ಶನಿವಾರ, ಏಪ್ರಿಲ್ 26, 2025
HomeSportsCricketಭಾರತಕ್ಕೆ ಚಾಂಪಿಯನ್ಸ್‌ ಟ್ರೋಫಿ : ರೋಹಿತ್‌ ಶರ್ಮಾ ಆರ್ಭಟ, ಕೆಎಲ್‌ ರಾಹುಲ್‌ ಹೋರಾಟಕ್ಕೆ ಜಯ

ಭಾರತಕ್ಕೆ ಚಾಂಪಿಯನ್ಸ್‌ ಟ್ರೋಫಿ : ರೋಹಿತ್‌ ಶರ್ಮಾ ಆರ್ಭಟ, ಕೆಎಲ್‌ ರಾಹುಲ್‌ ಹೋರಾಟಕ್ಕೆ ಜಯ

ಭಾರತ ಒಟ್ಟು ಮೂರನೇ ಬಾರಿಗೆ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌ ಆಯೋಜಿಸುವ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 2002ರಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಪಿಯನ್ನು ( ಭಾರತ ಜಯಿಸಿದ್ರೆ, 2013 ಹಾಗೂ 2025ರಲ್ಲಿ ಒಟ್ಟು 3 ಬಾರಿ ಪ್ರಶಸ್ತಿಯನ್ನು ಜಯಿಸಿದ ಸಾಧನೆ ಮಾಡಿದೆ. ಇನ್ನು 2000 ಹಾಗೂ 2017ರಲ್ಲಿ ರನ್ನರ್ಸ್‌ ಅಪ್‌ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

- Advertisement -
  • ನ್ಯೂಜಿಲೆಂಡ್‌ ತಂಡದ ವಿರುದ್ದ 25 ವರ್ಷದ ಹಿಂದಿನ ಸೇಡು ತೀರಿಸಿಕೊಂಡಿದೆ.
  • 13 ವರ್ಷಗಳಲ್ಲಿ ಭಾರತ ತನ್ನ ಮೊದಲ ಐಸಿಸಿ ಪುರುಷರ ಏಕದಿನ ಪ್ರಶಸ್ತಿಯನ್ನು ಗೆದ್ದಿದೆ
  • 2 ಐಸಿಸಿ ಟ್ರೋಫಿ ಜಯಿಸಿದ ಭಾರತದ ಎರಡನೇ ನಾಯಕ ರೋಹಿತ್‌ ಶರ್ಮಾ

Champions Trophy 2025 FInal : ರೋಹಿತ್‌ ಶರ್ಮಾ ಹಾಗೂ ಕನ್ನಡಿಗ ಕೆಎಲ್‌ ರಾಹುಲ್‌ ಉತ್ತಮ ಆಟದ ನೆರವಿನಿಂದ ಭಾರತ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ 3ನೇ ಬಾರಿಗೆ ಚಾಂಪಿಯನ್ಸ್‌ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಮೂಲಕ ನ್ಯೂಜಿಲೆಂಡ್‌ ವಿರುದ್ದದ 25 ವರ್ಷಗಳ ಹಿಂದಿನ ಸೇಡಿಗೆ ಪ್ರತೀಕಾರ ತೀರಿಸಿಕೊಂಡಿದೆ.

ದುಬೈನ ಅಂತರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌ ತಂಡಕ್ಕೆ ಕುಲದೀಪ್‌ ಯಾದವ್‌ ಹಾಗೂ ವರುಣ್‌ ಚಕ್ರವರ್ತಿ ಆರಂಭಿಕ ಆಘಾತ ನೀಡಿದ್ರು. ಚಾಂಪಿಯನ್ಸ್‌ ಟ್ರೋಫಿಯ ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮ ಆಟವಾಡಿದ್ದ ರಚಿನ್‌ ರವೀಂದ್ರ ಹಾಗೂ ಕೇನ್‌ ವಿಲಿಯಂಸನ್‌ ಬೇಗನೆ ವಿಕೆಟ್‌ ಒಪ್ಪಿಸಿದ್ರು. 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲ್ಯಾಂಡ್‌ ತಂಡಕ್ಕೆ ನೆರವಾಗಿದ್ದು ಡಿ ಮಿಚೆಲ್‌ ಹಾಗೂ ಗ್ಲೆನ್‌ ಫಿಲಿಫ್‌.

Rohit Sharma Indian Cricket Team won Champions Trophy 2025 ind vs NZ Kannada News
Image Credit : BCCI / Twitter

