ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನ 8ನೇ ಪಂದ್ಯದಲ್ಲಿ ಯುವ ಆಟಗಾರ ಶುಭಮ್ ಗಿಲ್ ಅದ್ಬುತ್ ಬ್ಯಾಟಿಂಗ್ ನೆರೆವಿನಿಂದ ಕೋಲ್ಕತಾ ನೈಟ್ ರೈಡರ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದ್ರಾಬಾದ್ ತಂಡ ಕನ್ನಡಿಗ ಮನೀಷ್ ಪಾಂಡೆ (51ರನ್, 38 ಎಸೆತ, 3 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಲವಾಗಿ 4 ವಿಕೆಟ್‌ಗೆ 142 ರನ್ ಕಲೆಹಾಕಿತು.

ಡೇವಿಡ್ ವಾರ್ನರ್ (36), ಮನೀಶ್ ಪಾಂಡೆ (51) ಹಾಗೂ ವೃದ್ದಿಮಾನ್ ಸಹಾ (30) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆದರೆ ಯುವ ಆಟಗಾರ ಶುಭಮ್ ಗಿಲ್ ಅದ್ಬುತ್ ಬ್ಯಾಟಿಂಗ್ ತಂಡಕ್ಕೆ ನೆರವಾಯ್ತು.

ಕೆಕೆಆರ್ ಪರ ಶುಭಮ್ ಗಿಲ್ (70) ಮಾರ್ಗನ್ (42) ಹಾಗೂ ನಿತೀಶ್ ರಾಣಾ (26) ರನ್ ಗಳಿಸಿ ಗಮನ ಸೆಳೆದಿದ್ದರು. 18 ಓವರ್‌ಗಳಲ್ಲಿ 3 ವಿಕೆಟ್‌ಗೆ 145 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಕೆಕೆಆರ್ ನ ಪ್ಯಾಟ್ ಕಮ್ಮನ್ಸ್, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರೆಸೆಲ್ ತಲಾ ಒಂದು ವಿಕೆಟ್ ಕಬಳಿಸಿದ್ದರೆ ಹೈದರಾಬಾದ್ ಪರ ಖಲೀಲ್ ಅಹಮದ್, ಟಿ. ನಟರಾಜನ್ ಹಾಗೂ ರಶೀದ್ ಕಾನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.