ಕೇಪ್ ಟೌನ್ : ಚೊಚ್ಚಲ ಆವೃತ್ತಿಯ ಮಹಿಳಾ U19 ವಿಶ್ವಕಪ್ ಟಿ20 ಟೂರ್ನಿ (ICC Women’s Under-19 T20 World Cup 2022/23) ನಾಳೆ (ಶನಿವಾರ) ದಕ್ಷಿಣ ಆಫ್ರಿಕಾದಲ್ಲಿ ಆರಂಭವಾಗಲಿದ್ದು, ಶೆಫಾಲಿ ವರ್ಮಾ ಸಾರಥ್ಯದ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ (Women’s U19 World Cup) ನಡುವಿನ ಪಂದ್ಯ ಬೆನೋಯ್’ನಲ್ಲಿರುವ ವಿಲ್ಲೋಮೂರ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.
ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಸ್ಕಾಟ್ಲೆಂಡ್ ತಂಡಗಳ ಜೊತೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಇಂಡೋನೇಷ್ಯಾ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ರವಾಂಡ, ಸ್ಕಾಟ್ಲೆಂಡ್, ಶ್ರೀಲಂಕಾ, ಯುಎಇ, ಅಮೆರಿಕ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಮಹಿಳಾ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಲಿವೆ.
Captain Shafali Verma all set to bash!#U19CWC #U19WorldCup pic.twitter.com/ouT78fFrSl
— Pooja (Captain Healy) (@Alyssa_Healy77) January 10, 2023
16 ತಂಡಗಳನ್ನು ಒಟ್ಟು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ಗುಂಪಿನಿಂದ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಪ್ಲೇ ಆಫ್ ಪಂದ್ಯಗಳು ಜನವರಿ 20ರಂದು ಆರಂಭವಾಗಲಿದ್ದು, ಜನವರಿ 27ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯ ಜನವರಿ 29ರಂದು ನಡೆಯಲಿದೆ.
ಐಸಿಸಿ ಮಹಿಳಾ U19 ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡ:
ಶೆಫಾಲಿ ವರ್ಮಾ (ನಾಯಕಿ), ಶ್ವೇತಾ ಸೆಹ್ರಾವತ್ (ಉಪನಾಯಕಿ), ಹೃಷಿತಾ ಬಸು (ವಿಕೆಟ್ ಕೀಪರ್), ಪಾರ್ಷವಿ ಚೋಪ್ರಾ, ಅರ್ಚನಾ ದೇವಿ, ಫಾಲಕ್ ನಾಜ್, ಹರ್ಲೀ ಗಾಲ, ರಿಚಾ ಘೋಷ್ (ವಿಕೆಟ್ ಕೀಪರ್), ಮನ್ನತ್ ಕಶ್ಯಪ್, ಸೋನಿಯಾ ಮೆಂದಿಯಾ, ಟೈಟಸ್ ಸಂಧು, ಶಬ್ನಮ್ ಎಂಡಿ., ಸೌಮ್ಯ ತಿವಾರಿ, ಗೊಂಗಾಡಿ ತೃಷಾ, ಸೋನಮ್ ಯಾದವ್.
ಐಸಿಸಿ ಮಹಿಳಾ U19 ವಿಶ್ವಕಪ್: ಭಾರತದ ಪಂದ್ಯಗಳ ವೇಳಾಪಟ್ಟಿ (ICC Women’s Under-19 T20 World Cup 2022/23) :
Vs ದಕ್ಷಿಣ ಆಫ್ರಿಕಾ, ಜನವರಿ 14
Vs ಯುಎಇ, ಜನವರಿ 16
Vs ಸ್ಕಾಟ್ಲೆಂಟ್, ಜನವರಿ 18
ಇದನ್ನೂ ಓದಿ : KL Rahul 50 ODI matches : 24 ವರ್ಷಗಳ ನಂತರ ಭಾರತ ಪರ 50 ಏಕದಿನ ಪಂದ್ಯಗಳನ್ನಾಡಿದ ಮೊದಲ ಕನ್ನಡಿಗ
ಇದನ್ನೂ ಓದಿ : ರಣಜಿ ಟ್ರೋಫಿ ಮನೀಶ್ ಪಾಂಡೆಗೆ ಡಬಲ್ ಧಮಾಕ, 20ನೇ ಶತಕ, 6 ಸಾವಿರ ರನ್ ಗಡಿ ದಾಟಿದ ಪಾಂಡೆ
Women’s U19 World Cup from tomorrow; South Africa are the first opponents for Shefali Verma-led India