನ್ನು ತಂಡದಿಂದ ಹೊರಗಿಟ್ಟಿದೆ ಎಂಬ ಗುಮಾನಿ ಕೂಡ ಎಲ್ಲೆಡೆ ಹಬ್ಬಿತ್ತು .
ಇದಾದ ಬಳಿಕ ರವೀಂದ್ರ ಜಡೇಜಾರನ್ನು ಮೇ ತಿಂಗಳಲ್ಲಿ ಸಿಎಸ್ಕೆ ತಂಡದ ಇನ್ಸ್ಟಾಗ್ರಾಂ ಖಾತೆಯಿಂದ ಅನ್ಫಾಲೋ ಮಾಡಲಾಗಿತ್ತು, 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಇರುವ ಜಡೇಜಾರನ್ನೇ ಅನ್ಫಾಲೋ ಮಾಡಿದ ಸಿಎಸ್ಕೆ ನಡೆ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದಾದ ಬಳಿಕ ಸಿಎಸ್ಕೆ ಸಿಇಓ ಸೋಶಿಯಲ್ ಮೀಡಿಯಾ ಬಗ್ಗೆ ಗೊತ್ತಿಲ್ಲ. ಆದರೆ ಜಡೇಜಾ ಸಿಎಸ್ಕೆ ತಂಡದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು.
ಇದಾದ ನಂತರ ಮೊನ್ನೆ ಮೊನ್ನೆ ನಡೆದ ಧೋನಿ ಬರ್ತಡೇಗೂ ಜಡೇಜಾ ಶುಭಾಶಯ ತಿಳಿಸಿರಲಿಲ್ಲ. ಇದರ ಬೆನ್ನಲ್ಲೇ ಇದೀಗ ಸಿಎಸ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನೂ ಜಡೇಜಾ ಡಿಲೀಟ್ ಮಾಡಿದ್ದಾರೆ. ಇವೆಲ್ಲವೂ ಜಡೇಜಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಏನೋ ಸರಿ ಎಂಬುದನ್ನು ಬಿಂಬಿಸುತ್ತಿರೋದಂತೂ ಸತ್ಯ.
ಇದನ್ನು ಓದಿ : elon musk : ಟ್ವಿಟರ್ ಖರೀದಿಯಿಂದ ಹಿಂದೆ ಸರಿದ ಎಲಾನ್ ಮಸ್ಕ್ : ಕಾನೂನು ಸಮರಕ್ಕೆ ಮುಂದಾದ ಟ್ವಿಟರ್
ಇದನ್ನೂ ಓದಿ : Sachin Vs Kohli 33 phobia: ಅಂದು ಸಚಿನ್, ಇಂದು ವಿರಾಟ್.. ಬ್ಯಾಟಿಂಗ್ ದಿಗ್ಗಜರಿಗೆ ‘33’ ಫೋಬಿಯಾ
ravindra jadeja deletes posts related to csk in instagram