ಲಂಡನ್: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್”ಮನ್ ರಿಷಬ್ ಪಂತ್ (India wicket Keeper Batsman Rishabh Pant) ಸ್ಫೋಟಕ ಆಟಕ್ಕೆ ಹೆಸರುವಾಸಿ. ಮೈದಾನದಲ್ಲಿ ರಿಷಬ್ ಪಂತ್ ಅವರ ಅಬ್ಬರದ ಆಟ, ವಿಕೆಟ್ ಹಿಂದೆ ನಿಂತು ಮಾಡುವ ಕೀಟಲೆಗಳನ್ನು ಕ್ರಿಕೆಟ್ ಪ್ರಿಯರು ನೋಡಿದ್ದಾರೆ. ಮೈದಾನದ ಹೊರಗೆ ರಿಷಬ್ ಪಂತ್ ಒಬ್ಬ(Rishabh Pant helps a beggar) ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ ಎಂಬುದಕ್ಕೆ ಇದು ಒಳ್ಳೆಯ ನಿದರ್ಶನ.
ಭಾರತ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಆತಿಥೇಯ ಇಂಗ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾಗಲಿರುವ 5ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಟೀಮ್ ಇಂಡಿಯಾ ಪರ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಲಿರುವ ಉಪನಾಯಕ ರಿಷಬ್ ಪಂತ್, ಬುಧವಾರ ರಾತ್ರಿ ಬರ್ಮಿಂಗ್’ಹ್ಯಾಮ್”ನಲ್ಲಿ ವಿಶೇಷ ಘಟನೆಯೊಂದರ ಮೂಲಕ ಸುದ್ದಿಯಾಗಿದ್ದಾರೆ.
ಬುಧವಾರ ರಾತ್ರಿ ರಿಷಬ್ ಪಂತ್ ಊಟಕ್ಕೆಂದು ಬರ್ಮಿಂಗ್”ಹ್ಯಾಮ್”ನ ಹೋಟೆಲ್ ಒಂದಕ್ಕೆ ತೆರಳಿದ್ದಾರೆ. ಊಟ ಮಾಡಿ ಬರ್ಮಿಂಗ್’ಹ್ಯಾಮ್ ಸ್ಟ್ರೀಟ್”ನಲ್ಲಿ ಹೆಜ್ಜೆ ಹಾಕುತ್ತಿರುವಾಗ ಅಲ್ಲೇ ಪಕ್ಕದ ಸೇತುವೆ ಕೆಳಗೆ ಕುಳಿತಿದ್ದ ವ್ಯಕ್ತಿಯೊಬ್ಬನನ್ನು ನೋಡಿದ್ದಾರೆ. ಹಸಿದ ಹೊಟ್ಟೆಯಲ್ಲಿ ಕೂತಿದ್ದ ಆ ವ್ಯಕ್ತಿಯ ಬಳಿ ಹೋದ ರಿಷಬ್ ಪಂತ್, ಆತನಿಗೆ ಆಹಾರ ನೀಡಿದ್ದಾರೆ. ಅಷ್ಟೇ ಅಲ್ಲ, “ಇನ್ನೇನಾದರೂ ಸಹಾಯ ಬೇಕಿದ್ದರೆ ಕೇಳಿ” ಎಂದು ಆ ವ್ಯಕ್ತಿಗೆ ಹೇಳಿದ್ದಾರೆ (Rishabh Pant helps a begger in Engalnd). ಈ ಘಟನೆಯನ್ನು ಕಣ್ಣಾರೆ ಕಂಡಿರುವ ಧ್ರುವ್ ಮಠಾಡೆ ಎಂಬವರು ಈ ಬಗ್ಗೆ ಟ್ವಿಟರ್”ನಲ್ಲಿ ಬರೆದುಕೊಂಡಿದ್ದಾರೆ.
ಧ್ರುವ್ ಮಠಾಡೆ ಮತ್ತವರ ಸ್ನೇಹಿತರು ರಿಷಬ್ ಪಂತ್ ಬಳಿ ಸೆಲ್ಫಿ ಕೇಳಿದಾಗ, “ಒಂದು ನಿಮಿಷ ಇರಿ ವಾಪಸ್ ಬರುತ್ತೇನೆ” ಎಂದು ಹೇಳಿ ಭಿಕ್ಷುಕನತ್ತ ತೆರಳಿದ ರಿಷಬ್ ಪಂತ್, ಆತನಿಗೆ ಆಹಾನ ನೀಡಿ ಮಾನವೀಯತೆ ಮೆರೆದಿದ್ದಾರೆ.
24 ವರ್ಷದ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ. ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ ಕೋವಿಡ್”ನಿಂದ ಚೇತರಿಸಿಕೊಳ್ಳದೇ ಇದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ, ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : ನಿನ್ನನ್ನು ನೋಡಿ ಖುಷಿಯಾಗುತ್ತಿದೆ..” ಸಚಿನ್ ಪುತ್ರನ ಬಗ್ಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಹೀಗೆ ಹೇಳಿದ್ದೇಕೆ ?
ಇದನ್ನೂ ಓದಿ : ಇಂದಿನಿಂದ ಇಂಡಿಯಾ Vs ಇಂಗ್ಲೆಂಡ್ 5ನೇ ಟೆಸ್ಟ್: ಇಲ್ಲಿದೆ ಟೀಮ್ ಇಂಡಿಯಾದ ಸಂಭಾವ್ಯ Playing XI
India wicket Keeper Batsman Rishabh Pant helps a beggar in England