ಶನಿವಾರ, ಜೂನ್ 14, 2025
HomeSportsCricketMarnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ...

Marnus Labuschagne insult Sachin Tendulkar : ಕ್ರಿಕೆಟ್ ದೇವರಿಗೆ ಅವಮಾನ ಮಾಡಿದ್ರಾ ಈ ಆಸೀಸ್ ಕ್ರಿಕೆಟರ್ ?

- Advertisement -

ಬೆಂಗಳೂರು: (Marnus Labuschagne insult Sachin Tendulkar ) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವ್ರಿಗೆ ಕ್ರಿಕೆಟ್ ಜಗತ್ತಿನಲ್ಲಿರೋ ರೆಸ್ಪೆಕ್ಟೇ ಬೇರೆ. ಸಚಿನ್ ಅವರನ್ನು ಕ್ರಿಕೆಟ್ ಗಾಡ್ ಅಂತ ಕರೆಯಲಾಗತ್ತೆ. ಸಚಿನ್ ಅವರನ್ನು ಆರಾಧ್ಯದೈವವಾಗಿ ನೋಡೋ ಜನ ಕೋಟಿ ಕೋಟಿಗಳ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಷ್ಟೇ ಅಲ್ಲ, ಜಗತ್ತಿನಾದ್ಯಂತ ಅಭಿಮಾನಿಗಳ ಪ್ರೀತಿ, ಗೌರವ ಸಂಪಾದಿಸಿದ ಆಟಗಾರ ಸಚಿನ್ ತೆಂಡೂಲ್ಕರ್. ಅಂತಹ ಸಚಿನ್ ಅವ್ರಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಾರ್ನಸ್ ಲಬುಷೇನ್ (Marnus Labuschagne) ಅವಮಾನ ಮಾಡಿದ್ದಾರೆ ಅಂತ ಕ್ರಿಕೆಟ್ ಪ್ರಿಯರು ಆರೋಪಿಸ್ತಾ ಇದ್ದಾರೆ. ಸಚಿನ್ ಇಂಟರ್’ನ್ಯಾಷನಲ್ ಕ್ರಿಕೆಟ್”ಗೆ ಕಾಲಿಟ್ಟಾಗ ನೀನಿನ್ನೂ ಹುಟ್ಟೇ ಇರ್ಲಿಲ್ಲ, ಸ್ವಲ್ಪ ಗೌರವದಿಂದ ಮಾತಾಡು ಅಂತ ಲಬುಷನ್ ವಿರುದ್ಧ ಸಚಿನ್ ಅಭಿಮಾನಿಗಳು ಗರಂ ಆಗಿದ್ದಾರೆ.

ಅಷ್ಟಕ್ಕೂ ಆಗಿದ್ದೇನಂದ್ರೆ, ಕಾಮನ್’ವೆಲ್ಸ್ ಗೇಮ್ಸ್”ಗೆ (Commonwealth Games 2022) ಕ್ರಿಕೆಟ್ ಮರಳಿದ್ದರ ಬಗ್ಗೆ ಕೆಲ ದಿನಗಳ ಹಿಂದೆ ಸಚಿನ್ ತೆಂಡೂಲ್ಕರ್ (Sachin Tendulkar) ಒಂದು ಟ್ವೀಟ್ ಮಾಡಿದ್ರು. ಸಚಿನ್ ಆ ಟ್ವೀಟ್ ಮಾಡಿದ್ದು ಜುಲೈ 29ರಂದು. “ಕಾಮನ್ವೆಲ್ತ್ ಗೇಮ್ಸ್”ಗೆ ಕ್ರಿಕೆಟ್ ವಾಪಸ್ ಬಂದಿರುವುದನ್ನು ನೋಡಲು ಖುಷಿಯಾಗುತ್ತಿದೆ. ಇದು ನಮ್ಮ ಸುಂದರ ಆಟವನ್ನು ಹೊಸ ಹೊಸ ಪ್ರೇಕ್ಷಕರ ಕಡೆ ತೆಗೆದುಕೊಂಡು ಹೋಗಲಿಗೆ ಎಂದು ಭಾವಿಸುತ್ತೇನೆ. ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಆಡುತ್ತಿರುವ ನಮ್ಮ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಕೆಗಳು” ಎಂದು ಸಚಿನ್ ಟ್ವೀಟ್ ಮಾಡಿದ್ದರು.

