ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ದಿನಗಣನೆ ಶುರುವಾಗಿದೆ. IPL 2022 ಮೆಗಾ ಹರಾಜು ಮುಕ್ತಾಯಗೊಂಡಿದ್ದು, ಯಾವ ಆಟಗಾರರು ಈ ಬಾರಿ ಯಾವ ತಂಡವನ್ನು ಸೇರಿಕೊಂಡಿದ್ದಾರೆ ಅನ್ನೋದು ನಿರ್ಧಾರವಾಗಿದೆ. ಈ ನಡುವಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೀಗ ಮುಂದಿನ ನಾಯಕ ಯಾರು (IPL 2022 RCB captain) ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದ ಆರ್‌ಸಿಬಿ ಇದೀಗ ಬಲಿಷ್ಠ ಆಟಗಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಾದ್ರೆ ಆರ್‌ಸಿಬಿ ತಂಡ ಮುಂದಿನ ನಾಯಕ ಯಾರು, ಹೇಗಿರಲಿದೆ ಆರ್‌ಸಿಬಿ ತಂಡ ಅನ್ನೋ ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಿಸಿದ್ದರು. ಇದೀಗ ಮೆಗ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಡುಪ್ಲೆಸಿಸ್‌ಗೆ ನಾಯಕತ್ವ ನೀಡಲು ಆರ್‌ಸಿಬಿ ಮ್ಯಾನೇಜ್ಮೆಂಟ್ ಮುಂದಾಗಿದೆ ಎನ್ನಲಾಗುತ್ತಿದೆ. ಅಲ್ಲದೇ ಈ ಕುರಿತು ಅಧಿಕೃತ ಮಾಹಿತಿ ಶೀಘ್ರದಲ್ಲಿಯೇ ಹೊರ ಬೀಳಲಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ವನಿಂದು ಹಸರಂಗಾ ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಡೇವಿಡ್ ವಿಲ್ಲಿ ಅವರಂತಹ ಅದ್ಬುತ ಆಟಗಾರರು ತಂಡದಲ್ಲಿದ್ದಾರೆ. ಹರ್ಷಲ್ ಪಟೇಲ್ ( 10.75 ಕೋಟಿ), ವನಿಂದು ಹಸರಂಗ ( 10.75 ಕೋಟಿ), ಜೋಶ್ ಹ್ಯಾಜಲ್ವುಡ್ ( 7.75 ಕೋಟಿ) ಅವರನ್ನು ದುಬಾರಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿ ಮಾಡಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿತ್ತು.
ಆರ್‌ಸಿಬಿ ತಂಡದಲ್ಲಿ ಫಾಫ್ ಡು ಪ್ಲೆಸಿಸ್ ಮತ್ತು ಡೇವಿಡ್ ವಿಲ್ಲಿಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ಡು ಪ್ಲೆಸಿಸ್ ಜೊತೆ ವಿರಾಟ್ ಕೊಹ್ಲಿ ಕೂಡ ಆರಂಭರಾದ್ರೂ ಅಚ್ಚರಿಯಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಪ್ರಭು ದೇಸಾಯಿ ತಂಡಕ್ಕೆ ನೆರವಾಗಲಿದ್ದಾರೆ. ಆಲ್‌ರೌಂಡರ್ ಕೋಟಾದಲ್ಲಿ ವನಿಂದು ಹಸರಂಗ, ಕರ್ಣ್ ಶರ್ಮಾ ಸ್ಥಾನ ಪಡೆಯುವ ಸಾಧ್ಯತೆಯಿದೆ. ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್. ಸಿರಾಜ್, ಸಿದ್ಧಾರ್ಥ್ ಕೌಲ್ ಅವರ ಬೌಲಿಂಗ್ ಬಲವಿದೆ.
RCB IPL 2022ನಲ್ಲಿ ಪ್ಲೇಯಿಂಗ್ XI
ಫಾಫ್ ಡು ಪ್ಲೆಸಿಸ್, ಡೇವಿಡ್ ವಿಲ್ಲಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್. ಸಿರಾಜ್, ಸಿದ್ಧಾರ್ಥ್ ಕೌಲ್.
ಆರ್‌ಸಿಬಿ ತಂಡ :
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ): ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ , ಮೊ. ಸಿರಾಜ್ , ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹೇಜಲ್‌ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭು ಮ್ಹುದೆಸ್ಸಾಯಿ , ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲುವ್ನಿತ್ ಸಿಸೋಡಿಯಾ, ಡೇವಿಡ್ ವಿಲ್ಲಿ.
ಇದನ್ನೂ ಓದಿ : ಕೆರಿಬಿಯನ್ನರ ವಿರುದ್ಧದ T 20 ಸರಣಿಗೆ ಇವರೇ ಉಪ ನಾಯಕ; ಬಿಸಿಸಿಐ ಘೋಷಣೆ
ಇದನ್ನೂ ಓದಿ : ಐಪಿಎಲ್ ಮೆಗಾ ಹರಾಜು : ಯಾವ ಆಟಗಾರರು ಯಾವ ತಂಡಕ್ಕೆ ; ಇಲ್ಲಿದೆ ಎಲ್ಲಾ 10 ತಂಡಗಳ ಪೂರ್ಣ ವಿವರ
( RCB captain and Playing XI for IPL 2022)