ಈ ಜೋಡಿ ಉತ್ತಮ ಜೊತೆಯಾಟ ಆಡಿದ್ರು, ಡಿ ಮಿಚೆಲ್‌ 63 ರನ್‌ ಬಾರಿಸಿದ್ರೆ, ಬ್ರಾಸ್ವೆಲ್‌ 53 ರನ್‌ ಸಿಡಿಸಿದ್ದಾರೆ. ಗ್ಲೆನ್‌ ಫಿಲಿಪ್‌ 34ರನ್‌ ಬಾರಿಸಿದ್ದಾರೆ. ಅಂತಿಮ ಹಂತದಲ್ಲಿ ಬ್ರಾಸ್ವೆಲ್‌ ಸ್ಪೋಟಕ ಆಟದ ನೆರವಿನಿಂದ ನ್ಯೂಜಿಲೆಂಡ್‌ ತಂಡ 7 ವಿಕೆಟ್‌ ಕಳೆದುಕೊಂಡು 251ರನ್‌ ಗಳಿಸಿತ್ತು. ಭಾರತ ಪರ ವರುಣ್‌ ಚಕ್ರವರ್ತಿ ಹಾಗೂ ಕುಲದೀಪ್‌ ಯಾದವ್‌ ತಲಾ 2 ವಿಕೆಟ್‌ ಪಡೆದುಕೊಂಡ್ರೆ, ಶಮಿ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ನ್ಯೂಜಿಲ್ಯಾಂಡ್‌ ನೀಡಿದ್ದ ಸವಾಲು ಬೆನ್ನತ್ತಲು ಹೊರಟ ಭಾರತ ತಂಡಕ್ಕೆ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಶತಕದ ಜೊತೆಯಾಟ ಆಡಿದ್ರು. ಆದ್ರೆ ಗಿಲ್‌ 31ರನ್‌ ಗಳಿಗೆ ವಿಕೆಟ್‌ ಒಪ್ಪಿಸಿದ್ರೆ, ನಂತರ ಬಂದ ಕೊಹ್ಲಿ ಗಳಿಸಿದ್ದು ಕೇವಲ 1 ರನ್. ನಂತರ ರೋಹಿತ್‌ ಶರ್ಮಾ ಜೊತೆಯಾದ ಶ್ರೇಯಸ್‌ ಅಯ್ಯರ್‌ ಇನ್ನಿಂಗ್ಸ್‌ ಕಟ್ಟುವ ಕಾರ್ಯಕ್ಕೆ ಮುಂದಾದ್ರು.

Rohit Sharma Indian Cricket Team won Champions Trophy 2025 ind vs NZ Kannada News
Image Credit : BCCI / Twitter

ಶ್ರೇಯಸ್‌ ಅಯ್ಯರ್‌ 48 ರನ್‌ಗಳಿಸಿ ಔಟಾದ್ರೆ, ರೋಹಿತ್‌ ಶರ್ಮಾ 76 ರನ್‌ ಸಿಡಿಸಿದ್ರು. ನಂತರ ಅಕ್ಷರ್‌ ಪಟೇಲ್‌ 29 ಹಾಗೂ ಹಾರ್ದಿಕ್‌ ಪಾಂಡ್ಯ 18 ರನ್‌ಗಳಿಸಿ ಔಟಾದ್ರು. ಆದರೆ ಒಂದೆಡೆಯಲ್ಲಿ ಊತ್ತಮ ಆಟವಾಡಿದ ಕೆಎಲ್‌ ರಾಹುಲ್‌ 34ರನ್‌ ಗಳಿಸಿ ಔಟಾಗದೇ ಭಾರತಕ್ಕೆ ಗೆಲುವು ತಂದು ಕೊಟ್ರು. ಅಂತಿಮವಾಗಿ ಭಾರತ ತಂಡ 49 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 254ರನ್‌ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದೆ.

Also Read : ವಿಶ್ವಕಪ್‌ ಸೋಲಿಗೆ ಪ್ರತೀಕಾರ ತೀರಿಸಿಕೊಂಡ ಕನ್ನಡಿಗ ಕೆಎಲ್‌ ರಾಹುಲ್‌

Rohit Sharma Indian Cricket Team won Champions Trophy 2025 ind vs NZ Kannada News
Image Credit : BCCI / Twitter

ನ್ಯೂಜಿಲೆಂಡ್‌ ತಂಡದ ಪರ ಬ್ರಾಸ್ ವೆಲ್‌ 28ಕ್ಕೆ 2, ಮಿಚೆಲ್‌ ಸಂತನೆರ್‌ 46ಕ್ಕೆ 2 ವಿಕೆಟ್‌ ಪಡೆದುಕೊಂಡಿದ್ದಾರೆ. ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದುಕೊಂಡ್ರೆ, ರಚಿನ್‌ ರವೀಂದ್ರ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Champions Trophy 2025 FInal : ಭಾರತಕ್ಕೆ 3ನೇ ಬಾರಿಗೆ ಒಲಿದ ಚಾಂಪಿಯನ್ಸ್‌ ಟ್ರೋಫಿ

ಭಾರತ ಒಟ್ಟು ಮೂರನೇ ಬಾರಿಗೆ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್‌ ಆಯೋಜಿಸುವ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. 2002ರಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್‌ ಟ್ರೋಪಿಯನ್ನು ( ಭಾರತ ಜಯಿಸಿದ್ರೆ, 2013 ಹಾಗೂ 2025ರಲ್ಲಿ ಒಟ್ಟು 3 ಬಾರಿ ಪ್ರಶಸ್ತಿಯನ್ನು ಜಯಿಸಿದ ಸಾಧನೆ ಮಾಡಿದೆ. ಇನ್ನು 2000 ಹಾಗೂ 2017ರಲ್ಲಿ ರನ್ನರ್ಸ್‌ ಅಪ್‌ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

Also Read : IPL 2025 RCB : ಐಪಿಎಲ್‌ 2025 ಕ್ಕೆ ಆರ್‌ಸಿಬಿಯ ಅತ್ಯುತ್ತಮ ಪ್ಲೇಯಿಂಗ್ 11

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಂತರ ಬಹು ಐಸಿಸಿ ಪುರುಷರ ವೈಟ್-ಬಾಲ್ ಪ್ರಶಸ್ತಿಗಳನ್ನು ಗೆದ್ದ ಎರಡನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾದರು.

Rohit Sharma Indian Cricket Team won Champions Trophy 2025 Final ind vs NZ Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular