ಬೆಂಗಳೂರು: ದೆಹಲಿಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಔಟ್ & ಔಟ್ ಮ್ಯಾಚ್ ವಿನ್ನರ್. (White ball cricket) ಯಾವುದೇ ಸನ್ನಿವೇಶದಿಂದ ತಂಡವನ್ನು ಗೆಲ್ಲಿಸುವ ತಾಕತ್ತಿರುವ ಆಟಗಾರ. ಆದರೆ ಅದು ಟೆಸ್ಟ್ ಕ್ರಿಕೆಟ್’ನಲ್ಲಿ ಮಾತ್ರ, ವೈಟ್ ಬಾಲ್ ಕ್ರಿಕೆಟ್’ನಲ್ಲಿ ಅಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ಕಳೆದ ವರ್ಷ ನಡೆದ ಗಾಬಾ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ನಂತರ ರಿಷಭ್ ಪಂತ್ ಅವರ ಕ್ರಿಕೆಟ್ ಗ್ರಾಫ್ ಇದ್ದಕ್ಕಿದ್ದಂತೆ ಮೇಲೇರಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ನೆಲಗಳಲ್ಲಿ ಟೆಸ್ಟ್ ಶತಕ ಬಾರಿಸಿರುವ ರಿಷಭ್ ಪಂತ್ ಅವರನ್ನು ಟೀಮ್ ಇಂಡಿಯಾದ ಭವಿಷ್ಯದ ನಾಯಕನೆಂದೇ ಬಿಂಬಿಸಲಾಗಿತ್ತು. ಆದರೆ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ರಿಷಭ್ ಪಂತ್ ನಿರೀಕ್ಷೆಗೆ ತಕ್ಕಂತೆ ಆಟವಾಡುತ್ತಿಲ್ಲ. ಬೇಜವಾಬ್ದಾರಿಯುತ ಹೊಡೆತಗಳಿಗೆ ಕೈ ಹಾಕಿ ಸಿಕ್ಕ ಅವಕಾಶಗಳನ್ನು ಕೈಚೆಲ್ಲುತ್ತಿದ್ದಾರೆ.
ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ಮುಗ್ಗರಿಸಿದ್ದ ರಿಷಭ್ ಪಂತ್, ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ವಿಫಲರಾಗಿದ್ದಾರೆ. ಟಿ20 ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿ ಕೇವಲ 17 ರನ್ ಗಳಿಸಿದ್ದ ಪಂತ್, ಏಕದಿನ ಸರಣಿಯ (India vs New Zeeland ODI series) ಮೊದಲ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕರೂ 15 ರನ್ನಿಗೆ ಔಟಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿರುವ ಕಳೆದ 6 ಇನ್ನಿಂಗ್ಸ್’ಗಳಲ್ಲಿ ರಿಷಭ್ ಪಂತ್ ಗಳಿಸಿರುವ ಒಟ್ಟು ರನ್ ಕೇವಲ 68 ರನ್. ಸತತ ವೈಫಲ್ಯ ಕಾಣುತ್ತಿದ್ದರೂ ರಿಷಭ್ ಪಂತ್’ಗೆ ಪದೇ ಪದೇ ಅವಕಾಶ ನೀಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ಬಿಸಿಸಿಐ ವಿರುದ್ಧ ಕಿಡಿ ಕಾರುತ್ತಿದ್ದಾರೆ. ವೈಟ್ ಬಾಲ್ ಕ್ರಿಕೆಟ್’ನಲ್ಲಿ ರಿಷಭ್ ಪಂತ್ ಭಾರತೀಯ ಕ್ರಿಕೆಟ್’ನ ದೊಡ್ಡ ಮೋಸಗಾರ, ಅವರ ಬದಲು ಟಿ20 ಹಾಗೂ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್’ಗೆ ಅವಕಾಶ ನೀಡಬೇಕೆಂದು ವಿರಾಟ್ ಎಂಬ ಕ್ರಿಕೆಟ್ ಅಭಿಮಾನಿ ಟ್ಟೀಟ್ ಮಾಡಿದ್ದಾನೆ.
ರಿಷಭ್ ಪಂತ್ ವೈಟ್ ಬಾಲ್ ಕ್ರಿಕೆಟ್’ಗೆ ಲಾಯಕ್ಕಿಲ್ಲ ಎಂದು ಮತ್ತೊಬ್ಬ ಕ್ರಿಕೆಟ್ ಅಭಿಮಾನಿ ಟ್ವೀಟ್ ಮಾಡಿದ್ದಾನೆ.
I am telling you again and again Rishabh Pant is Not a White Ball Cricketer. #RishabhPant #TeamIndia pic.twitter.com/ERMtvWEdpj
— @iSubhashChandra🏴 82* (@PunjabKings_Fan) November 25, 2022
ಸತತ ವೈಫಲ್ಯಗಳ ನಡುವೆಯೂ ರಿಷಬ್ ಪಂತ್’ಗೆ ಸತತ ಅವಕಾಶವನ್ನು ನೀಡುತ್ತಿರುವುದು ಭಾರತೀಯ ಕ್ರಿಕೆಟ್’ನ ಬಹುದೊಡ್ಡ ಹಗರಣ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
Tried Lunt at No. 4,5,6 didn’t work and now sent him to open the innings & he scored 6(13) in powerplay. On the other hand Sanju Samson is kept outside the team. Pure favouritism by #BCCI #RishabhPant is VC of team 😆(this fraud has already played 65 trial matches now in T20I) pic.twitter.com/WhzR2BvV9R
— Mohammed Parvez 🥰 (@100off31) November 20, 2022
ಇದನ್ನೂ ಓದಿ : Umran Malik shines in ODI debut: ಪದಾರ್ಪಣೆಯ ಪಂದ್ಯದಲ್ಲೇ ಬೆಂಕಿ ಚೆಂಡುಗಳನ್ನು ಉಗುಳಿದ ಜಮ್ಮು ಎಕ್ಸ್‌ಪ್ರೆಸ್ ಉಮ್ರಾನ್ ಮಲಿಕ್
ಇದನ್ನೂ ಓದಿ : 6 ಪಂದ್ಯ 5 ಶತಕ : ಸ್ಪೋಟಕ ಆಟಗಾರನನ್ನೇ ಕೈಬಿಟ್ಟ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್
ಇದನ್ನೂ ಓದಿ : Bengaluru Bulls vs Bengal warriors : ಬೆಂಗಾಲ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ಸೋಲು, ಜೈಪುರ ವಿರುದ್ಧ ಗೆದ್ದ ಪುಣೇರಿ ಪಲ್ಟನ್
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಡಿರುವ ಕಳೆದ 6 ಇನ್ನಿಂಗ್ಸ್’ಗಳಲ್ಲಿ ರಿಷಭ್ ಪಂತ್ ಗಳಿಸಿರುವ ಸ್ಕೋರ್
- 27 Vs ದಕ್ಷಿಣ ಆಫ್ರಿಕಾ (ಟಿ20)
- 03 Vs ಜಿಂಬಾಬ್ವೆ (ಟಿ20)
- 06 Vs ಇಂಗ್ಲೆಂಡ್ (ಟಿ20)
- 06 Vs ನ್ಯೂಜಿಲೆಂಡ್ (ಟಿ20)
- 11 Vs ನ್ಯೂಜಿಲೆಂಡ್ (ಟಿ20)
- 15 Vs ನ್ಯೂಜಿಲೆಂಡ್ (ಏಕದಿನ)
Rishabh Pant Is fit for white ball cricket? Why are cricket lovers angry?