USA vs PAK ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ಧ ‘ಸೂಪರ್’ ಗೆಲುವು, ಅಮೆರಿಕವನ್ನು ಗೆಲ್ಲಿಸಿದ ಚಿಕ್ಕಮಗಳೂರಿನ ಯುವಕ !

USA Vs Pakistan Nosthush Kenjige : ಡಲ್ಲಾಸ್ (ಅಮೆರಿಕ) : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಕ್ರಿಕೆಟ್ ಶಿಶು ಅಮೆರಿಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ನೀಡಿದೆ.

USA Vs Pakistan Nosthush Kenjige : ಡಲ್ಲಾಸ್ (ಅಮೆರಿಕ) : ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC t20 World Cup 2024) ಕ್ರಿಕೆಟ್ ಶಿಶು ಅಮೆರಿಕ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತ ನೀಡಿದೆ. ಡಲ್ಲಾಸ್’ನ ಗ್ರ್ಯಾಂಡ್ ಪ್ರೈರೀ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮೆರಿಕ ತಂಡ ಸೂಪರ್ ಓವರ್’ನಲ್ಲಿ ಪಾಕಿಸ್ತಾನ ತಂಡವನ್ನು 5 ರನ್’ಗಳಿಂದ ಮಣಿಸಿ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿತು.

Nosthush Kenjige Chikkamagaluru
Image Credit to Original Source

ಪಂದ್ಯ ಟೈ ಆದ ಕಾರಣ ಸೂಪರ್ ಓವರ್’ಗೆ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ 1 ಓವರ್’ನಲ್ಲಿ 1 ವಿಕೆಟ್ ನಷ್ಟಕ್ಕೆ 18 ರನ್ ಗಳಿಸಿದರೆ, 6 ಎಸೆತಗಳಲ್ಲಿ 19 ರನ್’ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿ 5 ರನ್’ಗಳಿಂದ ಅಮೆರಿಕಕ್ಕೆ ಶರಣಾಯಿತು. ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಅಮೆರಕ ಬೌಲರ್’ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿ ನಿಗದಿತ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಲಷ್ಟೇ ಶಕ್ತವಾಯಿತು.

ನಂತರ ಗುರಿ ಬೆನ್ನಟ್ಟಿದ ಅಮೆರಿಕ 20 ಓವರ್’ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಗಳಿಸುವುದರೊಂದಿಗೆ ಪಂದ್ಯ ಟೈ ಆಯಿತು. ಅಮೆರಿಕ ತಂಡದ ನಾಯಕ, ಗುಜರಾತ್ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊನಾಂಕ್ ಪಟೇಲ್ 38 ಎಸೆತಗಳಲ್ಲಿ ರನ್ ಗಳಿಸಿದರೆ, ಆ್ಯಂಡ್ರೀಸ್ ಗೌಸ್ 26 ಎಸೆತಗಳಲ್ಲಿ 35 ರನ್ ಹಾಗೂ ಆ್ಯರೋನ್ ಜೋನ್ಸ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿದರು. ಅಮೆರಿಕ ಪರ ಬೌಲಿಂಗ್’ನಲ್ಲಿ ಮಿಂಚಿದ ಚಿಕ್ಕಮಗಳೂರು ಮೂಲದ ಎಡಗೈ ಸ್ಪಿನ್ನರ್ ನೋಶ್’ತುಷ್ ಕೆಂಜಿಗೆ 4 ಓವರ್’ಗಳಲ್ಲಿ 30 ರನ್ನಿತ್ತು 3 ವಿಕೆಟ್ ಪಡೆದರು.

ಇದನ್ನೂ ಓದಿ : T20 World Cup Nosthush Kenjige: ಅಮೆರಿಕ ಪರ ಆಡುತ್ತಿರುವ ಚಿಕ್ಕಮಗಳೂರು ಪ್ರತಿಭೆಗೆ ‘ನಂದಿನಿ’ ಸ್ಪಾನ್ಸರ್ !

ಮುಂಬೈ ಮೂಲದ ಎಡಗೈ ಮಧ್ಯಮ ವೇಗದ ಬೌಲರ್ ಸೌರಭ್ ನೇತ್ರವಲ್ಕರ್ 18 ರನ್ನಿಗೆ 2 ವಿಕೆಟ್ ಉರುಳಿಸಿದರು. ಅಮೆರಿಕ ಪರ ಆಡುತ್ತಿರುವ ಭಾರತೀಯ ಮೂಲದ ಆಟಗಾರರು ಭರ್ಜರಿ ಪ್ರದರ್ಶನ ತೋರುವ ಮೂಲಕ ಪಾಕಿಸ್ತಾನದ ಸೋಲಿಗೆ ಕಾರಣವಾಗಿದ್ದು ವಿಶೇಷ. ಇದರೊಂದಿಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್’ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೋಲು ಕಂಡರೆ, ಆತಿಥೇಯ ಅಮೆರಿಕ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ICC T20 World Cup 2024 USA Vs Pakistan Nosthush Kenjige the spinner from Chikkamagaluru who plagued Pakistan
Image Credit to Original Source

ಇದನ್ನೂ ಓದಿ : Rohit Sharma 600: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ ಹಿಟ್ ಮ್ಯಾನ್ !

ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಜೂನ್ 12ರಂದು ನಡೆಯುವ ಪಂದ್ಯದಲ್ಲಿ ಅಮೆರಿಕ ತಂಡ ರೋಹಿತ್ ಶರ್ಮಾ ನಾಯಕತ್ವದ ಭಾರತದ ಸವಾಲನ್ನು ಎದುರಿಸಲಿದೆ.

ಇದನ್ನೂ ಓದಿ : Virat Kohli: ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಎಡವಿದ ಕಿಂಗ್ ಕೊಹ್ಲಿ!

ICC T20 World Cup 2024 USA Vs Pakistan Nosthush Kenjige the spinner from Chikkamagaluru who plagued Pakistan

Comments are closed.