ಸೋಮವಾರ, ಏಪ್ರಿಲ್ 28, 2025
HomeSportsCricketSuryakumar Yadav : ಸೂರ್ಯಕುಮಾರ್ ಯಾದವ್ ಬಾರಿಸಿದ ಅದ್ಭುತ ಶಾಟ್‌ ನೋಡಿದ್ರೆ ನೀವೂ ಕ್ಲೀನ್ ಬೌಲ್ಡ್...

Suryakumar Yadav : ಸೂರ್ಯಕುಮಾರ್ ಯಾದವ್ ಬಾರಿಸಿದ ಅದ್ಭುತ ಶಾಟ್‌ ನೋಡಿದ್ರೆ ನೀವೂ ಕ್ಲೀನ್ ಬೌಲ್ಡ್ ಆಗ್ತೀರಿ

- Advertisement -

ಸೇಂಟ್ ಕಿಟ್ಸ್: (amazing shot Suryakumar Yadav )ಕ್ರಿಕೆಟ್ ಜಗತ್ತಿನ 360 ಡಿಗ್ರಿ ಪ್ಲೇಯರ್ ಅಂದ್ರೆ ಅದು ದಕ್ಷಿಣ ಆಫ್ರಿಕಾದ ಎಬಿ ಡಿ’ವಿಲಿಯರ್ಸ್. ಮೈದಾನದ ಪ್ರತೀ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಬಲ್ಲ ತಾಕತ್ತಿನಲ್ಲಿ ಎಬಿಡಿಯನ್ನು ಮೀರಿಸಿದ ದಾಂಡಿಗ ಕ್ರಿಕೆಟ್ ದುನಿಯಾದಲ್ಲಿ ಮತ್ತೊಬ್ಬನಿಲ್ಲ. ಭಾರತ ತಂಡದ ವಿಚಾರಕ್ಕೆ ಬಂದ್ರೆ, ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav ) ಅವರನ್ನು ಭಾರತದ ಎಬಿಡಿ ಎಂದೇ ಕರೆಯಲಾಗುತ್ತಿದೆ.

360 ಡಿಗ್ರಿ ಪ್ಲೇಯರ್ ಆಗಿರುವ ಸೂರ್ಯಕುಮಾರ್ ಯಾದವ್, ವೆಸ್ಟ್ ಇಂಡೀಸ್ (India Vs West Indies T20 Series) ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅದಕ್ಕೆ ತಕ್ಕಂತ ಹೊಡೆತವೊಂದನ್ನು ಬಾರಿಸಿದ್ದಾರೆ. ಭುಜದೆತ್ತರಕ್ಕೆ ಪುಟಿದೆದ್ದು ಬಂದ ವಿಂಡೀಸ್ ವೇಗಿ ಅಲ್ಜಾರಿ ಜೋಸೆಫ್ ಅವರ ಶಾರ್ಟ್ ಪಿಚ್ ಎಸೆತವನ್ನು ಅದ್ಭುತ ಎನ್ನುವ ರೀತಿಯಲ್ಲಿ ವಿಕೆಟ್ ಕೀಪರ್ ತಲೆ ಮೇಲಿಂದ ಬೌಂಡರಿ ಗೆರೆ ದಾಟಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಬಾರಿಸಿದ ಆ ಹೊಡೆತಕ್ಕೆ ಕ್ರಿಕೆಟ್ ಕಾಮೆಂಟೇಟರ್”ಗಳು “ವ್ಹಾವ್” ಎಂದಿದ್ದು, ಆ ಹೊಡೆತ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಪ್ರಿಯರ ಮೆಚ್ಟುಗೆಗೆ ಪಾತ್ರವಾಗಿದೆ.

