ಬೆಂಗಳೂರು: (India vs west indies) ಮುಂದಿನ ತಿಂಗಳು ನಡೆಯುವ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ಟೆಸ್ಟ್ ತಂಡದ ಅನುಭವಿ ಮಧ್ಯಮ ಕ್ರಮಾಂಕದ ಬಾಟ್ಸ್’ಮನ್ ಚೇತೇಶ್ವರ್ ಪೂಜಾರ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಯುವ ಆರಂಭಿಕ ಬ್ಯಾಟ್ಸ್’ಮನ್’ಗಳಾದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಇದೇ ಮೊದಲ ಬಾರಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಭಾರತ ಏಕದಿನ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ. ಟಿ20 ಸರಣಿಗೆ ಭಾರತ ತಂಡದ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ನವದೀಪ್ ಸೈನಿ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜೈದೇವ್ ಉನಾದ್ಕಟ್, ಉಮ್ರಾನ್ ಮಲಿಕ್.
ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ (India tour of West Indies 2023 Fixtures)
ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜುಲೈ12-16 (ವಿಂಡ್ಸರ್ ಪಾರ್ಕ್, ಡೊಮಿನಿಕಾ)
ದ್ವಿತೀಯ ಟೆಸ್ಟ್: ಜುಲೈ 20-24 (ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್)
ಏಕದಿನ ಸರಣಿ:
ಮೊದಲ ಏಕದಿನ: ಜುಲೈ 27 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಎರಡನೇ ಏಕದಿನ: ಜುಲೈ 29 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಮೂರನೇ ಏಕದಿನ: ಆಗಸ್ಟ್ 01 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)
ಇದನ್ನೂ ಓದಿ : Will Jacks : ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಬಾರಿಸಿದ ಆರ್‌ಸಿಬಿ ಆಟಗಾರ
ಟಿ20 ಸರಣಿ:
ಮೊದಲ ಟಿ20: ಆಗಸ್ಟ್ 04 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)
ಎರಡನೇ ಟಿ20: ಆಗಸ್ಟ್ 06 (ನ್ಯಾಷನಲ್ ಸ್ಟೇಡಿಯಂ, ಗಯಾನ)
ಮೂರನೇ ಟಿ20: ಆಗಸ್ಟ್ 08 (ನ್ಯಾಷನಲ್ ಸ್ಟೇಡಿಯಂ, ಗಯಾನ)
ನಾಲ್ಕನೇ ಟಿ20: ಆಗಸ್ಟ್ 12 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)
ಐದನೇ ಟಿ20: ಆಗಸ್ಟ್ 13 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)
India vs west indies 2023 : India’s squads for West Indies Tests and ODI series announced