ಸಚಿನ್ ತೆಂಡೂಲ್ಕರ್ ಅವರ ಈ ಟ್ವೀಟ್’ಗೆ ಪ್ರತಿಕ್ರಿಯಿಸಿದ್ದ ಆಸ್ಟ್ರೇಲಿಯಾ ತಂಡದ ಯುವ ಆಟಗಾರ ಮಾರ್ನಸ್ ಲಬುಷೇನ್, “ಹೌದು ಸಚಿನ್. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಟೂರ್ನಿಗೆ ಅದ್ಭುತ ಆರಂಭವಾಗಲಿದೆ ಎಂದು ಭಾವಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್”ನಲ್ಲಿ ಮಾರ್ನಸ್ ಲಬುಷೇನ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು “ಸಚಿನ್” ಎಂದು ಕರೆದದ್ದು ಕೆಲ ಕ್ರಿಕೆಟ್ ಪ್ರಿಯರಿಗೆ ಇಷ್ಟವಾಗಿಲ್ಲ. ಸಚಿನ್ ಅವರನ್ನು ಲಬುಷೇನ್ ಏಕವಚನದಲ್ಲಿ ಕರೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಸೀಸ್ ಆಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ಡಬ್ಯು ಮಾಡಿದಾಗ ನೀನು ಹುಟ್ಟೇ ಇರ್ಲಿಲ್ಲ, ಸ್ವಲ್ಪ ಗೌರವದಿಂದ ಮಾತಾಡು” ಅಂತ ಲಬುಷೇನ್ ವಿರುದ್ದ ಒಬ್ಬ ಕ್ರಿಕೆಟ್ ಫ್ಯಾನ್ ಕಿಡಿಕಾರಿದ್ದಾನೆ.

ಮತ್ತೊಬ್ಬ “ನಮ್ಮ ಭಾರತ ತಂಡದ ಆಟಗಾರರೂ ಸಚಿನ್ ತೆಂಡೂಲ್ಕರ್ ಅವರನ್ನು ಈ ರೀತಿ ಕರೆಯುವುದಿಲ್ಲ, ಮಾತಿನಲ್ಲಿ ಸ್ವಲ್ಪ ಗೌರವಿರಲಿ” ಎಂದು ಟ್ವೀಟ್ ಮಾಡಿದ್ದಾನೆ.


ಮಾರ್ನಸ್ ಲಬುಷೇನ್ ಹುಟ್ಟುವ 5 ವರ್ಷಕ್ಕೂ ಮೊದ್ಲೇ ಸಚಿನ್ ತೆಂಡೂಲ್ಕರ್ 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. 1994ರಲ್ಲಿ ಜನಿಸಿದ್ದ ಮಾರ್ನಸ್ ಲಬುಷೇನ್ ಆಸ್ಟ್ರೇಲಿಯಾ ಪರ ಈಗಷ್ಟೇ ಟೆಸ್ಟ್ ಕ್ರಿಕೆಟ್”ನಲ್ಲಿ ಹೆಸರು ಮಾಡುತ್ತಿದ್ದಾರೆ.

ಇದನ್ನೂ ಓದಿ : India squad for Zimbabwe tour announced : ಜಿಂಬಾಬ್ವೆ ಪ್ರವಾಸಕ್ಕಿಲ್ಲ ವಿರಾಟ್, ರಾಹುಲ್ : ಟೀಮ್ ಇಂಡಿಯಾಗೆ ಮತ್ತೆ ಶಿಖರ್ ಧವನ್ ಕ್ಯಾಪ್ಟನ್

ಇದನ್ನೂ ಓದಿ : KL Rahul hits back to Critics : ರಾಹುಲ್ ಬಗ್ಗೆ ಇಲ್ಲ ಸಲ್ಲದ ಟೀಕೆ ; ಚುಚ್ಚು ಮಾತುಗಳಿಗೆ ಖಡಕ್ ಉತ್ತರ ಕೊಟ್ಟ ಕನ್ನಡಿಗ

Did Marnus Labuschagne insult Sachin Tendulkar ?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular