ಸೋಮವಾರ, ಏಪ್ರಿಲ್ 28, 2025
HomeSportsCricketHardik Pandya Nicholas Pooran: ಪೂರನ್’ಗೆ ಚಾಲೆಂಜ್ ಹಾಕಿ ಸಿಕ್ಸರ್ ಚಚ್ಚಿಸಿಕೊಂಡ ಬಿಲ್ಡಪ್ ರಾಜ ಪಾಂಡ್ಯ

Hardik Pandya Nicholas Pooran: ಪೂರನ್’ಗೆ ಚಾಲೆಂಜ್ ಹಾಕಿ ಸಿಕ್ಸರ್ ಚಚ್ಚಿಸಿಕೊಂಡ ಬಿಲ್ಡಪ್ ರಾಜ ಪಾಂಡ್ಯ

- Advertisement -

ಫ್ಲೋರಿಡಾ: Hardik Pandya Nicholas Pooran : ಟೀಮ್ ಇಂಡಿಯಾ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ದೊಡ್ಡ ಬಿಲ್ಡಪ್ ರಾಜ ಎಂಬುದು ಪದೇ ಪದೇ ಪ್ರೂವ್ ಆಗ್ತಿದೆ. 2022ರಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿ ಭಾರತ ಟಿ20 ತಂಡದ ನಾಯಕತ್ವ ದಕ್ಕಿಸಿಕೊಂಡಿದ್ದ ಪಾಂಡ್ಯ, ಟೀಮ್ ಇಂಡಿಯಾ ನಾಯಕನಾದ ನಂತರ ಆಟಕ್ಕಿಂತಲೂ ತಮ್ಮ ಬಿಟ್ಟಿ ಬಿಲ್ಡಪ್’ನಿಂದಲೇ ಸುದ್ದಿಯಾಗುತ್ತಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ (India Vs West Indies T20 series) ಬಿಲ್ಡಪ್ ರಾಜ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ಎಕ್ಸ್’ಪೋಸ್ ಆಗಿದ್ದಾರೆ. ವೆಸ್ಟ್ ಇಂಡೀಸ್’ನ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ನಿಕೊಸಲಸ್ ಪೂರನ್, ಹಾರ್ದಿಕ್ ಪಾಂಡ್ಯನ ಅಹಂಕಾರವನ್ನು ಮುರಿದಿದ್ದಾರೆ. ಅಷ್ಟಕ್ಕೂ ಆಗಿದ್ದೇನಂದ್ರೆ, ಆಗಸ್ಟ್ 8ರಂದು ಗಯಾನದಲ್ಲಿ ನಡೆದಿದ್ದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಟಿ20 ಪಂದ್ಯದ ನಂತರ ನಿಕೊಲಸ್ ಪೂರನ್ ಬಗ್ಗೆ ಹಾರ್ದಿಕ್ ಪಾಂಡ್ಯ ಹೇಳಿಕೆಯೊಂದನ್ನು ನೀಡಿದ್ದರು.

“ನನ್ನ ಬೌಲಿಂಗ್’ನಲ್ಲಿ ನಿಕೊಲಸ್ ಪೂರನ್ ಸಿಕ್ಸರ್’ಗಳನ್ನು ಬಾರಿಸಬೇಕೆಂದು ಬಯಸಿದರೆ, ಆತ ಸಿಕ್ಸರ್’ಗಳನ್ನು ಬಾರಿಸಬಹುದು” ಎಂದು ಪಾಂಡ್ಯ ಹೇಳಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ಪೂರನ್, ಫ್ಲೋರಿಡಾದಲ್ಲಿ ನಡೆದ 5ನೇ ಟಿ20 ಪಂದ್ಯದಲ್ಲಿ ಪಾಂಡ್ಯಗೆ ಸತತ ಎರಡು ಸಿಕ್ಸರ್’ಗಳನ್ನು ಬಾರಿಸಿ ಟೀಮ್ ಇಂಡಿಯಾ ನಾಯಕನ ಸೊಕ್ಕಡಗಿಸಿದ್ದಾರೆ. ಅಷ್ಟೇ ಅಲ್ಲ, 5ನೇ ಪಂದ್ಯದಲ್ಲಿ ಪಾಂಡ್ಯ ನಾಯಕತ್ವದ ಭಾರತ ತಂಡವನ್ನು 8 ವಿಕೆಟ್’ಗಳಿಂದ ಬಗ್ಗುಬಡಿದ ವೆಸ್ಟ್ ಇಂಡೀಸ್, 5 ಪಂದ್ಯಗಳ ಟಿ20 ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿದೆ. ಇದನ್ನೂ ಓದಿ : Big test for KL Rahul : ಆಗಸ್ಟ್ 18ರಂದು ರಾಹುಲ್’ಗೆ ದೊಡ್ಡ ಅಗ್ನಿಪರೀಕ್ಷೆ, ಆ ಪರೀಕ್ಷೆ ಗೆದ್ದರಷ್ಟೇ ವಿಶ್ವಕಪ್ ಟಿಕೆಟ್!

ಗೆಲ್ಲಲು ಭಾರತ ಒಡ್ಡಿದ 166 ರನ್’ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್, ಓಪನರ್ ಬ್ರೆಂಡನ್ ಕಿಂಗ್ 55 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್’ಗಳ ನೆರವಿನಿಂದ ಬಾರಿಸಿದ ಸ್ಫೋಟಕ ಅಜೇಯ 85 ರನ್ ಹಾಗೂ ನಿಕೊಲಸ್ ಪೂರನ್ 35 ಎಸೆತಗಳಲ್ಲಿ 4 ಸಿಕ್ಸರ್’ಗಳ ನೆರವಿನಿಂದ ಸಿಡಿಸಿದ 47 ರನ್’ಗಳ ಬಲದಿಂದ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು.

Hardik Pandya Nicholas Pooran: Hardik Pandya challenged Pooran and hit a six.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular