ಬೆಂಗಳೂರು : ಭಾರತ ಕ್ರಿಕೆಟ್ ತಂಡದ 2023-24ನೇ ಸಾಲಿನ ತವರು ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ (BCCI announces fixtures for International Home Season 2023-24). ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಹೊರತಾಗಿ ಭಾರತ ತಂಡ 2023-24ನೇ ಸಾಲಿನಲ್ಲಿ ಸದ್ಯದ ವೇಳಾಪಟ್ಟಿ ಪ್ರಕಾರ ತವರು ನೆಲದಲ್ಲಿ 4 ಸರಣಿಗಳನ್ನಾಡಲಿದೆ.
ಐಸಿಸಿ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ತಂಡ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಭಾರತದ ತವರು ಸರಣಿಗಳಲ್ಲಿ ಬೆಂಗಳೂರಿಗೆ ಒಂದು ಪಂದ್ಯದ ಆತಿಥ್ಯ ಸಿಕ್ಕಿದೆ. ಮುಂದಿನ ವರ್ಷದ ಜನವರಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯ ಜನವರಿ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ಕ್ರಿಕೆಟ್ ತಂಡದ 2023-24ನೇ ಸಾಲಿನ ತವರು ವೇಳಾಪಟ್ಟಿ :
(India’s International Home Season 2023-24)
ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ:
ಮೊದಲ ಏಕದಿನ: ಸೆಪ್ಟೆಂಬರ್ 22 (ಮೊಹಾಲಿ)
2ನೇ ಏಕದಿನ: ಸೆಪ್ಟೆಂಬರ್ 24(ಇಂದೋರ್)
ಮೊದಲ ಏಕದಿನ: ಸೆಪ್ಟೆಂಬರ್ 27 (ರಾಜ್’ಕೋಟ್)
ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ:
ಮೊದಲ ಟಿ20: ನವೆಂಬರ್ 23 (ವಿಶಾಖಪಟ್ಟಣ)
2ನೇ ಟಿ20: ನವೆಂಬರ್ 26(ತಿರುವನಂತಪುರಂ)
3ನೇ ಟಿ20: ನವೆಂಬರ್ 28 (ಗುವಾಹಟಿ)
4ನೇ ಟಿ20: ಡಿಸೆಂಬರ್ 01 (ನಾಗ್ಪುರ)
5ನೇ ಟಿ20: ಡಿಸೆಂಬರ್ 03 (ಹೈದರಾಬಾದ್)
ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿ:
ಮೊದಲ ಟಿ20: ಜನವರಿ 11 (ಮೊಹಾಲಿ)
2ನೇ ಟಿ20: ಜನವರಿ 14 (ಇಂದೋರ್)
3ನೇ ಟಿ20: ಜನವರಿ 17 (ಬೆಂಗಳೂರು)
ಇದನ್ನೂ ಓದಿ : Rohit Sharma : ನಾಳೆಯಿಂದ ಇಂಡಿಯಾ-ವಿಂಡೀಸ್ ಏಕದಿನ ಸರಣಿ, 193 ರನ್ ಬಾರಿಸಿದ್ರೆ ರೋ”ಹಿಟ್” ಗ್ರೇಟ್ ಓಪನರ್
ಇದನ್ನೂ ಓದಿ : Vidwath Kaverappa : ದೇಶೀಯ ಕ್ರಿಕೆಟ್’ನಲ್ಲಿ ಕೊಡಗಿನ ವೀರನ ರಣಾರ್ಭಟ, ಟೀಮ್ ಇಂಡಿಯಾ ಬಾಗಿಲು ಸದ್ಯದಲ್ಲೇ ಓಪನ್!
ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜನವರಿ 25-29 (ಹೈದರಾಬಾದ್)
2ನೇ ಟೆಸ್ಟ್: ಫೆಬ್ರವರಿ 02-06 (ವಿಶಾಖಪಟ್ಟಣ)
3ನೇ ಟೆಸ್ಟ್: ಫೆಬ್ರವರಿ 15-19 (ರಾಜ್’ಕೋಟ್)
4ನೇ ಟೆಸ್ಟ್: ಫೆಬ್ರವರಿ 23-27 (ರಾಂಚಿ)
5ನೇ ಟೆಸ್ಟ್: ಮಾರ್ಚ್ 07-11 (ಧರ್ಮಶಾಲಾ)
India’s International Home Season 2023-24 : India’s blockbuster home schedule announced, Team India faces big challenge in 2023-24