ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಹೊಸ ದಾಖಲೆಗಳು ದಾಖಲಾಗುತ್ತಿವೆ. ಇದೀಗ ಸನ್ ರೈಸಸ್ ತಂಡದ ಯುವ ಬೌಲರ್ ಉಮ್ರಾನ್ ಮಲಿಕ್ (Umran Malik) ಐಪಿಎಲ್ 2022 ರಲ್ಲಿ ಐದು ವೇಗದ ಎಸೆತಗಳನ್ನು ಬೌಲ್ ಮಾಡಿದ್ದಾರೆ. ಈ ಮೂಲಕ ಐಪಿಎಲ್‌ನ ವೇಗದ ಎಸೆತಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ.
ಶ್ರೀನಗರ ಮೂಲದ ಯುವ ಕ್ರಿಕೆಟಿಗ ಉಮ್ರಾನ್ ಮಲಿಕ್ (Umran Malik) ಗುಜರಾತ್ ಲಯನ್ಸ್ (ಜಿಎಲ್) ಮತ್ತು ಸನ್‌ರೈಸರ್ಸ್ ನಡುವಿನ ಪಂದ್ಯದಲ್ಲಿ ಐದು ವೇಗದ ಎಸೆತಗಳನ್ನು ಎಸೆದಿದ್ದಾರೆ. ಪ್ರತೀ ಗಂಟೆಗೆ 153.3 ಕಿಮೀ, 153.1 ಕಿಮೀ, 152.4 ಕಿಮೀ / ಗಂ, 152.3 ಕಿಮೀ / ಗಂ ಮತ್ತು 151.8 ಕಿಮೀ / ಗಂಟೆ ಚೆಂಡು ಎಸೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅಲ್ಲದೇ ಭಾರತದ ಭವಿಷ್ಯ ಬೌಲರ್ ಅನ್ನೋ ಚರ್ಚೆಗೂ ಕಾರಣರಾಗಿದ್ದಾರೆ.

ಐಪಿಎಲ್ 2022 ರಲ್ಲಿ ಮಲಿಕ್ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ದಿನೇ ದಿನೇ ವೇಗದ ಎಸೆತಗಳನ್ನು ದಾಖಲು ಮಾಡುತ್ತಿದ್ದಾರೆ. ಕಳೆದೆ ಬಾರಿಯ ಐಪಿಎಲ್‌ನಲ್ಲಿ ಕೋವಿಡ್ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ T. ನಟರಾಜನ್‌ಗೆ ಬದಲಿಯಾಗಿ ಯುವ ಬೌಲರ್ ಉಮ್ರಾನ್ ಮಲಿಕ್ ಸ್ಥಾನ ಪಡೆದಿದ್ದರು. 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಕಳೆದ ಬಾರಿ ಪ್ಲೇ ಸ್ಥಾನದಿಂದ ಹೊರ ಬಿದ್ದ ನಂತರದಲ್ಲಿ ಉಮ್ರಾನ್ ಮಲಿಕ್‌ಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿತ್ತು.
ಈ ಬಾರಿಯ ಐಪಿಎಲ್ (IPL 2022) ಪಂದ್ಯಾವಳಿಯಲ್ಲಿ ಸನ್‌ರೈಸಸ್ ಹೈದ್ರಾಬಾದ್ ತಂಡ ಡೇವಿಡ್ ವಾರ್ನರ್, ಜಾನಿ ಬೈರೆಸ್ಟೋ ಹಾಗೂ ರಶೀದ್ ಖಾನ್ ಅವರಂತಹ ಆಟಗಾರರು ಇದ್ದರೂ ಕೂಡ ಸನ್ ರೈಸಸ್ ತಂಡ ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಆದರೆ ಇದೀಗ 22 ವರ್ಷದ ಮಲಿಕ್ ಉತ್ತಮ ಫಿಟ್ನೆಸ್ ಅನ್ನು ತೋರಿಸಿದ್ದಾರೆ. ಜೊತೆಗೆ 140 ಕಿಲೋಮೀಟರ್ ಸರಾಸರಿಯಲ್ಲಿ ಎಸೆತಗಳನ್ನು ಎಸೆಯುತ್ತಿದ್ದಾರೆ.

