ಅಹ್ಮದಾಬಾದ್: (Ruturaj Gaikwad) ಮಹಾರಾಷ್ಟ್ರ ತಂಡದ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಓಪನರ್ ರುತುರಾಜ್ ಗಾಯಕ್ವಾಡ್ ಒಂದೇ ಓವರ್’ನಲ್ಲಿ ಏಳು ಸಿಕ್ಸರ್’ಗಳನ್ನು ಬಾರಿಸಿ ವಿಶ್ವದಾಖಲೆ ಬರೆದಿದ್ದಾರೆ (Ruturaj Gaikwad 7 sixers in a over).
ಸೀಮಿತ ಓವರ್’ಗಳ ಕ್ರಿಕೆಟ್’ನ ಒಂದೇ ಓವರ್’ನಲ್ಲಿ 7 ಸಿಕ್ಸರ್’ಗಳ ಸಹಿತ 43 ರನ್ ಗಳಿಸಿದ ಜಗತ್ತಿನ ಬ್ಯಾಟ್ಸ್’ಮನ್ ಎಂಬ ಹಿರಿಮೆಗೆ ರುತುರಾಜ್ ಗಾಯಕ್ವಾಡ್ (Ruturaj Gaikwad) ಪಾತ್ರರಾಗಿದ್ದಾರೆ. ಅಹ್ಮದಾಬಾದ್’ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿರುದ್ಧದ ವಿಜಯ್ ಹಜಾರೆ ಟ್ರೋಫಿ (Vijay hazare Trophy) ಏಕದಿನ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಗಾಯಕ್ವಾಡ್ ಈ ವಿಶ್ವದಾಖಲೆ ನಿರ್ಮಿಸಿದರು.
ಉತ್ತರ ಪ್ರದೇಶ ತಂಡದ ಎಡಗೈ ಸ್ಪಿನ್ನರ್ ಶಿವ ಸಿಂಗ್ ಎಸೆದ ಇನ್ನಿಂಗ್ಸ್’ನ 49ನೇ ಓವರ್’ನಲ್ಲಿ ರುತುರಾಜ್ ಏಳು ಸಿಕ್ಸರ್’ಗಳನ್ನು ಸಿಡಿಸಿದರು. ಆ ಓವರ್’ನಲ್ಲಿ ಒಂದು ಎಸೆತ ನೋಬಾಲ್ ಆಗಿತ್ತು (6, 6, 6, 6, 6(nb), 6, 6). ಆ ಎಸೆತವನ್ನೂ ಸಿಕ್ಸರ್’ಗಟ್ಟುವ ಮೂಲಕ ಒಂದೇ ಓವರ್’ನಲ್ಲಿ ಏಳು ಸಿಕ್ಸರ್’ಗಳನ್ನು ಬಾರಿಸಿದ ವಿಶ್ವದಾಖಲೆ ಬರೆದರು. ಅಷ್ಟೇ ಅಲ್ಲ ಭರ್ಜರಿ ದ್ವಿಶತಕವನ್ನೂ ಪೂರ್ತಿಗೊಳಿಸಿದರು.
ದ್ವಿಶತಕದ ಇನ್ನಿಂಗ್ಸ್’ನಲ್ಲಿ ಒಟ್ಟು 159 ಎಸೆತಗಳನ್ನೆದುರಿಸಿದ ರುತುರಾಜ್ ಗಾಯಕ್ವಾಡ್ 10 ಬೌಂಡರಿ ಮತ್ತು 16 ಸಿಕ್ಸರ್’ಗಳ ನೆರವಿನಿಂದ ಅಜೇಯ 220 ರನ್ ಬಾರಿಸಿದರು. ನಾಯಕ ರುತುರಾಜ್ ಅವರ ಅಜೇಯ ಶತಕದ ನೆರವಿನಿಂದ ಮಹಾರಾಷ್ಟ್ರ ತಂಡ ಉತ್ತರ ಪ್ರದೇಶ ವಿರುದ್ಧದ ಕ್ವಾರ್ಟರ್ ಫೈನಲ್’ನಲ್ಲಿ ನಿಗದಿತ 50 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 330 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು.
ಇದನ್ನೂ ಓದಿ : Sanju Samson at Fifa World Cup : ಟೀಮ್ ಇಂಡಿಯಾದಲ್ಲಿ ನಿರಂತರ ಅನ್ಯಾಯ, ಫಿಪಾ ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್
ಇದನ್ನೂ ಓದಿ : Bengaluru Bulls : ಭರತ್ ಭರ್ಜರಿ ದಾಳಿ, ಗೂಳಿ ಗುದ್ದಿಗೆ ದಬಾಂಗ್ ಡೆಲ್ಲಿ ಢಮಾರ್; ಪ್ಲೇ ಆಫ್‌ಗೆ ಬೆಂಗಳೂರು ಬುಲ್ಸ್
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್’ನ ಕೀರನ್ ಪೊಲ್ಲಾರ್ಡ್ ಮತ್ತು ಏಕದಿನ ಕ್ರಿಕೆಟ್’ನಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ಆದರೆ ರುತುರಾಜ್ ಗಾಯಕ್ವಾಡ್ ಒಂದೇ ಓವರ್’ನಲ್ಲಿ ಏಳು ಸಿಕ್ಸರ್’ಗಳನ್ನು ಬಾರಿಸಿ ಗಮನ ಸೆಳೆದಿದ್ದಾರೆ.
(Ruturaj Gaikwad) Maharashtra team captain, Chennai Super Kings team opener Ruturaj Gaikwad hit seven sixers in a single over and wrote a world record (Ruturaj Gaikwad 7 sixers in an over).