ಅಹಮದಾಬಾದ್ : ಕನ್ನಡಿಗ ಪ್ರಸಿದ್ದ ಕೃಷ್ಣ ಆರ್ಭಟ ಹಾಗೂ ಕೆ.ಎಲ್. ರಾಹುಲ್ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಅದ್ಬುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡಿಸ್ ವಿರುದ್ದದ ಎರಡನೇ ಏಕದಿನ ಪಂದ್ಯವನ್ನು (IND vs WI 2nd ODI) 44 ರನ್‌ಗಳ ಅಂತರದಿಂದ ಜಯಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ಕೈ ವಶ ಮಾಡಿಕೊಂಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿ ಭಾರತ ತಂಡಕ್ಕೆ ರೋಚ್ ಆರಂಭಿಕ ಆಘಾತವನ್ನು ನೀಡಿದ್ರು. ರೋಹಿತ್ ಶರ್ಮಾ ಹಾಗೂ ರಿಷಬ್ ಪಂತ್ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು, ರೋಹಿತ್ ಶರ್ಮಾ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ನಂತರದಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಆಟ ಕೇವಲ 18 ರನ್‌ಗಳಿಗೆ ಕೊನೆಯಾಯ್ತು. ಆದರೆ ಸೂರ್ಯ ಕುಮಾರ್ ಯಾದವ್ ಜೊತೆಗೆ ಇನ್ನಿಂಗ್ಸ್ ಕಟ್ಟಲು ನಿಂತ ಕನ್ನಡಿಗ ರಾಹುಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ 49 ರನ್ ಗಳಿಸಿದ್ದ ವೇಳೆಯಲ್ಲಿ ರಾಹುಲ್ ರನೌಟ್‌ಗೆ ಬಲಿಯಾದ್ರು. ಸೂರ್ಯ ಕುಮಾರ್ ಯಾದವ್ 64, ದೀಪಕ್ ಹೂಡಾ 29 ಹಾಗೂ ವಾಷಿಂಗ್ಟನ್ ಸುಂದರ್ ಅವರ 24 ರನ್ ನೆರವಿನಿಂದ ಭಾರತ ತಂಡ ಅಂತಿಮವಾಗಿ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಗಳಿಸಲಷ್ಟೇ ಶಕ್ತವಾಯಿತು. ವೆಸ್ಟ್ ಇಂಡಿಸ್ ಪರ ಜೋಸೆಫ್ ಹಾಗೂ ಸ್ಮಿತ್ ತಲಾ 2 ವಿಕೆಟ್ ಪಡೆದುಕೊಂಡ್ರೆ, ರೋಚ್, ಹೋಲ್ಡರ್, ಹುಸೈನ್ ಹಾಗೂ ಆಲನ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
ಭಾರತ ನೀಡಿದ್ದ ಗುರಿಯನ್ನು ಬೆನ್ನತ್ತಲು ಹೊರಟ ವೆಸ್ಟ್ ಇಂಡಿಸ್ ತಂಡಕ್ಕೆ ಶಿ ಹೋಪ್ ಹಾಗೂ ಬ್ರಂಡನ್ ಕಿಂಗ್ ಭರ್ಜರಿ ಆರಂಭದ ಭರವಸೆಯನ್ನು ನೀಡಿದ್ರು. 18 ರನ್ ಗಳಿಸಿದ್ದ ವೇಳೆಯಲ್ಲಿ ಬ್ರಂಡನ್ ಕಿಂಗ್ಸ್ ಬಲಿ ಪಡೆದ ಕನ್ನಡಿಗ ಪ್ರಸಿದ್ದ ಕೃಷ್ಣ ನಂತರದಲ್ಲಿ 1 ರನ್ ಗಳಿಸಿದ್ದ ಡ್ಯಾರೆನ್ ಬ್ರಾವೋಗೆ ಫೆವಿಲಿಯನ್ ಹಾದಿ ತೋರಿಸಿದ್ದಾರೆ. ಇನ್ನು ನಿಕೋಲಸ್ ಪೂರಾನಾ ಕೂಡ ಪ್ರಸಿದ್ದ ಕೃಷ್ಣಗೆ ವಿಕೆಟ್ ಒಪ್ಪಿಸಿದ್ರು. ಆದರೆ ಬ್ರೂಕ್ಸ್ ಹಾಗೂ ಹುಸೈನ್ ಭರ್ಜರಿ ಜೊತೆಯಾಟ ನೀಡಿದ್ರು. ಬ್ರೂಕ್ಸ್ 45 ರನ್ ಗಳಿಸಿದ್ರೆ, ಹುಸೈನ್ ೩೪ರನ್ ಗಳಿಸಿದ್ದಾರೆ. ನಂತರದಲ್ಲಿ ಅಲನ್ 13, ಓ ಸ್ಮಿತ್ 24 ರನ್ ಗಳಿಸಿದ್ದಾರೆ. ಅಂತಿಮವಾಗಿ ವೆಸ್ಟ್ ಇಂಡಿಸ್ ತಂಡ 46 ಓವರ್‌ಗಳಲ್ಲಿ ಕೇವಲ 193 ರನ್ ಗಳಿಸಿ ಆಲೌಟ್ ಆಗಿದೆ. ಭಾರತ ಪರ ಪ್ರಸಿದ್ದ ಕೃಷ್ಣ 4, ಶಾರ್ದೂಲ್ ಠಾಕೂರ್ 2 ಹಾಗೂ ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್. ಚಹಾಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡಿದ್ದಾರೆ.
That Winning Feeling! 👏 👏@prasidh43 picks his fourth wicket as #TeamIndia complete a 4⃣4⃣-run win over West Indies in the 2nd ODI. 👍 👍 #INDvWI @Paytm
— BCCI (@BCCI) February 9, 2022
Scorecard ▶️ https://t.co/yqSjTw302p pic.twitter.com/R9KCvpMImH
ಇದನ್ನೂ ಓದಿ : Ranji trophy : ರಣಜಿ ಟ್ರೋಫಿಗೆ ಕೇರಳ ತಂಡ ಪ್ರಕಟ, ಶ್ರೀಶಾಂತ್ ಇನ್, ಸಂಜು, ಉತ್ತಪ್ಪ ಔಟ್
ಇದನ್ನೂ ಓದಿ : ಆರ್‌ಸಿಬಿ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ : ಆರಂಭಿಕರಾಗಿ ಡೇವಿಡ್ ವಾರ್ನರ್ ಮತ್ತು ಶಿಖರ್ ಧವನ್, ಹೇಗಿದೆ ಗೊತ್ತಾ ಪ್ಲೇಯಿಂಗ್ XI
(India vs West Indies 2nd ODI: India win by 44 runs to win series, Prasidh Krishna get 4 wickets)