ಸೇಂಟ್ ಕಿಟ್ಸ್’ನ ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 44 ಎಸೆತಗಳಲ್ಲಿ 88 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 76 ರನ್ ಸಿಡಿಸಿ ಭಾರತಕ್ಕೆ 7 ವಿಕೆಟ್’ಗಳ ಭರ್ಜರಿ ಗೆಲುವು ತಂದುಕೊಟ್ಟರು. ಗೆಲ್ಲಲು 165 ರನ್’ಗಳ ಗುರಿ ಪಡೆದಿದ್ದ ಭಾರತ ಆರಂಭಿಕನಾಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಆಟದ ನೆರವಿನಿಂದ 19 ಓವರ್”ಗಳಲ್ಲಿ 3 ವಿಕೆಟ್ ಒಪ್ಪಿಸಿ ಸುಲಭ ಜಯ ದಾಖಲಿಸಿತು.

ಕೇವಲ 26 ಎಸೆತಗಳಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ 5ನೇ ಅರ್ಧಶತಕ ಪೂರ್ತಿಗೊಳಿಸಿದ ಸೂರ್ಯ, 5 ಪಂದ್ಯದಳ ಸರಣಿಯಲ್ಲಿ ಭಾರತಕ್ಕೆ 2-1ರ ಮುನ್ನಡೆ ತಂದುಕೊಟ್ಟರು. ಅಮೋಘ ಫಾರ್ಮ್’ನಲ್ಲಿರುವ ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್”ಗಳಿದು ಸಿಡಿಲಬ್ಬರದ ಶತಕ ಬಾರಿಸಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯ ಆಗಸ್ಟ್ 6ರದು ನಡೆಯಲಿದೆ.

https://twitter.com/itssamyakk/status/1554533746832842752?s=20&t=rnmOoz2QTHC3plSif60lJw

ಏಷ್ಯಾಕಪ್ ಟಿ20 ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group A
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಸೂಪರ್-4 ಹಂತ
B1 Vs B2: 03 ಸೆಪ್ಟೆಂಬರ್, ಶಾರ್ಜಾ
A1 Vs A2: 04 ಸೆಪ್ಟೆಂಬರ್, ದುಬೈ
A1 Vs B1: 06 ಸೆಪ್ಟೆಂಬರ್, ದುಬೈ
A2 Vs B2: 07 ಸೆಪ್ಟೆಂಬರ್, ದುಬೈ
A1 Vs B2: 08 ಸೆಪ್ಟೆಂಬರ್, ದುಬೈ
B1 Vs A2: 09 ಸೆಪ್ಟೆಂಬರ್, ದುಬೈ

ಫೈನಲ್: 11 ಸೆಪ್ಟೆಂಬರ್, ದುಬೈ
ಪಂದ್ಯಗಳ ಆರಂಭ: ರಾತ್ರಿ 7.30ಕ್ಕೆ (ಭಾರತೀಯ ಕಾಲಮಾನ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್ (Star Sports network)
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್’ಸ್ಟಾರ್ (Disney + Hotstar)

ಏಷ್ಯಾಕಪ್ ಚಾಂಪಿಯನ್ಸ್
ಭಾರತ: 1984, 1988, 1990-91, 1995, 2010, 2016, 2018
ಶ್ರೀಲಂಕಾ: 1986, 1997, 2004, 2008, 2014
ಪಾಕಿಸ್ತಾನ: 2000, 2012

ಇದನ್ನೂ ಓದಿ : Asia Cup 2022 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ : ಟೂರ್ನಿಯ ಫಾರ್ಮ್ಯಾಟ್, ಭಾರತದಲ್ಲಿ Live Streaming, ಒಂದೇ ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Virat Kohli return to Mumbai : ಯುರೋಪ್ ಪ್ರವಾಸದಿಂದ ವಿರಾಟ್ ವಾಪಸ್, ಮಗಳ ಫೋಟೋ ಕ್ಲಿಕ್ಕಿಸಿದವರಿಗೆ ಕೊಹ್ಲಿ ಹೇಳಿದ್ದೇನು ?

IND vs WI T20 If you see the amazing shot played by Suryakumar Yadav, you too will be clean bowled

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular