ಭಾನುವಾರ, ಏಪ್ರಿಲ್ 27, 2025
HomeSportsCricketMithali Raj ಮಹಿಳಾ ಐಪಿಎಲ್‌ಗಾಗಿ ನಿವೃತ್ತಿ ಹಿಂಪಡೆಯಲಿದ್ದಾರೆ ಸ್ಟಾರ್ ಬ್ಯಾಟರ್ ಮಿಥಾಲಿ ರಾಜ್ ?

Mithali Raj ಮಹಿಳಾ ಐಪಿಎಲ್‌ಗಾಗಿ ನಿವೃತ್ತಿ ಹಿಂಪಡೆಯಲಿದ್ದಾರೆ ಸ್ಟಾರ್ ಬ್ಯಾಟರ್ ಮಿಥಾಲಿ ರಾಜ್ ?

- Advertisement -

ಬೆಂಗಳೂರು: ಮಿಥಾಲಿ ರಾಜ್ (Mithali Raj to return ) . ಮಹಿಳಾ ಕ್ರಿಕೆಟ್ (Women’s Cricket) ಜಗತ್ತಿನ ದಿಗ್ಗಜ ಆಟಗಾರ್ತಿ. ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಬ್ಯಾಟರ್. ಇತ್ತೀಚೆಗಷ್ಟೇ ಕ್ರಿಕೆಟ್’ನ ಎಲ್ಲಾ ಪ್ರಕಾರಗಳಿಗೆ ನಿವೃತ್ತಿ ಘೋಷಿಸಿರುವ ಮಿಥಾಲಿ, ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್ ಪಡೆಯುವ ಸಾಧ್ಯತೆಯಿದೆ.

ಮುಂದಿನ ವರ್ಷ ಪುರುಷರ ಐಪಿಎಲ್ ಜೊತೆ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿ (Women’s IPL) ಕೂಡ ನಡೆಯಲಿದೆ. ಮೊದಲ ಆವೃತ್ತಿಯ ಮಹಿಳಾ ಐಪಿಎಲ್’ನಲ್ಲಿ ಆಡುವ ಸಲುವಾಗಿ ನಿವೃತ್ತಿ ನಿರ್ಧಾರದಿಂದ ಹೊರ ಬರುವ ಸುಳಿವನ್ನು ಮಿಥಾಲಿ ರಾಜ್ ಬಿಟ್ಟು ಕೊಟ್ಟಿದ್ದಾರೆ. “ಈ ಬಗ್ಗೆ ನಾನಿನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಮಹಿಳಾ ಐಪಿಎಲ್ ಟೂರ್ನಿಗೆ ಇನ್ನೂ ಕೆಲ ತಿಂಗಳುಗಳಿವೆ. ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆಡುವುದು ನಿಜಕ್ಕೂ ಖುಷಿ ಕೊಡುವ ವಿಚಾರ” ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

ಮಿಥಾಲಿ ಅವರ ಈ ಹೇಳಿಕೆ ಅವರು ನಿವೃತ್ತಿಯಿಂದ ವಾಪಸ್ ಬಂದು ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ತೆರೆದಿಟ್ಟಿದೆ. 2023ರಲ್ಲಿ ಮಹಿಳಾ ಐಪಿಎಲ್ ಟೂರ್ನಿ ಸಂಘಟಿಸಲು ಬಿಸಿಸಿಐ ನಿರ್ಧರಿಸಿದ್ದು, ಐದರಿಂದ ಆರು ತಂಡಗಳು ಭಾಗವಹಿಸಲಿವೆ. 39 ವರ್ಷದ ಮಿಥಾಲಿ ರಾಜ್ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡವನ್ನು ಫೈನಲ್”ಗೆ ಮುನ್ನಡೆಸಿದ್ದಾರೆ. 1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ಕಾಲಿಟ್ಟಿದ್ದ ಮಿಥಾಲಿ ರಾಜ್, ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ 232 ಪಂದ್ಯಗಳನ್ನಾಡಿದ್ದು, 50.68ರ ಸರಾಸರಿಯಲ್ಲಿ 7 ಶತಕಗಳು ಹಾಗೂ 64 ಅರ್ಧಶತಕಗಳ ಸಹಿತ 7805 ರನ್ ಕಲೆ ಹಾಕಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಮಿಥಾಲಿ ರಾಜ್ ಹೆಸರಲ್ಲಿದೆ. ಭಾರತ ಪರ 89 ಟಿ20 ಪಂದ್ಯಗಳನ್ನಾಡಿರುವ ಮಿಥಾಲಿ ರಾಜ್ 37.52ರ ಸರಾಸರಿಯಲ್ಲಿ 17 ಅರ್ಧಶತಕಗಳೊಂದಿಗೆ 2,324 ರನ್ ಗಳಿಸಿದ್ದಾರೆ. 12 ಟೆಸ್ಟ್ ಪಂದ್ಯಗಳಿಂದ 1 ಶತಕ ಸಹಿತ 43.68ರ ಸರಾಸರಿಯಲ್ಲಿ 699 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ

ಇದನ್ನೂ ಓದಿ : Nathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್

Star batsman Mithali Raj to return for Women’s IPL

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular