ಉಡುಪಿ: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಶ್ರಯದಲ್ಲಿ ಯುವ ಕ್ರಿಕೆಟ್ ಆಟಗಾರರ ಪ್ರತಿಭಾನ್ವೇಷಣೆ (Cricket Talent hunt )ಗೆ ಮುಂದಾಗಿದೆ. ಡಿಸೆಂಬರ್ 15, 09 ಹಾಗೂ 26 ರಂದು ವಿವಿಧ ವಯೋಮಿತಿಯ ಬಾಲಕ ಹಾಗೂ ಬಾಲಕಿಯರಿಗಾಗಿ ಅವಕಾಶ ಕಲ್ಪಿಸಿದೆ. 14, 16, 19 ಹಾಗೂ 23 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಡಿಸೆಂಬರ್ 22 ರಂದು ಮಹಿಳಾ ವಿಭಾಗದ ಆಯ್ಕೆ ನಡೆಯಲಿದೆ.
ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಕ್ರಿಕೆಟ್ ಪಟುಗಳನ್ನು ಗುರುತಿಸುವುದು ಪ್ರತಿಭಾನ್ವೇಷಣೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರ, ಉಡುಪಿ, ಹೆಬ್ರಿ, ಕಾಪು, ಕಾರ್ಕಳ ತಾಲೂಕಿನ ಆಟಗಾರರಿಗೆ ಮಾತ್ರವೇ ಅವಕಾಶ ಇರಲಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಆಯ್ಕೆ ನಡೆಯಲಿದ್ದು, ಯುವ ಕ್ರಿಕೆಟಿಗರು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ಈ ವೇಳೆಯಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ತರಬೇತುದಾರರು ಮತ್ತು ಆಯ್ಕೆ ಸಮಿತಿ ಹಾಜರಿದ್ದು, ಉತ್ತಮ ಪ್ರತಿಭೆಗಳ ಆಯ್ಕೆಯನ್ನು ನಡೆಸಲಿದ್ದಾರೆ.
ಇದನ್ನೂ ಓದಿ : IPL 2025 Unsold Players: ಐಪಿಎಲ್ ಮೆಗಾ ಹರಾಜಿನಲ್ಲಿ ಮಾರಾಟವಾಗದ ಟಾಪ್ ಆಟಗಾರರು..!

ಈ ಆಯ್ಕೆ ಟ್ರಯಲ್ಸ್‌ನಲ್ಲಿ ಆಯ್ಕೆಯಾಗುವ ಆಟಗಾರರಿಗಾಗಿ ಲೀಗ್ ಮಾದರಿಯಲ್ಲಿ 50 ಓವರ್‌ಗಳ ಪಂದ್ಯವನ್ನು ಆಯೋಜಿಸಲಾಗುತ್ತದೆ. ಆದರೆ ಪ್ರತೀ ಆಟಗಾರರು 200 ರೂ. ನೋಂದಾವಣೆ ಶುಲ್ಕ ಪಾವತಿಸಬೇಕಾಗಿದೆ. ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಆಟಗಾರರು ತಮ್ಮ ವಯಸ್ಸಿನ ದೃಢೀಕರಣಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಈ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ, ಮಾಹೆಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಟ್ರೆವರ್ ಡಯಾಸ್ ( 9902537030) ಅವರನ್ನು ಸಂಪರ್ಕಿಸಬಹುದು.
ಇದನ್ನೂ ಓದಿ : ಇದನ್ನೂ ಓದಿ : RR retention IPL 2025 : ರಾಜಸ್ಥಾನ ರಾಯಲ್ಸ್‌ನಿಂದ ಚಹಾಲ್ ಔಟ್, ಸ್ಯಾಮ್ಸನ್, ಜೈಸ್ವಾಲ್‌ಗೆ 18 ಕೋಟಿ
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಯುವ ಕ್ರಿಕೆಟಿಗರಿಗೆ ಉತ್ತೇಜನ ನೀಡುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದೀಗ ಯುವ ಕ್ರಿಕೆಟಿಗರಿಗಾಗಿ ಟ್ಯಾಲೆಂಟ್ ಹಂಟ್ ಆಯೋಜಿಸಿದೆ. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸಾದ್, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ.ಎಸ್.ಎಸ್. ಬಲ್ಲಾಳ್ ಅವರು ವಿಶೇಷವಾಗಿ ಈ ಯೋಜನೆಯನ್ನು ಆಯೋಜಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಯೋಜನೆಯ ಅವಕಾಶವನ್ನು ಜಿಲ್ಲೆಯ ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ತಿಳಿಸಿದೆ.

ಯಾವಾಗ ಯಾವ ವಯೋಮಿತಿಯ ಆಯ್ಕೆ ?
19 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ 15 ಡಿಸೆಂಬರ್ 2024.
ಸ್ಥಳ : ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ.
ಅರ್ಹತೆ :01/09/2005 ಅಥವಾ ನಂತರ ಜನಿಸಿದವರು ಅರ್ಹರು.
23 ವರ್ಷ ವಯೋಮಿತಿ ಹಾಗೂ ಮಹಿಳೆಯರಿಗಾಗಿ ಪ್ರತಿಭಾನ್ವೇಷಣೆ, ಡಿಸೆಂಬರ್ 22, 2024,
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ.
ಅರ್ಹತೆ: 01/09/2001 ಅಥವಾ ನಂತರ ಜನಿಸಿದವರು ಅರ್ಹರು.
16 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ, 29 ಡಿಸೆಂಬರ್, 2024.
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ.
ಅರ್ಹತೆ: 01/09/2008 ಅಥವಾ ನಂತರ ಜನಿಸಿದವರು ಅರ್ಹರು.
14 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ, 29 ಡಿಸೆಂಬರ್ 2024,
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ
ಅರ್ಹತೆ: 1/9/2010 ಅಥವಾ ನಂತರ ಜನಿಸಿದವರು ಅರ್ಹರು.
Udupi district cricket association Cricket Talent hunt Programs for Youth cricketers