ಲಂಡನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma 250 sixes) ಏಕದಿನ ಕ್ರಿಕೆಟ್’ನಲ್ಲಿ 250 ಸಿಕ್ಸರ್ಸ್ ಬಾರಿಸಿದ ಭಾರತದ ಮೊದಲ ಆಟಗಾರ ನೆಂಬ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಐದು ಸಿಕ್ಸರ್”ಗಳನ್ನು ಬಾರಿಸಿದ್ದರು. 5ನೇ ಸಿಕ್ಸರ್ ಬಾರಿಸಿದ ವೇಳೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ 250 ಸಿಕ್ಸರ್ ಬಾರಿಸಿದ ಗೌರವಕ್ಕೆ ರೋಹಿತ್ ಪಾತ್ರರಾದರು.
ಅಂದ ಹಾಗೆ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಭಾರತ ಪರ ಮೊದಲ ಸಿಕ್ಸರ್ ಬಾರಿಸಿದ್ದು ಯಾರು ಗೊತ್ತಾ? ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್. ಭಾರತ ಪರ ಏಕದಿನ ಕ್ರಿಕೆಟ್”ನಲ್ಲಿ 50 ಸಿಕ್ಸರ್”ಗಳನ್ನು ಪೂರ್ತಿಗೊಳಿಸಿದ ಮೊದಲಿಗ ಮಾಜಿ ನಾಯಕ ಕಪಿಲ್ ದೇವ್. ಮೊದಲಬಾರಿ 100 ಸಿಕ್ಸರ್”ಗಳ ಗಡಿ ಮುಟ್ಟಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. 150 ಸಿಕ್ಸರ್”ಗಳನ್ನು ಬಾರಿಸಿದ ಮೊದಲಿಗ ಬಂಗಾಳದ ಹುಲಿ ಸೌರವ್ ಗಂಗೂಲಿ. 200 ಸಿಕ್ಸರ್”ಗಳ ದಾಖಲೆಯನ್ನು ಮೊದಲ ಬಾರಿ ಬರೆದ ಭಾರತೀಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. 250 ಸಿಕ್ಸರ್”ಗಳನ್ನು ಸಿಡಿಸಿ ಭಾರತೀಯ ದಾಖಲೆ ಬರೆದಿರುವುದು ಹಾಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ. ಸಿಕ್ಸರ್”ಗಳ ದಾಖಲೆಯಲ್ಲಿ ಮೊದಲಿಗರಾಗಿರುವ ಎಲ್ಲರೂ ಭಾರತ ತಂಡದ ನಾಯಕರಾಗಿದ್ದವರು ಎಂಬುದು ವಿಶೇಷ.
ಏಕದಿನ ಕ್ರಿಕೆಟ್: ಭಾರತ ಪರ ಸಿಕ್ಸರ್ ದಾಖಲೆ
ಮೊದಲ ಸಿಕ್ಸರ್: ಸುನಿಲ್ ಗವಾಸ್ಕರ್
50 ಸಿಕ್ಸರ್ ಬಾರಿಸಿದ ಮೊದಲಿಗ: ಕಪಿಲ್ ದೇವ್
100 ಸಿಕ್ಸರ್ ಬಾರಿಸಿದ ಮೊದಲಿಗ: ಸಚಿನ್ ತೆಂಡೂಲ್ಕರ್
150 ಸಿಕ್ಸರ್ ಬಾರಿಸಿದ ಮೊದಲಿಗ: ಸೌರವ್ ಗಂಗೂಲಿ
200 ಸಿಕ್ಸರ್ ಬಾರಿಸಿದ ಮೊದಲಿಗ: ಎಂ.ಎಸ್ ಧೋನಿ
250 ಸಿಕ್ಸರ್ ಬಾರಿಸಿದ ಮೊದಲಿಗ: ರೋಹಿತ್ ಶರ್ಮಾ
ಏಕದಿನ ಕ್ರಿಕೆಟ್: ಭಾರತ ಪರ ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-5)
ರೋಹಿತ್ ಶರ್ಮಾ: 250 (224 ಇನ್ನಿಂಗ್ಸ್)
ಎಂ.ಎಸ್ ಧೋನಿ: 229 (297 ಇನ್ನಿಂಗ್ಸ್)
ಸಚಿನ್ ತೆಂಡೂಲ್ಕರ್: 195 (452 ಇನ್ನಿಂಗ್ಸ್)
ಸೌರವ್ ಗಂಗೂಲಿ: 190 (300 ಇನ್ನಿಂಗ್ಸ್)
ಯುವರಾಜ್ ಸಿಂಗ್: 155 (278 ಇನ್ನಿಂಗ್ಸ್)
ಇದನ್ನೂ ಓದಿ : Rohith Sharma sixer injures : ಸಿಕ್ಸರ್ ಬಡಿದು ಗಾಯಗೊಂಡಿದ್ದ ಹುಡುಗಿಯನ್ನು ಸಂತೈಸಿದ ರೋಹಿತ್ ಶರ್ಮಾ
ಇದನ್ನೂ ಓದಿ : Virat Kohli doubtful : ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಕೊಹ್ಲಿ ಡೌಟ್ !
Rohit Sharma 250 sixes, who knows who hit the first six in ODI cricket for India