ಉಮ್ರಾನ್ ಮಲ್ಲಿಕ್ ಬೌಲಿಂಗ್ ಶೈಲಿಗೆ ಇದೀಗ ದೇಶದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೇ ಟೀಂ ಇಂಡಿಯಾದ ಮಾಜಿ ಆಟಗಾರ ರವಿಶಾಸ್ತ್ರಿ ಕೂಡ ಉಮ್ರಾನ್ ಮಲಿಕ್ ಭಾರತ ತಂಡವನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದಿದ್ದಾರೆ. ಅವನು ಸ್ಥಿರ ಮತ್ತು ನಾನು ಅವನ ವರ್ತನೆಯನ್ನು ಇಷ್ಟಪಡುತ್ತೇನೆ. ಈ ಮಗು ಮಾತ್ರ ಕಲಿಯಬಲ್ಲದು. ಈ ಹುಡುಗನಿಗೆ ನಿಜವಾದ ವೇಗವಿದೆ, ಅವನು ಸರಿಯಾದ ಪ್ರದೇಶಗಳನ್ನು ಹೊಡೆದರೆ, ಅವನು ಬಹಳಷ್ಟು ಬ್ಯಾಟರ್‌ಗಳಿಗೆ ತೊಂದರೆಯಾಗುತ್ತಾನೆ. ಇದು ಅವನನ್ನು ಸರಿಯಾಗಿ ನಿರ್ವಹಿಸುವ ಬಗ್ಗೆ. ನೀವು ಮಾಡಬೇಕಾಗಿದೆ ಅವರಿಗೆ ಸರಿಯಾದ ಸಂದೇಶಗಳನ್ನು ನೀಡಿ. ನೀವು ಅವರೊಂದಿಗೆ ಸಂವಹನ ನಡೆಸುವ ವಿಧಾನವು ಬಹಳ ಮುಖ್ಯವಾಗಿರುತ್ತದೆ. ಅವರ ಸಾಮರ್ಥ್ಯದಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.
Umran Malik begs his 4th consecutive fastest delivery award. Tonight for clocking 153.3kmph. pic.twitter.com/6OIBOn2N8p
— Mufaddal Vohra (@mufaddal_vohra) April 11, 2022
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ SRH ನ ಪಂದ್ಯದಲ್ಲಿ ಸ್ಪೀಡ್‌ಸ್ಟರ್ ಯೋಗ್ಯವಾದ ವೇಗವನ್ನು ಸೃಷ್ಟಿಸಿದ ನಂತರ ಶಾಸ್ತ್ರಿ ಮಲಿಕ್ ಬಗ್ಗೆ ಪ್ರಭಾವಿತರಾದರು. 2021 ರ T20 ವಿಶ್ವಕಪ್‌ನಲ್ಲಿ ಭಾರತದ ಅಭಿಯಾನದ ಸಮಯದಲ್ಲಿ ಮಲಿಕ್ ನೆಟ್ ಬೌಲರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಮಲಿಕ್ ಇದನ್ನು ದೊಡ್ಡದಾಗಿ ಮತ್ತು ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಬಹುದೇ ಎಂದು ನೋಡಬೇಕಾಗಿದೆ.
ಇದನ್ನೂ ಓದಿ : ಹರ್ಷಲ್ ಪಟೇಲ್ ಸಹೋದರಿ ನಿಧನ : ಆರ್‌ಸಿಬಿ ತೊರೆದ ಖ್ಯಾತ ಆಟಗಾರ
ಇದನ್ನೂ ಓದಿ : ಕುಲದೀಪ್ ಯಾದವ್ ಅದ್ಬುತ ಬೌಲಿಂಗ್ : ಡೆಲ್ಲಿ ವಿರುದ್ದ ಸೋಲು ಕಂಡ ಕೆಕೆಆರ್
Umran Malik fastest pacer of IPL 2022