ದೆಹಲಿ: (Delhi Capital new Captain)ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕಾರಣ ಐಪಿಎಲ್-2023 ಟೂರ್ನಿಯಲ್ಲಿ ಆಡುತ್ತಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನೂತನ ನಾಯಕನ ಹುಡುಕಾಟದಲ್ಲಿದೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೊಸ ನಾಯಕ ಯಾರು ಎಂಬುದು ಕುತೂಹಲ ಕೆರಳಿಸಿದೆ. ಡೆಲ್ಲಿ ನಾಯಕತ್ವಕ್ಕೆ ಮೂವರು ಆಟಗಾರರ ಮಧ್ಯೆ ಸ್ಪರ್ಧೆಯಿದೆ.
(Delhi Capital new Captain)ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (David Warner)ಕರ್ನಾಟಕ ತಂಡದ ಮಾಜಿ ನಾಯಕ ಮನೀಶ್ ಪಾಂಡೆ (Manish Pandey) ಮತ್ತು ಭಾರತ ಅಂಡರ್-19 ತಂಡದ ಮಾಜಿ ನಾಯಕ ಪೃಥ್ವಿ ಶಾ (Prithvi Shaw) ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ರೇಸ್’ನಲ್ಲಿದ್ದಾರೆ.ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ 2016ರಲ್ಲಿ ಐಪಿಎಲ್ ಚಾಂಪಿಯನ್ ಆಗಿತ್ತು. ಮನೀಶ್ ಪಾಂಡೆ ಕರ್ನಾಟಕ ತಂಡದ ಯಶಸ್ವಿ ನಾಯಕರಾಗಿದ್ದವರು. ಪೃಥ್ವಿ ಶಾ 2018ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ. ಈ ಮೂವರಲ್ಲಿ ಡೇವಿಡ್ ವಾರ್ನರ್ ಅವರೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗುವ ಸಾಧ್ಯತೆ ಹೆಚ್ಚು.
25 ವರ್ಷದ ರಿಷಭ್ ಪಂತ್ (Rishabh Pant accident) ಡಿಸೆಂಬರ್ 30ರಂದು ಬೆಳಗ್ಗೆ ಐದೂವರೆಗೆ ದೆಹಲಿ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ಅಪಘಾತಕ್ಕೊಳಲಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಅತಿಯಾದ ವೇಗದಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಪಂತ್ ಅವರ ಮುಖ, ಬೆನ್ನು, ಮೊಣಕಾಲು, ಪಾದಕ್ಕೆ ಗಾಯವಾಗಿತ್ತು.ಡೆಹ್ರಾಡೂನ್’ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಷಭ್ ಪಂತ್ ಅವರನ್ನು ಮುಂಬೈಗೆ ಏರ್ ಲಿಫ್ಟ್ ಮಾಡಲು ಬಿಸಿಸಿಐ ನಿರ್ಧರಿಸಿದೆ. ಏರ್ ಆ್ಯಂಬುಲೆನ್ಸ್ ಮೂಲಕ ಪಂತ್ ಅವರನ್ನು ಮುಂಬೈನ ಕೊಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಓದಿ:Abhimanyu Eswaran century : ಅಪ್ಪ ಕಟ್ಟಿಸಿದ ತನ್ನದೇ ಹೆಸರಿನ ಕ್ರೀಡಾಂಗಣದಲ್ಲಿ ರಣಜಿ ಶತಕ ಬಾರಿಸಿದ ಮಗ
ಇದನ್ನೂ ಓದಿ:Ranji Karnataka : V3 ಸ್ಟಾರ್ಸ್ ದಾಳಿಗೆ ಛತ್ತೀಸ್‌ಗಢ ಚಿತ್, ಕ್ಯಾಪ್ಟನ್ ಮಯಾಂಕ್ ಶತಕದ ಅಬ್ಬರ
ಐಪಿಎಲ್ 2023: ಡೆಲ್ಲಿ ಕ್ಯಾಪಿಟಲ್ಸ್ ತಂಡ(ರಿಷಭ್ ಪಂತ್ ಹೊರತು ಪಡಿಸಿ):
ಡೇವಿಡ್ ವಾರ್ನರ್, ಪೃಥ್ವಿ ಶಾ, ರಿಪಲ್ ಪಟೇಲ್, ರೋವ್‌ಮನ್ ಪೊವೆಲ್, ಸರ್ಫರಾಜ್ ಖಾನ್, ಯಶ್ ಧುಲ್, ಮಿಚೆಲ್ ಮಾರ್ಷ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಆ್ಯನ್ರಿಚ್ ನಾರ್ಟ್ಜೆ, ಚೇತನ್ ಸಕರಿಯಾ, ಕಮಲೇಶ್ ನಾಗರಕೋಟಿ, ಲುಂಗಿ ಎನ್‌ಗಿಡಿ, ಮುಸ್ತಾಫಿಜುರ್ ರೆಹಮಾನ್, ಅಮಾನ್ ಖಾನ್, ಕುಲದೀಪ್ ಯಾದವ್, ಪ್ರವೀಣ್ ದುಬೆ, ವಿಕ್ಕಿ ಒಸ್ತ್ವಾಲ್, ಇಶಾಂತ್ ಶರ್ಮಾ, ಫಿಲ್ ಸಾಲ್ಟ್, ಮುಖೇಶ್ ಕುಮಾರ್, ಮನೀಷ್ ಪಾಂಡೆ, ರಿಲೀ ರೊಸೋ.
Delhi Capital new Captain Kannadiga Manish Pandey became the captain of Delhi? Who among these three is the new leader?