ಐಪಿಎಲ್ ಪಂದ್ಯಾವಳಿಗಳ ಬಳಿಕ ಕ್ರಿಕೆಟಿಗರು ಚಿಯರ್ ಗರ್ಲ್ಸ್ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ ಎಂಬ ಆರೋಪಕ್ಕೆ ಮತ್ತಷ್ಟು ಪುಷ್ಠಿ ದೊರೆತಿದ್ದು, ಲೇಟ್ ನೈಟ್ ಪಾರ್ಟಿಗಳ ಸತ್ಯ ಮತ್ತು ಭಯಾನಕತೆಯ ಬಗ್ಗೆ ದಕ್ಷಿಣ ಆಫ್ರಿಕಾ ಮೂಲಕ ಚಿಯರ್ಸ್ ಗರ್ಲ್ಸ್ ಗೇಬ್ರಿಯಲಾ ಪಾಸ್ಕ್ವಾಲೊಟ್ಟು.

ಐಪಿಎಲ್ ಪಂದ್ಯಾವಳಿ ಬಳಿಕ ನಡೆಯುವ ಪಾರ್ಟಿಯಲ್ಲಿ ಕ್ರಿಕೆಟ್ ಆಟಗಾರರು ಮೈಮೇಲೆ ಸಮತೋಲನ ಕಳೆದುಕೊಂಡಂತೆ ವರ್ತಿಸುತ್ತಾರೆ. ಕುಡಿದ ಮತ್ತಿನಲ್ಲಿ ಚಿಯರ್ಸ್ ಗರ್ಲ್ಸ್ ಗಳನ್ನು ಎಲ್ಲಿ ಬೇಕೋ ಅಲ್ಲಿ ಮುಟ್ಟಿ ಮನಬಂದಂತೆ ವರ್ತಿಸುತ್ತಾರೆ. ನಮ್ಮನ್ನು ಅಕ್ಷರಷಃ ಮಾಂಸದ ಮುದ್ದೆಗಳಂತೆ ಟ್ರೀಟ್ ಮಾಡುತ್ತಾರೆ ಎಂದು ಗೇಬ್ರಿಯಲಾ ಆರೋಪಿಸಿದ್ದಾರೆ.

ಪಂದ್ಯಾವಳಿ ಬಳಿಕ ಪಾರ್ಟಿಗಳಲ್ಲಿ ನಡೆಯುವ ಈ ಕ್ರಿಕೆಟಿಗರ ಈ ಅಸಭ್ಯ ವರ್ತನೆ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಈ ಹಿಂದೆಯೇ ಮುಂಬೈ ತಂಡದ ಚಿಯರ್ಸ್ ಗರ್ಲ್ಸ್ ಟೀಂನಿಂದ ಅವರನ್ನು ವಜಾ ಮಾಡಲಾಗಿತ್ತು ಅಷ್ಟೇ ಅಲ್ಲ ಅಲ್ಲಿಂದ ದಕ್ಷಿಣ ಆಫ್ರಿಕಾಗೆ ವಾಪಸ್ ಕಳುಹಿಸಲಾಗಿತ್ತು.

ದಕ್ಷಿಣ ಆಫ್ರಿಕಾಗೆ ತೆರಳಿದ ಬಳಿಕವೂ ತಮ್ಮ ಅಸಮಧಾನವನ್ನು ಹೊರಹಾಕಿರುವ ಗೇಬ್ರಿಯಲಾ, ಯೆಟ್ ಐಪಿಎಲ್ ಗರ್ಲ್ ಟ್ವೀಟರ್ ಖಾತೆಯಲ್ಲಿ ತಾವು ಅನುಭವಿಸಿದ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ನಮ್ಮನ್ನು ಮಹಿಳೆ ಎಂಬುದಕ್ಕೆ ಬದಲಾಗಿ ಮಾಂಸದ ತುಂಡುಗಳಂತೆ ಟ್ರೀಟ್ ಮಾಡುತ್ತಿದ್ದರು ಆಟಗಾರರು. ನಾವು ಸುಲಭವಾಗಿ ಸಿಗುತ್ತೇವೆ ಎಂದು ಅವರು ಎಂದುಕೊಂಡಿದ್ದಾರೆ ಎಂದು ಗೇಬ್ರಿಯಲಾ ಆರೋಪಿಸಿದ್ದಾರೆ.

ಇದನ್ನೂ ಓದಿ : ಹಾಟ್ ಪೋಟೋಸ್ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ ಮಾದಕ ಬೆಡಗಿ ತಾನ್ಯಾ ಹೋಪ್..!!
ಆಕೆಯ ಈ ಅಸಮಧಾನಕ್ಕೆ ಮಿಸ್ಟರ್ ಎಕ್ಸ್ ಎಂಬುವವರು ಬೆಂಬಲ ಸೂಚಿಸಿದ್ದಾರೆ. ಗೇಬ್ರಿಯಲಾ ತಮ್ಮ ಅಸಮಧಾನ ತೋಡಿಕೊಂಡ ಬಳಿಕ ಈ ಬಗ್ಗೆ ಬ್ಲಾಗ್ ಕೂಡ ಬರೆದಿದ್ದಾರೆ. ಅಲ್ಲದೇ ದಕ್ಷಿಣ ಆಫ್ರಿಕಾದ ಮಾಧ್ಯಮಗಳಿಗೂ ಗೇಬ್ರಿಯಲಾ ಸಂದರ್ಶನ ನೀಡಿದ್ದಾರೆ.
ಪಾರ್ಟಿ ನಡೆಯುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಇದೆ. ಅದರಲ್ಲಿ ಅಗತ್ಯವಿದ್ದರೇ ಆಟಗಾರರ ವರ್ತನೆಯನ್ನು ನೀವು ಪರಿಶೀಲಿಸಬಹುದು ಎಂದಿದ್ದಾರೆ. ಆದರೆ ಆಕೆಯ ವರ್ತನೆಯ ಕಡೆಗೆ ಐಪಿಎಲ್ ಚಿಯರ್ ಲೀಡರ್ ಒಬ್ಬರು ಬೊಟ್ಟು ಮಾಡಿದ್ದು, ಅದಕ್ಕಾಗಿ ಆಕೆಯನ್ನು ಮನೆಗೆ ಕಳುಹಿಸಲಾಯಿತು.